ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿರೋ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆಹೋಗಿದ್ದಾರೆ.
ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಬಳಿಯ ಈಶ್ವರ ಪಾರ್ವತಿ ದೇವಿ ದೇವಸ್ಥಾನದಲ್ಲಿ ಅಂಬರೀಶ್ ಆಪ್ತ ಎಸ್.ಎಲ್.ಲಿಂಗರಾಜು ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯ್ತು. ಈ ವೇಳೆ ಸುಮಲತಾ ಬೆಂಬಲಿಗರು, ಅಭಿಮಾನಿಗಳು ಭಾಗಿಯಾಗಿದ್ದರು. ಮೇ 23ರಂದು ಹೊರಬೀಳಲಿರೋ ಚುನಾವಣಾ ಫಲಿತಾಂಶದಲ್ಲಿ ಸುಮಲತಾ ಅಂಬರೀಶ್ ಜಯಗಳಿಸಲಿ...
ದೆಹಲಿ: ಯಾವುದೇ ಕಾರಣಕ್ಕೂ ಮೈತ್ರಿಗೆ ಧಕ್ಕೆಯಾಗೋ ರೀತಿ ಹೇಳಿಕೆ ನೀಡಬೇಡಿ ಅಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕೈ ನಾಯಕರಿಗೆ ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ನಿನ್ನೆರಾಹುಲ್ ಗಾಂಧಿ ಜೊತೆ
ನಿನ್ನೆ ನಡೆದ ರಾಜ್ಯ ಕಾಂಗ್ರೆಸ್ ನಾಯಕರ ಸಮಾಲೋಚನಾ ಸಭೆಯಲ್ಲಿ ಸಲಹೆ ನೀಡಿರುವ ಯುವರಾಜ ರಾಹುಲ್
ಗಾಂಧಿ ಮೈತ್ರಿಭಂಗಕ್ಕೆ ಕಾರಣವಾಗೋ ಹೇಳಿಕೆಗಳನ್ನು ಯಾರೂ ನೀಡಬಾರದು. ಇಷ್ಟಬಂದಂತೆ ಹೇಳಿಕೆ
ನೀಡೋದನ್ನ...
ದೆಹಲಿ: ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆ ನಡೆಸುತ್ತಿರೋ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರೋ ಅಸಮಾಧಾನದ ಬಗ್ಗೆ ಚರ್ಚೆ ನಡೀತಿದೆ. ಆದ್ರೆ ಈ ಭಿನ್ನಾಭಿಪ್ರಾಯ ಮೈತ್ರಿ ಸರ್ಕಾರದಲ್ಲಿ ಸಹಜ ಅಂತ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ನಡೆದ ಚರ್ಚೆ ವೇಳೆ ಮಾತನಾಡಿದ ಪರಮೇಶ್ವರ್, ಜೆಡಿಎಸ್ ನಾಯಕರು ಪದೇ ಪದೇ...
ಬೆಂಗಳೂರು: ಇದೇ ತಿಂಗಳ ಕೊನೆಗೆ ರಿಲೀಸ್ ಆಗ್ತಿರೋ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಟನೆಯ ಬಹುನಿರೀಕ್ಷಿತ ಅಮರ್ ಚಿತ್ರದ ಜೋರು ಪಾಟ್ಟು ಸಾಂಗ್ ರಿಲೀಸ್ ಆಗಿದೆ.
ಜೂನಿಯರ್ ರೆಬೆಲ್ ಸ್ಟಾರ್ ನಟಿಸಿರೋ ಈ ಚಿತ್ರದ ಸಾಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿರೋದು ವಿಶೇಷ. ಜೋರು ಪಾಟ್ಟು ಸಾಂಗ್ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದ್ದು,...
ಕೇದಾರನಾಥ: 2019ರ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿರೋ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ-ಬದ್ರಿನಾಥ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.
ಕೇದಾರನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮೋದಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ್ರು. ಬಳಿಕ ದೇಗುಲದಿಂದ ಒಂದೂವರೆ ಕಿ.ಮೀ ದೂರದಲ್ಲಿರೋ ಗುಹೆಗೆ ತೆರಳಿ ಧ್ಯಾನಾಸಕ್ತರಾದ್ರು. ಇಲ್ಲಿಗೆ ತೆರೆಳೋ ಮುನ್ನ ಮಳೆ ಬರುತ್ತಿದ್ದರೂ ಅದನ್ನು...
ಬೆಳಗಾವಿ: ಸರ್ಕಾರ ವಿಸರ್ಜನೆ ಕುರಿತ ಬಸವರಾಜ ಹೊರಟ್ಟಿ ಹೇಳಿಕೆಗೆ ಅಷ್ಟು ಮಹತ್ವ ಕೊಡಬೇಕಿಲ್ಲ ಅಂತ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಬಸವರಾಜ್ ಹೊರಟ್ಟಿ ಹೇಳಿಕೆಗೆ ಅಷ್ಟು ಮಹತ್ವ ಕೊಡಬೇಕಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ರೆ ವಿಚಾರ ಮಾಡಬೇಕಾಗುತ್ತದೆ. ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರು ಆ ರೀತಿ ಹೇಳಿದ್ರೆ ಗಂಭೀರವಾಗಿ...
ಬೆಂಗಳೂರು: ಒಂದೆಡೆ ಕಾಂಗ್ರೆಸ್- ಜೆಡಿಎಸ್ ನಾಯಕರ ಹೇಳಿಕೆ ಮೈತ್ರಿ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೋಸ್ತಿ ಸರ್ಕಾರದಲ್ಲಿ ಆರೋಪ ಪತ್ಯಾರೋಪಗಳ ಸುರಿಮಳೆಯಾಗ್ತಿದೆ. ಮತ್ತೊಂದೆಡೆ ಸಿಎಂ ಕುಮಾರಸ್ವಾಮಿ ಈ ಎಲ್ಲಾ ವಿವಾದಗಳಿಗೆ ಫುಲ್ ಸ್ಟಾಪ್ ಹಾಕಲು ಸರ್ಕಸ್ ಮಾಡ್ತಿದ್ದಾರೆ. ಇದೀಗ ಮಧ್ಯಪ್ರವೇಶಿಸಿರೋ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಗೊಂದಲಗಳಿಗೆ ತೆರೆ ಎಳೆಯೋ ಪ್ರಯತ್ನ ಮಾಡಿದ್ದಾರೆ....
ಹಾಸನ: ನನಗೆ ಎಲ್ಲರೂ ಇದ್ದಾರೆ, ಎಲ್ಲವೂ ಇದೆ.
ಆದ್ರೆ ನನ್ನ ತಂದೆ-ತಾಯಿ ಮಾತ್ರ ಇಲ್ಲ ಅಂತ ತಮ್ಮ ಪೋಷಕರನ್ನು ನೆನೆದು ಹಾಸನ ಜಿಲ್ಲಾ ಪಂಚಾಯತ್
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ
ಅಧ್ಯಕ್ಷೆ ಭವಾನಿ ರೇವಣ್ಣ ಕಣ್ಣೀರು ಹಾಕಿದ್ದಾರೆ.
ಹಾಸನದ ಕಾಮಧೇನು
ವೃದ್ಧಾಶ್ರಮದಲ್ಲಿ ತಮ್ಮ ಮಾವ ದೇವೇಗೌಡರ ಹುಟ್ಟುಹಬ್ಬ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ
ಮಾತನಾಡಿದ ಭವಾನಿ ತಮ್ಮ ಪೋಷಕರನ್ನು ನೆನೆದು ಕಣ್ಣೀರು...
ಬೆಂಗಳೂರು: ಜೆಡಿಎಸ್ ಎಂಎಲ್ ಸಿ ಬಸವರಾಜ್ ಹೊರಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ವಿಸರ್ಜಿಸೋದು ಒಳ್ಳೇದು ಅಂತ ಹೇಳೋ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಸಮನ್ವಯದ ಕೊರತೆ ಇದೆ. ಕಾಂಗ್ರೆಸ್ ನಾಯಕರು ದಿನಕ್ಕೊಂದು ಹೇಳಿಕೆ ನೀಡ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕು,ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ಬೇಕು ಅಂತ ಕಾಂಗ್ರೆಸ್ ನಾಯಕರು...
ಆಂಧ್ರಪ್ರದೇಶ: ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳು 18 ಸ್ಥಾನ ಗೆಲ್ಲಲಿವೆ ಅಂತ ಸಿಎಂ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ತಿರುಮಲದಲ್ಲಿ ಮಾತನಾಡಿದ ಮುಖ್ಯಮಂತ್ರಿ
ಕುಮಾರಸ್ವಾಮಿ, ನಾವೀಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ.
ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಿದ್ದೇವೆ. ನಮ್ಮ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ
ಮೈತ್ರಿ ಪಕ್ಷಗಳು 18ರಿಂದ 19 ಸ್ಥಾನ ಗೆಲ್ಲಲಿವೆ ಅಂತ ಸಿಎಂ...