Tumakuru News: ತುಮಕೂರು: ತುಮಕೂರಿನ ಮಾರ್ಕೋನಹಳ್ಳಿ ಡ್ಯಾಂನ ಕೋಡಿಯಲ್ಲಿ 7 ಮಂದಿ ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಕೂಡ ಮೃತದೇಹಗಳ ಶೋಧಕಾರ್ಯ ಮುಂದುವರೆದಿದೆ.
ಇಂದು ನಾಲ್ಕು ವರ್ಷದ ಮಗು ಮಿಫ್ರಾ ಮೃತದೇಹ, ಕೋಡಿಯಲ್ಲಿ ಹರಿಯುತ್ತಿದ್ದ ನದಿ ದಡದಲ್ಲಿ ಪತ್ತೆಯಾಗಿದೆ. ಇನ್ನು 3 ಮೃತದೇಹ ಪತ್ತೆಯಾಗುವುದು ಬಾಕಿ ಇದ್ದು, ಅದಕ್ಕಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶೋಧಕಾರ್ಯ ಮುಂದುವರೆದಿದೆ.
ಇನ್ನು ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ತುಮಕೂರು ಎಸ್ಪಿ ಅಶೋಕ್ ವೆಂಕಟ್, ನೆನ್ನೆ ಮಧ್ಯಾಹ್ನ 3.30ಕ್ಕೆ ಒಂದೇ ಕುಟುಂಬದ 6 ಜನ ನೀರಿನಲ್ಲಿ ಕೊಚ್ಚಿ ಹೊಗಿದ್ದರು. ಮೃತರೆಲ್ಲರೂ ತುಮಕೂರು ಜಿಲ್ಲೆಯವರು. ಘಟನೆ ಮಂಡ್ಯ ಜಿಲ್ಲೆ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎರಡು ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ನಡೆಸುತ್ತಿದ್ದೇವೆ. ಈಗ ಕತ್ತಲೆಯಾಗಿರುವ ಕಾರಣ ಕಾರ್ಯಾಚರಣೆ ಬೆಳಗ್ಗೆ ಮಾಡಲಾಗುತ್ತದೆ.
ಇಂದು ರಜೆಯ ಕಾರಣ ತುಮಕೂರಿನ ಮಂದಿ ಮಾರ್ಕೋನಹಳ್ಳಿ ಡ್ಯಾಂಗೆ ಪಿಕ್‌ನಿಕ್‌ಗಾಗಿ ಹೋಗಿದ್ರು. ಈ ವೇಳೆ ಸ್ಟೈಫನ್ ಓಪನ್ ಆಗಿ ಒಮ್ಮೊಲೆ ಹೆಚ್ಚು ನೀರು ಬಂದಿದೆ. ನೀರಿನ ರಭಸಕ್ಕೆ ನೀರಿನಲ್ಲಿ ಆಟ ಆಡ್ತಿದ್ದಂತಹ 7 ಮಂದಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಒಬ್ಬರನ್ನ ರಕ್ಷಣೆ ಮಾಡಿ, ಚುಂಚನಗಿರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲದೆ, ಮೃತ ದೇಹಗಳನ್ನೂ ಕೂಡ ಚುಂಚನಗಿರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದಿದ್ದಾರೆ.