Tuesday, July 21, 2026

ರಾಜ್ಯ ಸರ್ಕಾರ

GST ಸಂಗ್ರಹದಲ್ಲಿ ಕರ್ನಾಟಕದ ದಾಖಲೆ

ದಸರಾ ಹಬ್ಬದ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲಿ, ಕರ್ನಾಟಕ ಹೊಸ ದಾಖಲೆ ಮಾಡಿದೆ. ಸೆಪ್ಟೆಂಬರ್​ ಅವಧಿಯಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳವಾಗಿದ್ದು, ದಸರಾ ಹಬ್ಬದ ಖರೀದಿ ಜೋರಾಗಿ ನಡೆದಿದೆ. ಜಿಎಸ್‌ಟಿ ದರದಲ್ಲಿ ಕಡಿತದ ಬಳಿಕ ಬೆಲೆಗಳಲ್ಲಿ ಭಾರಿ ಇಳಿಕೆ ಹಿನ್ನೆಲೆ, ಜನರು ಖರೀದಿಗೆ ಮುಂದಾಗಿದ್ದಾರೆ. ಪರಿಣಾಮ ತೆರಿಗೆ ಆದಾಯದಲ್ಲಿ ಹೆಚ್ಚಳ...

ಅಧಿಕಾರಿಗಳಿಗೆ ಜಿ. ಪರಮೇಶ್ವರ್‌ ಫುಲ್‌ ಚಾರ್ಜ್‌!

ತುಮಕೂರು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ವಿಚಾರ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದೆ. ಶಾಲಾ ಶಿಕ್ಷಣ ಇಲಾಖೆಯ ಇಬ್ಬರು ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಶೀಲಾ ಹಾಲ್ಕುರಿಕೆ ಸಾಮಾಜಿಕ ಕಾರ್ಯಕರ್ತೆ & ರಂಗಭೂಮಿ ನಟಿ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ರು. ಉಸ್ತುವಾರಿ ಸಚಿವರೂ ಆಗಿರುವ ಸಚಿವ ಜಿ. ಪರಮೇಶ್ವರ್, ಜಿಲ್ಲೆಯ...

ಬೆಳಗಾವಿಯಲ್ಲಿ ಕುದಿಯುತ್ತಿದೆ ಕಬ್ಬಿನ ಜ್ವಾಲೆ

ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ, 7ನೇ ದಿನಕ್ಕೆ ಕಾಲಿಟ್ಟಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ, ಅಹೋರಾತ್ರಿ ಹೋರಾಟ ಮುಂದುವರೆದಿದೆ. ರಾಜ್ಯ ಬಿಜೆಪಿ ನಾಯಕರೂ ಕೂಡ ಪ್ರತಿಭಟನೆಗೆ ಸಾಥ್‌ ಕೊಟ್ಟಿದ್ದು, ನಿನ್ನೆಯಿಂದ ಹೋರಾಟ ತೀವ್ರಗೊಂಡಿದೆ. ಅಹೋರಾತ್ರಿ ಹೋರಾಟದ ಸ್ಥಳದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊಕ್ಕಾಂ ಹೂಡಿದ್ದಾರೆ. ನಿನ್ನೆ...

ಅನ್ನದಾತನ ಸಾವಿಗೆ ಹೊಣೆ ಯಾರು?

ಮಂಡ್ಯ ಡಿಸಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವನ್ನಪ್ಪಿದ್ದಾರೆ. ರೈತ ಮಂಜೇಗೌಡ ಕೆ‌‌.ಆರ್.ಪೇಟೆ ತಾಲೂಕಿನ ಮೂಡನಹಳ್ಳಿ ನಿವಾಸಿ. ಭೂಸ್ವಾಧೀನಗೊಂಡಿದ್ದ ಜಮೀನಿಗೆ ಹಲವಾರು ವರ್ಷಗಳಿಂದ ಪರಿಹಾರ ಸಿಕ್ಕಿರಲಿಲ್ಲ. ಅರ್ಜಿ ಸಲ್ಲಿಸಿದ್ರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿರಲಿಲ್ಲವಂತೆ. ತಾಲೂಕು ಕಚೇರಿಗೆ ಅಲೆದು ಅಲೆದು ರೋಸಿ ಹೋಗಿದ್ರು. ಜಿಲ್ಲಾಧಿಕಾರಿ ಕಚೇರಿಗೂ ಹಲವು ಬಾರಿ ಬಂದರೂ ಸಮಸ್ಯೆ...

ಮಗನಿಗಾಗಿ ಜಮೀರ್‌ ಕಾರನ್ನೇ ಅಡ್ಡಗಟ್ಟಿದ್ರು

ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಘಟನೆ ನಡೆದ 2 ತಿಂಗಳಾದ್ರೂ ಬಾಲಕನ ಸುಳಿವೇ ಇಲ್ಲ. ಹೀಗಾಗಿ ಮಗನನ್ನ ಹುಡುಕಿಸಿಕೊಡುವಂತೆ, ಸಚಿವ ಜಮೀರ್‌ ಅಹಮದ್‌ಗೆ, ಬಾಲಕನ ಪೋಷಕರು ದುಂಬಾಲು ಬಿದ್ದಿದ್ರು. ಸಚಿವರ ಕಾರು ತಡೆದು ಮನವಿ ಮಾಡಿದ ಘಟನೆ, ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ನಗರದ ವಾರ್ಡ್ ನಂಬರ್‌ 6ರಲ್ಲಿ, ಮಿಟ್ಟಿಕೇರಿ ಹೊಣಿಯ 4 ವರ್ಷದ...

ಕಾಂಗ್ರೆಸ್ 5 ಗ್ಯಾರಂಟಿ ಬಗ್ಗೆ 5 ಅಧ್ಯಯನ

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳ ಪೈಕಿ, 5 ಗ್ಯಾರಂಟಿ ಯೋಜನೆಗಳು ಪ್ರಮುಖವಾಗಿವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಮೀಕ್ಷೆಗಳು, ಅಧ್ಯಯನ ವರದಿಗಳು ನಡೆದಿವೆ. ಇದೀಗ ಮತ್ತೆ ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕಗಳು ಹಾಗೂ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ನವೆಂಬರ್ 5ರಂದು ಈ ನಿಟ್ಟಿನಲ್ಲಿ ನಡೆಯಲಿರುವ ಅವಲೋಕನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಪ್ರತಿಷ್ಠಿತ...

70 ಸಾಧಕರಿಗೆ 2025ರ ರಾಜ್ಯೋತ್ಸವ ಪ್ರಶಸ್ತಿ

2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರು, ಗಣ್ಯರಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯ ಇದೆ. ಈ ಬಾರಿ, ಸಚಿವ ಶಿವರಾಜ್‌ ತಂಗಡಗಿ ಅವರು ಪ್ರಶಸ್ತಿಗೆ ಭಾಜನರಾಗಿರುವ, 70 ಸಾಧಕರ ಹೆಸರನ್ನು ಘೋಷಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿನ 6 ಸಾಧಕರು, ಜಾನಪದ ಮತ್ತು ಸಂಕೀರ್ಣ ಕ್ಷೇತ್ರದಲ್ಲಿ...

ಒಳಮೀಸಲಾತಿ ಕಿಚ್ಚಿಗೆ ಸಿದ್ದು ಮುಲಾಮೇನು?

ಒಳ ಮೀಸಲಾತಿ ಅನುಷ್ಠಾನ ಸಂಬಂಧ ನೂತನ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಕರಡು ಮಸೂದೆ ಮಂಡಿಸಲು ನಿರ್ಧರಿಸಲಾಗಿದೆ. ಒಳ ಮೀಸಲಾತಿ ಅನುಷ್ಠಾನಕ್ಕಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ, ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಸಚಿವರಾದ ಜಿ.ಪರಮೇಶ್ವರ್‌, ಕೆ.ಹೆಚ್‌.ಮುನಿಯಪ್ಪ, ಶಿವರಾಜ ತಂಗಡಗಿ, ಪ್ರಿಯಾಂಕ್‌ ಖರ್ಗೆ, ಆರ್‌.ಬಿ. ತಿಮ್ಮಾಪೂರ್‌, ಸರ್ಕಾರದ...

ಅನುದಾನ ತಾರತಮ್ಯ ಸಮರ : ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್​

ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ, ಜಮಖಂಡಿ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ರಾಜ್ಯ ಸರ್ಕಾರ, ಹಣಕಾಸು ಇಲಾಖೆ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿ ಮಾಡಿದೆ. ಜಗದೀಶ್ ಗುಡಗುಂಟಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ...

ಕರ್ನಾಟಕ ಪೊಲೀಸರಿಗೆ ಹೊಸ ಪೀಕ್‌ ಕ್ಯಾಪ್

ಕರ್ನಾಟಕ ಪೊಲೀಸರ ಲುಕ್‌ ಬದಲಾಗಿದೆ. ಸ್ಲೋಚ್ ಟೋಪಿ ಬದಲಾಗಿ ಹೊಸ ಪೀಕ್ ಕ್ಯಾಪ್ ನೀಡಲಾಗಿದೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್, ಪೊಲೀಸರಿಗೆ ಹೊಸ ಕ್ಯಾಪ್‌ ತೊಡಿಸಿ ಚಾಲನೆ ನೀಡಿದ್ದಾರೆ. ಅಷ್ಟಕ್ಕೂ ಈ ಪೀಕ್‌ ಕ್ಯಾಪ್‌ ಐಡಿಯಾ ಒಳೆದಿದ್ದು ಸಿಎಂ ಸಿದ್ದರಾಮಯ್ಯ ಅವರಿಗಂತೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಇಂದು...
- Advertisement -spot_img

Latest News

Delhi News: ಪ್ರಧಾನಿ ನಿವಾಸದ ಮುಂದೆ ಕಾಂಗ್ರೆಸ್ ಪ್ರತಿಭಟನೆ: ರಾಹುಲ್ ಗಾಂಧಿಯನ್ನು ಹೊತ್ತೊಯ್ದ ಪೊಲೀಸರು

National Political News: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಸೋನಮ್ ವಾಂಗ್ಚುಕ್ ಉಪವಾಸ...
- Advertisement -spot_img