Sunday, May 10, 2026

ರಾಜಕೀಯ

ಸಹಕಾರ ಸಂಘ ಚುನಾವಣೆ ಕಿಚ್ಚು : ಮಂಡ್ಯ ರಾಜಕೀಯದಲ್ಲಿ ಹೊಸ ಕಾದಾಟ!

ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (MDCC) ಚುನಾವಣೆಯ ಜಿದ್ದಾಜಿದ್ದಿ ಜೋರಾಗಿದೆ. ನವೆಂಬರ್‌ 2ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನವಾಗಿದೆ. ಜೆಡಿಎಸ್‌ ಹಾಗೂ NDA ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಶಾಸಕ ಡಾ.ಕೆ. ಅನ್ನದಾನಿ ಅವರ ನೇತೃತ್ವದಲ್ಲಿ NDA ಅಭ್ಯರ್ಥಿಗಳು ಮಂಡ್ಯ ಡಿಸಿಸಿ ಬ್ಯಾಂಕ್‌ ಕಚೇರಿಗೆ ತೆರಳಿ ನಾಮಪತ್ರ...

ತೇಜಸ್ವಿ ಸೂರ್ಯ ಖಾಲಿ ಟ್ರಂಕ್.. ಡಿ.ಕೆ ಶಿವಕುಮಾರ್ ತಿರುಗೇಟು

ಡಿಸಿಎಂ ಡಿಕೆ ಶಿವಕುಮಾರ್‌ ಅವರು ಬೆಂಗಳೂರಿನಲ್ಲಿ ಜನ ಸಂಪರ್ಕ ಸಭೆ ನಡೆಸಿ, ನಾಗರಿಕರಿಂದ ವಿವಿಧ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ಲಾಲ್‌ಬಾಗ್‌ ಸುರಂಗ ಮಾರ್ಗ ಯೋಜನೆಯ ಬಗ್ಗೆ ಮಾತನಾಡಿದ ಅವರು, ಈ ಯೋಜನೆಯಿಂದ ಲಾಲ್‌ಬಾಗ್‌ಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಲಸದ ಅವಧಿಯಲ್ಲಿ ಕೇವಲ ಒಂದು ಎಕರೆ ಪ್ರದೇಶವನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತದೆ, ನಂತರ...

ಪ್ರತಾಪ್ V/S ಪ್ರಿಯಾಂಕ್ “ಅರ್ಹತೆ” ವಾರ್

ರಾಜ್ಯ ರಾಜಕೀಯದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ, ಮಾಜಿ ಸಂಸದ ಪ್ರತಾಪ್‌ ಸಿಂಹ ನಡುವಿನ ಟಾಕ್‌ವಾರ್‌ ವೈಯಕ್ತಿಯ ಮಟ್ಟಕ್ಕೆ ಇಳಿದಿದೆ. ಅರ್ಹತೆ ಮೀರಿದ ಐಟಿ, ಬಿಟಿ ಖಾತೆಯನ್ನು ಪ್ರಿಯಾಂಕ್‌ ಖರ್ಗೆ ನೀಡಲಾಗಿದೆ. ಅವರ ಅಪ್ಪನನ್ನ ಮೆಚ್ಚಿಸಲು 2 ಖಾತೆಗಳನ್ನು ಕೊಟ್ಟಿದ್ದಾರೆ. ಭೀಮ್‌ ಆರ್ಮಿ ಮಾಡುವ ಅರ್ಹತೆ ಇದೆಯಾ? ಎಂದು ಪ್ರತಾಪ್‌ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ರು....

CM ಸಿದ್ದು ದೆಹಲಿ ಪ್ರವಾಸದ ಗುಟ್ಟೇನು?

ಸಿಎಂ ಉತ್ತರಾಧಿಕಾರಿ, ನವೆಂಬರ್ ಕ್ರಾಂತಿ ವದಂತಿ ನಡುವೆ ಸಿದ್ದರಾಮಯ್ಯರ ನಡೆ ಕುತೂಹಲ ಕೆರಳಿಸಿದೆ. ಇದೇ ನವೆಂಬರ್‌ 15ರಂದು ಸಿಎಂ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ನವೆಂಬರ್ 15ರಿಂದ 3 ದಿನ ದಿಲ್ಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ಈ ಪ್ರವಾಸ ರಾಜ್ಯ ರಾಜಕೀಯದ ಕುತೂಹಲಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ನವೆಂಬರ್‌ 14ರಂದು ಪ್ರಕಟವಾಗಲಿದೆ. ಅದಾದ...

ರಾಜ್ಯಸಭಾ ಚುನಾವಣೆಯಲ್ಲಿ NCಗೆ ಗೆಲುವು

ರಾಜ್ಯಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಜಯ ಸಾಧಿಸಿದೆ. 4 ಮೇಲ್ಮನೆ ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ನ್ಯಾಷನಲ್ ಕಾನ್ಫರೆನ್ಸ್ ಗೆದ್ದರೆ, ಬಿಜೆಪಿ ಒಂದು ಸ್ಥಾನವನ್ನು ಪಡೆಯುವಷ್ಟೇ ತೃಪ್ತಿಯಾಗಿದೆ. 2019ರಲ್ಲಿ ಈ ಪ್ರದೇಶದ ರಾಜ್ಯ ಸ್ಥಾನಮಾನ ರದ್ದಾದ ನಂತರ, ಮೊದಲ ಬಾರಿಗೆ ನಡೆದ ಚುನಾವಣೆ ಇದಾಗಿತ್ತು. ಇದರಲ್ಲಿ ಎನ್‌ಸಿ ನೇತೃತ್ವದ ಮೈತ್ರಿಕೂಟ ಮತ್ತು...

MDCC ಬ್ಯಾಂಕ್‌ ಅಖಾಡಕ್ಕೆ ಸಚಿನ್ ಚಲುವರಾಯಸ್ವಾಮಿ

ಕೃಷಿ ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್, ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸಹಕಾರಿ ಕ್ಷೇತ್ರದ ಮೂಲಕ ರಾಜಕೀಯ ಪಯಣ ಆರಂಭಿಸಲು ತಯಾರಾಗಿದ್ದು, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಮಗನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಸಚಿವ ಚಲುವರಾಯಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈ ಹಿಂದೆ ಹೆಚ್‌.ಡಿ ಕುಮಾರಸ್ವಾಮಿ ಪುತ್ರ...

ಮೈಮುಲ್ ಅಧ್ಯಕ್ಷರಾಗಿ ಕೆ. ಈರೇಗೌಡ : ಎಚ್.ಡಿ. ಕೋಟೆಗೆ ಮೊದಲ ಬಾರಿ ಗೌರವ!

ಮೈಮುಲ್‌ — ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಇದರ ನೂತನ ಅಧ್ಯಕ್ಷರಾಗಿ ಕೆ. ಈರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದರೊಂದಿಗೆ, ಈ ಹುದ್ದೆ ಮೊದಲ ಬಾರಿಗೆ ಎಚ್.ಡಿ. ಕೋಟೆ ತಾಲ್ಲೂಕಿಗೆ ಸಂದಿದೆ. ಬನ್ನೂರು ರಸ್ತೆಯ ಮೆಗಾ ಡೈರಿಯ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ,...

“ಡಿಕೆಶಿ CM ಆಗಲು ಸಿದ್ದರಾಮಯ್ಯ ಬಿಡಲ್ಲ”

ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿ ಇರುವಾಗ್ಲೇ, ಕೇಂದ್ರ ಸಚಿವ ಸಚಿವ ಪ್ರಹ್ಲಾದ್​ ಜೋಶಿ ಬಿಗ್​ ಬಾಂಬ್​ ಸಿಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಸಿಎಂ ಆಗಲು ಬಿಡಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಧಾರವಾಡದಲ್ಲಿ ​ ಮಾತನಾಡಿರುವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಏನೂ ಸರಿಯಿಲ್ಲ....

ನ.14ರ ಬಳಿಕ ರಾಜ್ಯದಲ್ಲಿ ಕ್ರಾಂತಿಯ ಸುಳಿವು

ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಪವರ್‌ ಶೇರಿಂಗ್‌ ವಿಚಾರ ತೀವ್ರಗೊಂಡಿರುವ ಹೊತ್ತಲ್ಲಿ, ಎಂಎಲ್‌ಸಿ ರಾಜೇಂದ್ರ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ಬಳಿಕ, ರಾಜ್ಯದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್‌ ಅವರು ಶಾಸಕರ ಬಲದ ಮೇಲೆ ಸಿಎಂ ಸ್ಥಾನ ನಿರ್ಧಾರವಾಗುವುದಿಲ್ಲ. ವರಿಷ್ಠರು ಹೇಳಿದ್ದನ್ನು ನಾವು ಕೇಳಲೇಬೇಕು, ಒಪ್ಪಿಕೊಳ್ಳಲೇಬೇಕು....

ಯತೀಂದ್ರ ಮಾತಿಗೆ ‘ಬಂಡೆ’ ಸೈಲೆಂಟ್‌ ಏಕೆ?

ನವೆಂಬರ್‌ ಕ್ರಾಂತಿ ಹೊಸ್ತಿಲಲ್ಲಿರುವ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದೆ. ಸಿದ್ದು ಬಣದವರು ಸಮರ್ಥಿಸಿಕೊಂಡ್ರೆ, ಡಿಕೆಶಿ ಬಣದವರು ಪರೋಕ್ಷವಾಗಿ ವಾರ್ನ್‌ ಮಾಡ್ತಿದ್ದಾರೆ. ಇದೀಗ ಸ್ವತಃ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ಮೌನಾಸ್ತ್ರ ಪ್ರಯೋಗಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸುತ್ತಿದ್ದಂತೆ, ಈಗ ನಾನು ಮಾತನಾಡೋಕೆ ಹೋಗಲ್ಲ....
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img