ರೌಡಿ ಬಿಕ್ಲು ಶಿವ ಕೊಲೆ ಕೇಸ್‌ನಲ್ಲಿ ಬೈರತಿ ಬಸವರಾಜ್‌ಗೆ ಬಂಧನದ ಭೀತಿ ಶುರುವಾಗಿದೆ. ಬೈರತಿ ಬಸವರಾಜ್‌ಗೆ ಬಂಧನದಿಂದ ರಕ್ಷಣೆ ನೀಡಲು ಕೋರ್ಟ್ ನಿರಾಕರಿಸಿದೆ. ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ನೀಡುವಂತೆ ಬೈರತಿ ಬಸವರಾಜ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತು ವಿಚಾರಣಾ ನ್ಯಾಯಾಲಯದಲ್ಲೇ ಸೂಕ್ತ ಅರ್ಜಿ ಸಲ್ಲಿಸುವಂತೆ...
ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ರಿಲೀಫ್ ಸಿಕ್ಕಿದೆ. ಮೊದಲ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಸೇರಿದಂತೆ ಹಾಸ್ಟೆಲ್ ವಾರ್ಡನ್ ರಶ್ಮಿ, ಮಠದ ಮ್ಯಾನೇಜರ್ ಪರಮಶಿವಯ್ಯರನ್ನ, ನಿರ್ದೋಷಿ ಎಂದು, ಚಿತ್ರದುರ್ಗದ 2ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಶ್ರೀಗಳಿಗೆ ಕ್ಲೀನ್‌ಚಿಟ್ ಕೊಟ್ಟಿದೆ.
2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುರುಘಾ...
ಚಿತ್ರದುರ್ಗದ ಮುರುಘಾಶ್ರೀ ಬಿಡುಗಡೆಯೋ, ಬಂಧನವೋ ಅನ್ನೋದು ಇಂದು ನಿರ್ಧಾರ ಆಗಲಿದೆ. ಪೋಕ್ಸೋ ಕೇಸ್ ಅಂತಿಮಘಟ್ಟಕ್ಕೆ ಬಂದು ತಲುಪಿದ್ದು, ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದಲ್ಲಿ ತೀರ್ಪು ಹೊರಬೀಳಲಿದೆ. ಹೀಗಾಗಿ ಮುರುಘಾಶ್ರೀ ಸೇರಿದಂತೆ ಬೆಂಬಲಿಗರು ಹಾಗೂ ಭಕ್ತರಲ್ಲಿ ಟೆನ್ಶನ್ ಶುರುವಾಗಿದೆ. ಹಾಗೆಯೇ ಸಂತ್ರಸ್ತೆಯರ ಕುಟುಂಬದಲ್ಲೂ ಆತಂಕ ಮನೆ ಮಾಡಿದ್ದು, ಎಲ್ಲರಚಿತ್ತ ನ್ಯಾಯಾಲಯದ ತೀರ್ಪಿನತ್ತ...
ಸುಪ್ರೀಂಕೋರ್ಟಿನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಹಿಂದಿನ ಸಿಜೆಐ ಬಿಆರ್ ಗವಾಯಿ ಅವರು ನಿನ್ನೆ ನಿವೃತ್ತರಾಗಿದ್ದಾರೆ. ಅವರ ಸ್ಥಾನಕ್ಕೆ 63 ವರ್ಷದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನ ಆಯ್ಕೆ ಮಾಡಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದ್ರು.
1962ರ ಫೆಬ್ರವರಿ 10ರಂದು ಜನಿಸಿದ...
ಪರಪ್ಪನ ಅಗ್ರಹಾರ ಜೈಲಿನಲ್ಲಿನ ಕೈದಿಗಳ ಕುರಿತು ಹಲವು ಆರೋಪಗಳು ಕೇಳಿಬಂದಿವೆ. ಕೈದಿಗಳ ಡ್ಯಾನ್ಸ್ ವೀಡಿಯೋ ಜೊತೆಗೆ ಜೈಲಿನಲ್ಲಿದ್ದ ಕೈದಿಗಳು ಕೈಯಲ್ಲಿ ಮೊಬೈಲ್ ಹಿಡಿದು, ಐಷಾರಾಮಿ ಜೀವನ ನಡೆಸುತ್ತಿದ್ದ ವೀಡಿಯೋಗಳು ವೈರಲ್ ಆಗಿದ್ದವು. ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಿಸಿದ ವೀಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆ, ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಈ ಎಲ್ಲಾ...
ದೆಹಲಿ ಕೆಂಪು ಕೋಟೆ ಬಳಿಯ ಸ್ಫೋಟ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಇಬ್ಬರು ಶಂಕಿತರ ವಿಚಾರಣೆ ನಡೆಸುವಾಗ, ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕೆಂಪುಕೋಟೆಯನ್ನು ಗುರಿಯಾಗಿಸಿಕೊಂಡು, ದಾಳಿ ನಡೆಸುವುದು ಉಗ್ರರ ಯೋಜನೆಯಾಗಿತ್ತಂತೆ.
ಪ್ರಮುಖ ಆರೋಪಿ ಮುಜಮ್ಮಿಲ್ ತನಿಖಾಧಿಕಾರಿಗಳ ಎದುರು ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾನೆ. ಆ ಪ್ರದೇಶದಲ್ಲಿ ನಡೆದ ಸ್ಫೋಟಕ್ಕೂ ಮೊದಲು...
ಪರಪ್ಪನ ಅಗ್ರಹಾರ ಜೈಲಿನ ರಾಜಾತಿಥ್ಯ ವಿಡಿಯೋ ರಿಲೀಸ್ ವಿಚಾರವನ್ನು, ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ಕಾರಾಗೃಹ ಇಲಾಖೆ ಕಚೇರಿಯಲ್ಲಿ ಗೃಹ ಸಚಿವ ಪರಮೇಶ್ವರ್ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಡಿಜಿಪಿ ಎಂ.ಎ. ಸಲೀಂ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ ಶರತ್ ಚಂದ್ರ, ಗೃಹ ಇಲಾಖೆ ಕಾರ್ಯದರ್ಶಿ ತುಷಾರ್ ಗಿರಿನಾಥ್ ಭಾಗಿಯಾಗಿದ್ದಾರೆ. ಪರಪ್ಪನ...
ಸ್ನೇಹಿತೆಯ ಅಣ್ಣನನ್ನೇ ಪ್ರೀತಿಸುತ್ತಿದ್ದ ಯುವತಿ ಗರ್ಭಿಣಿಯಾಗಿದ್ಲು. ಮದುವೆಯಾಗುವಂತೆ ಕೇಳಿದ್ರೆ ಪ್ರೇಮಿ ನಿರಾಕರಿಸಿದ್ದಾನೆ. ಇದರಿಂದ ಮರ್ಯಾದೆಗೆ ಹಂಜಿದ ಯುವತಿ ಸಾವಿನ ದಾರಿ ಹಿಡಿದಿದ್ದಾಳೆ.
ಪ್ರೇಮಿಯ ಬಣ್ಣದ ಬಣ್ಣ ಮಾತಿಗೆ ಮರಳಾಗಿ ಆತನ ಜೊತೆ ಯುವತಿ ಬೆರೆತುಹೋಗಿದ್ಲು. ಇದಕ್ಕೆ ಸಾಕ್ಷಿಯಾಗಿ ಒಡಲಲ್ಲಿ ಕುಡಿಯೊಂದು ಜೀವ ತಳೆದಿತ್ತು. ಈ ವಿಷಯವನ್ನ ಪ್ರೇಮಿಯ ಜೊತೆ ಹೇಳಿಕೊಂಡು, ಮದುವೆಯಾಗುವಂತೆ ಯುವತಿ ಕೇಳಿದ್ಲು. ಜೊತೆಗಿರುವಷ್ಟು...
ಭೂ ನೋಂದಣಿ ಮತ್ತು ಭೂ ಮಾಲೀಕತ್ವ ರಚನೆಯಲ್ಲಿ ಮೂಲಭೂತ ಸುಧಾರಣೆಗಳಿಗೆ, ಸುಪ್ರೀಂಕೋರ್ಟ್ ಕರೆ ನೀಡಿದೆ. ಬ್ರಿಟಿಷ್ ರಾಜ್ ಕಾಲದ ಕಾನೂನುಗಳನ್ನು ಆಧರಿಸಿದ ಪ್ರಸ್ತುತ ಚೌಕಟ್ಟು ಗೊಂದಲ, ಅದಕ್ಷತೆ ಮತ್ತು ವ್ಯಾಪಕ ಮೊಕದ್ದಮೆಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಮತ್ತು ಹೊಸ ರೀತಿಯ ಕಾನೂನುಗಳನ್ನು ರೂಪಿಸುವಂತೆ ತಾಕೀತು ಮಾಡಿದೆ.
ಈ ಸಮಸ್ಯೆಗಳನ್ನು ಪರಿಹರಿಸಲು ಬ್ಲಾಕ್‌ಚೈನ್‌ನಂತಹ ತಂತ್ರಜ್ಞಾನಗಳನ್ನು ಬಳಸುವುದನ್ನು ಸರ್ಕಾರ...
ಸವಿತಾ ಸಮಾಜದ ವಿರುದ್ಧ ಅವಹೇಳನಕಾರಿ ಪದಬಳಕೆ ಮಾಡಿರುವ ಆರೋಪದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಮುರುಗೇಶ್ ಮೊದಲಿಯಾರ್ ದೂರಿನನ್ವಯ, ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 17ರಂದು ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿಗೆ ಎಂಎಲ್‌ಸಿ ಸಿ.ಟಿ. ರವಿ ಭೇಟಿ ಕೊಟ್ಟಿದ್ರು. ಆ ವೇಳೆ ಡೀನ್ ಇರದಿದ್ದಕ್ಕೆ ಸಿಟ್ಟಾಗಿದ್ದ ಸಿ.ಟಿ....