ಮರಕ್ಕೆ ಡಿಕ್ಕಿಯಾದ ಕಾರು: ಅಮೆರಿಕದಲ್ಲಿ ಮೂವರು ಭಾರತೀಯ ಮಹಿಳೆಯರ ಸಾವು..

Washington News: ಅಮೆರಿಕದ ವಾಷಿಂಗ್ಟನ್‌ಲ್ಲಿ ಕಾರೊಂದು ಮರಕ್ಕೆ ಅಪ್ಪಳಿಸಿದ್ದು, ಅದರಲ್ಲಿದ್ದ ಗುಜರಾತ್‌ನ ಮೂರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೇನ್ ಪಟೇಲ್, ಮನಿಷಾಬೆನ್ ಪಟೇಲ್, ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಯಾಕೆ ಕಾರು ಬಂದು ಮರಕ್ಕಪ್ಪಳಿಸಿದೆ ಎಂದು ನೋಡಿದಾಗ, ಕಾರಿನ ವೇಗ ಹೆಚ್ಚಾಗಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ. ಅಲ್ಲದೇ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಅಲ್ಲಿ ಯಾವುದೇ ಬೇರೆ ವಾಹನ ಓಡಾಡಿಲ್ಲ. ಹಾಗಾಗಿ ಗಾಡಿ ಓಡಿಸುತ್ತಿರುವ ತಪ್ಪಿನಿಂದಾಗಿಯೇ ಈ ಸಾವು ಸಂಭವಿಸಿದೆ ಎಂದು ಅಲ್ಲಿ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಕಾರು ಮರದ ಮೇಲೆ ಸಿಲುಕಿದ್ದು, ನುಜ್ಜುಗುಜ್ಜಾಗಿದೆ. ಅಲ್ಲದೇ, ಕಾರ್ ಬರುವಾಗ ಹಲವು ಕಡೆ ಡಿಕ್ಕಿ ಹೊಡೆದ ಸೂಚನೆಯೂ ಸಿಕ್ಕಿದೆ.

ಮದುವೆ ಬಳಿಕವೂ ನಟನೆ ಮುಂದುವರಿಸುತ್ತೇನೆ: ನಟಿ ಮಾನ್ವಿತಾ ಕಾಮತ್

ಕೇಂದ್ರ ಸರ್ಕಾರ ಒಲ್ಲದ ಮನಸ್ಸಿನಿಂದ ಕರ್ನಾಟಕಕ್ಕೆ ಬರ ಪರಿಹಾರ ನೀಡಿದೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಅಭ್ಯರ್ಥಿ ಇ ತುಕಾರಂ ಪರ ಮತಯಾಚನೆ: ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ

About The Author