Thursday, November 21, 2024

Latest Posts

ಅಪ್ರಾಪ್ತೆ ಚುಡಾಯಿಸಿದ ಕೇಸ್: ಕೆಲವೇ ಗಂಟೆಗಳಲ್ಲಿ ಪುಂಡರ ಹೆಡೆಮುರಿ ಕಟ್ಟಿದ ಹಳೇ ಹುಬ್ಬಳ್ಳಿ ಪೊಲೀಸರು

- Advertisement -

Hubli news: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಕೃತ್ಯವೆಸಗಿದ್ದ ಪುಂಡರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶರಾವತಿ ನಗರದಲ್ಲಿ ಈ ಘಟನೆ ನಡೆದಿತ್ತು. ಅಪ್ರಾಪ್ತ ಬಾಲಕಿಯೊಬ್ಬಳನ್ನ ದ್ವೀಚಕ್ರ ವಾಹನದ‌ ಮೂಲಕ ಹಿಂಬಾಲಿಸಿದ್ದ ಬೀದಿ ಕಾಮಣ್ಣರು, ಆಕೆಗೆ ಚುಡಾಯಿಸಿದ್ದರು. ಈ ಕೃತ್ಯ ಅಲ್ಲೇ ಇದ್ದ ಸಿಸಿಟಿವಿ ವಾಹನದಲ್ಲಿ ಸೆರೆಯಾಗಿತ್ತು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ತನಿಖೆ ನಡೆಸಿ, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪುಂಡರನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಹಳೇಹುಬ್ಬಳ್ಳಿಯ ಅಯೋಧ್ಯೆ ನಗರದ ನಿವಾಸಿಗಳಾದ ಶುಭಂ ತಡಸ, ಮೆಹಬೂಬ್ ಹಿತ್ತಲಮನಿ ಎಂದು ಗುರುತಿಸಲಾಗಿದೆ. ಇವರಿಂದ ಆರು ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇನ್ನು ಇಬ್ಬರು ಆರೋಪಿಗಳಿಗೆ ಸಹಕರಿಸಿದ ಸಾಗರ ಸಾತಪುತೆ, ಶ್ರೀವತ್ಸವ ಬೆಂಡಿಗೇರಿ, ಸಚಿನ ನರೇಂದ್ರ ಎಂಬಾರನ್ನು ಬಂಧಿಸಲಾಗಿದೆ.

ಇನ್ನು ಶುಭಂ ತಡಸ ಎಂಬಾತನ ವಿರುದ್ಧ ಕಸಬಾಪೇಟೆ ಮತ್ತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಎರಡು ಪ್ರಕರಣಗಳು ದಾಖಲಾಗಿವೆ. ಸಾಗರ ಸಾತಪುತೆ ಎಂಬಾತನ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಸಚಿನ ನರೇಂದ್ರ ಎಂಬಾತನ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.‌

ಸದ್ಯ ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಎಚ್.ಯಳ್ಳುರ, ಪಿಎಸ್ಐ ರುದ್ರಪ್ಪ ಗುಡದರಿ, ಎಎಸ್ಐ ಪಿ.ಬಿ.ಕಾಳೆ ಮತ್ತು ಸಿಬ್ಬಂದಿಗಳಾದ ಫಕ್ಕಿರೇಶ ಗೊಬ್ಬರಗುಂಪಿ, ಅಭಯ ಕಟ್ನಳ್ಳಿ, ನಾಗರಾಜ್ ಕೆಂಚಣ್ಣನವರ, ಕೃಷ್ಣಾ ಮೋಟೆಬೆನ್ನೂರ, ಸಂತೋಷ ವಲ್ಯಾಪೂರ, ರಮೇಶ ಹಲ್ಲೆ, ಕಲ್ಲನಗೌಡ ಗುರನಗೌಡ, ವಿಠಲ ಹೊಸಳ್ಳಿ, ಜಗದೇಶ ಗೌಂಡಿ ಸೇರಿದಂತೆ ಮುಂತಾದವರು ಇದ್ದಾರೆ.

ಬೀದಿಕಾಮಣ್ಣರಿಗೆ ಕಾನೂನು ಎಚ್ಚರಿಕೆ ನೀಡಿದ ಕಮಿಷನರ್: ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣ ದಾಖಲಾಗಿದೆ. 14 ವರ್ಷದ ಬಾಲಕಿ ಶಾಲೆಯನ್ನು ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಕಿಡಿಗೇಡಿಗಳಿಬ್ಬರು ಬೈಕ್ ಮೇಲೆ ಬಂದಿದ್ದಲ್ಲೇ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದರು. ಈ ಕುರಿತು ಸಿಸಿಕ್ಯಾಮಾರದಲ್ಲಿ ದೃಶ್ಯಾವಳಿಗಳು ಸೆರೆಯಾಗಿದ್ದವು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಬಳಿಕ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಬಿ.ಎನ್.ಎಸ್ ಮತ್ತು ಪೋಕ್ಸೋ ಕಾಯ್ದೆ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.

ಇನ್ನೂ ನಗರದ ಶಾಲೆ-ಕಾಲೇಜು, ಮಾರುಕಟ್ಟೆ, ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ ತೋರುವ ದುಷ್ಟರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು. ಮಹಿಳೆ ಅಥವಾ ಮಕ್ಕಳು ದೂರು ದಾಖಲಿಸಲು ಹಿಂದೆಟ್ಟು ಹಾಕಿದರೇ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ದವಾಗಿದೆ‌. ಸಾರ್ವಜನಿಕರು ಕೂಡಾ ಇಂತಹ ಪ್ರಕರಣ ಗಮನಕ್ಕೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತವರ ಮಾಹಿತಿಯನ್ನು ಗೌಪ್ಯವಾಗಿಟ್ಟು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಖಡಕ್ ಎಚ್ಚರಿಕೆ ನೀಡಿದರು.

- Advertisement -

Latest Posts

Don't Miss