Political News: ನಮ್ಮ ಬಳ್ಳಾರಿ ಪಾದಯಾತ್ರೆಯ ಹೋರಾಟಕ್ಕೆ ಮತ್ತೊಂದು ಜಯ ಲಭಿಸಿದೆ: ಬಿ.ವೈ.ವಿಜಯೇಂದ್ರ

Political News: ರಾಜ್ಯದಲ್ಲಿರುವ ಸದ್ಯ 175ಕ್ಕೂ ಹೆಚ್ಚು ತಾಲೂಕುಗಳನ್ನು ಬರ ತಾಲೂಕುಗಳಾಗಿ ಘೋಷಿಸಲಾಗಿದೆ. ಇದಕ್ಕೂ ಮುನ್ನ ಬರೀ 100 ತಾಲೂಕುಗಳನ್ನು ಬರಪೀಡಿತ ತಾಲೂಕುಗಳಾಗಿ ಘೋಷಿಸಲಾಗಿತ್ತು. ಇದೀಗ 75ಕ್ಕೂ ಹೆಚ್ಚಿನ ತಾಲೂಕನ್ನು ಸೇರಿಸಲಾಗಿದೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ವಿರುದ್ಧದ ಬಿಜೆಪಿ ಪಾದಯಾತ್ರೆಯ ಗೆಲುವು ಎಂದು ಹೇಳಿದ್ದಾರೆ.

ಈ ಬಾರಿ ರಾಜ್ಯದ ಸುಮಾರು 190ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರ ಅವರಿಸಿತ್ತು. ರಾಜ್ಯ ಸರ್ಕಾರ ರೈತರ ನೆರವಿಗೆ ನಿಲ್ಲದೆ. ಕಾಟಾಚಾರಕ್ಕಾಗಿ ಕೇವಲ 101 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ತನ್ನ ಪಾತ್ರ ಮುಗಿಸಿತ್ತು. ಆದರೇ ವಾಸ್ತವದ ಅರಿವಿದ್ದ ಬಿಜೆಪಿ ಇದನ್ನು ಇಲ್ಲಿಗೆ ಬಿಡದೆ, ಸರಿಯಾಗಿ ಅಧ್ಯಯನ ನಡೆಸಿ ಬರ ತಾಲೂಕುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಮಾಡಿತ್ತು. ಅಲ್ಲದೆ, ಇದೆ ವಿಚಾರವನ್ನು ಮುಂಬರುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ಧತೆಯನ್ನೂ ಮಾಡಿಕೊಂಡಿದ್ದೆವು.

ನಮ್ಮ ಹೋರಾಟಕ್ಕೆ ಬೆದರಿದ ಹಾಗೂ ಮುಂಬರುವ ಅಧಿವೇಶದಲ್ಲಿ ಸರ್ಕಾರಕ್ಕೆ ಆಗುವ ಮುಜುಗರವನ್ನು ತಪೋಸಿಕೊಳ್ಳಲು. ಈಗ 23 ತಾಲೂಕುಗಳನ್ನು ತೀವ್ರ ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ. ಅಲ್ಲದೇ, ಇನ್ನೂ 53 ತಾಲೂಕುಗಳ ಗ್ರೌಂಡ್ ಟ್ರುಥ್ ನಿಂಗ್ ಮಾಡಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ. ಈಗ ಒಟ್ಟಾರೆಯಾಗಿ ಸುಮಾರು 175 ಕ್ಕೂ ಹೆಚ್ಚು ತಾಲೂಕುಗಳ ಬರ ತಾಲೂಕುಗಳಾಗಿ ಘೋಷಣೆ ಮಾಡಲಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಸರ್ಕಾರ ಇಷ್ಟಕ್ಕೆ ಕೈಕಟ್ಟಿ ಕುಳಿತುಕೊಳ್ಳಬಾರದು. ಕೂಡಲೇ ಬರ ತಾಲೂಕುಗಳಲ್ಲಿ ಸಮಾರೋಪಾದಿಯಲ್ಲಿ ಕುಡಿಯುವ ನೀರು, ರೈತರಿಗೆ ಪರಿಹಾರ, ಯುವಕರಿಗೆ ಉದ್ಯೋಗದಂತಹ ಕ್ರಮಗಳನ್ನು ಕೈಗೊಳ್ಳಬೇಕು. ಮೇಲಾಗಿ ಜನರು ಸಾಮೂಹಿಕವಾಗಿ ಗುಳೆ ಹೋಗುವುದನ್ನು ತಪ್ಪುಸಬೇಕು. ಇಲ್ಲದಿದ್ದರೆ, ಮುಂಬರುವ ಅಧಿವೇಶನದಲ್ಲಿ ಸರ್ಕಾರಕ್ಕೆ ಛಾಟಿ ಏಟು ಖಚಿತ ಎನ್ನುವುದನ್ನು ಮರೆಯಬಾರದು ಎಂದು ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

About The Author