Monday, June 29, 2026

ರಾಜ್ಯ

ರಂಜಾನ್ ಹಬ್ಬ ಇಂದಲ್ಲ, ನಾಳೆ – ಕೇಂದ್ರ ಚಂದ್ರ ದರ್ಶನ ಸಮಿತಿ ತೀರ್ಮಾನ

ಬೆಂಗಳೂರು: ನಿನ್ನೆ ಚಂದ್ರ ದರ್ಶನವಾಗದ ಕಾರಣ, ನಾಳೆ ರಂಜಾನ್ ಹಬ್ಬವನ್ನು ಆಚರಿಸೋದಕ್ಕೆ ವಕ್ಫ್ ಮಂಡಳಿ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಚಂದ್ರ ದರ್ಶನ ಸಮಿತಿಯು ಮಾಹಿತಿ ನೀಡಿದ್ದು, ಭಾನುವಾರದಂದು ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ, ರಾಜ್ಯಾಧ್ಯಂತ ರಂಜಾನ್ ಹಬ್ಬವನ್ನು, ನಾಳೆ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಅಂದಹಾಗೇ ರಾಜ್ಯ ಸರ್ಕಾರ ನಾಳೆ ರಂಜಾನ್ ಹಬ್ಬದ ಪ್ರಯುಕ್ತ ನೀಡಲಾಗಿದ್ದಂತ ಸಾರ್ವತ್ರಿಕ...

ಬೆಂಗಳೂರಿಗರೇ ಗಮನಿಸಿ: ಆಸ್ತಿ ತೆರಿಗೆ ರಿಯಾಯತಿ ಮೇ ಅಂತ್ಯದವರೆಗೆ ವಿಸ್ತರಣೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2022-23 ನೇ ಸಾಲಿನ‌ ಆಸ್ತಿ ತೆರಿಗೆ ಪಾವತಿಗೆ ನೀಡಲಾಗಿದ್ದ ಶೇ 5ರ ರಿಯಾಯಿತಿಯನ್ನು ಮೇ ತಿಂಗಳ ಅಂತ್ಯದ ವರೆಗೂ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ಆಸ್ತಿ ತೆರಿಗೆ...

ನಾನು ಜನರು ಬದಕುವ ಸಣ್ಣ ಕೆಲಸ ಮಾಡುತ್ತಿದ್ದೇನೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಾನು ಬುದ್ದಿವಂತ ಅನ್ನುವ ಭ್ರಮೆಯಲ್ಲಿ ಇಲ್ಲ. ಜನರು ಬದಕುವ ಸಣ್ಣ ಕೆಲಸ ಮಾಡುತ್ತಿದ್ದೇನೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆಗಬೇಕು. ಸಮಸಮಾಜ ನಿರ್ಮಾಣ ಆಗಬೇಕು. ಕೆಲವರು ಮಾತ್ರ ಶ್ರೀಮಂತ ಆದ್ರೆ ನಾಡು ಉದ್ಧಾರ ಆಗೋದಿಲ್ಲ. ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ. ಸೂರು ಇಲ್ಲದವರಿಗೆ ಸೂರು, ಹಸಿದವರಿಗೆ ಅನ್ನ ನೀಡುವ ಕೆಲಸ‌ವನ್ನ...

ನಮ್ಮ ಸಮಾಜದಲ್ಲಿ ನಾನು ಒಬ್ಬನೇ ಇರೋದು, ನನ್ನ ಬೆನ್ನಿಗೆ ನಿಂತಿರೋದು ಸಿಎಂ ಬೊಮ್ಮಾಯಿ – ಸಚಿವ ಮುನಿರತ್ನ

ಬೆಂಗಳೂರು:ಸಿಎಂ ಬಸವರಾಜ್ ಬೊಮ್ಮಾಯಿ ಅವರದ್ದು ತಾಯಿ ಹೃದಯ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಹಲ‌ ಮಠಾಧೀಶರನ್ನ ಸರ್ಕಾರಗಳು ಗುರುತಿಸಿರಲಿಲ್ಲ. ಈಗ ತಾಯಿ ಹೃದಯದ ಬಸವರಾಜ್ ಬೊಮ್ಮಾಯಿ ಗುರುತಿಸಿದ್ದಾರೆ. ಪ್ರತಿ ಹಂತದಲ್ಲೂ ಸಿಎಂ ನನ್ನ ಕೈ ಹಿಡಿದಿದ್ದಾರೆ. ಇವರು ನಮ್ಮ ನಾಯಕರು ಎಂಬುದಾಗಿ ಸಚಿವ ಮುನಿರತ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರನ್ನು ಹಾಡಿ ಹೊಗಳಿದ್ದಾರೆ. ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,...

ಆ್ಯಸಿಡ್ ಎರಚಿದ ಕಿರಾತಕ ನಾಗೇಶ್ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿ

ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ, ನಾಪತ್ತೆಯಾಗಿರುವಂತ ಕಿರಾತಕ ನಾಗೇಶ್ ಬಂಧನಕ್ಕಾಗಿ, ಪೊಲೀಸರು ಈಗ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಎಲ್ಲಾ ರಾಜ್ಯಗಳ ಪೊಲೀಸರಿಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿರುವಂತ ಬೆಂಗಳೂರು ನಗರ ಪೊಲೀಸರು, ಕಿರಾತಕ ನಾಗೇಶ್ ಮಾಹಿತಿ ಇದ್ದರೇ ನೀಡುವಂತೆ, ಬಂಧಿಸುವಂತೆ ಕೋರಿಕೊಂಡಿದ್ದಾರೆ. ಅಂದಹಾಗೇ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವಂತ ನಾಗೇಶ್...

ಎಸ್.ಎಂ.ಕೃಷ್ಣ ಅವರಿಗೆ ಶುಭ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕೇಂದ್ರದ ಮಾಜಿ ಸಚಿವರು ಹಾಗೂ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಎಸ್.ಎಂ.ಕೃಷ್ಣ ಅವರ ಜನುಮ ದಿನವಾದ ಇಂದು ದೂರವಾಣಿ ಕರೆ ಮಾಡಿ ಮಾತನಾಡಿದರು. ದೇವರು ತಮಗೆ ಆಯುಷ್ಯ ಮತ್ತು ಆರೋಗ್ಯವನ್ನು ನೀಡಲಿ ಎಂದು ಬಸವರಾಜ ಬೊಮ್ಮಾಯಿ ಅವರು ಶುಭಕೋರಿದರು.

ರಾಜ್ಯ ಸರ್ಕಾರದಿಂದ ಪಿಎಸ್ಐ ಪರೀಕ್ಷೆ ರದ್ದು, ಮರು ಪರೀಕ್ಷೆಗೆ ಅಧಿಕೃತ ಆದೇಶ

ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಸಾಭೀತಾದ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಪರೀಕ್ಷೆ ರದ್ದು ಮಾಡಿದೆ. ಅಲ್ಲದೇ ಮರು ಪರೀಕ್ಷೆಗೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ಕುರಿತು ಆದೇಶ ಹೊರಡಿಸಿರುವಂತ ರಾಜ್ಯ ಸರ್ಕಾರವು, ಅ.3, 2021ರಂದು ರಾಜ್ಯಾಧ್ಯಂತ 545 ಪಿಎಸ್ಐ ನೇಮಕಾತಿಗಾಗಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅಕ್ರಮ ಬಹಿರಂಗಗೊಂಡಿರುವ ಹಿನ್ನಲೆಯಲ್ಲಿ, ಪರೀಕ್ಷಾ ಪ್ರಕ್ರಿಯೆಯನ್ನು...

ಸೆಮಿಕಂಡಕ್ಟರ್ ಫ್ಯಾಬ್ ಪ್ಲಾಂಟ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಹಾಗೂ ಐಎಸ್‍ಎಂಸಿ ಅನಲಾಗ್ ಫ್ಯಾಬ್ ಪ್ರೈ.ಲಿ ನಡುವೆ ಒಪ್ಪಂದಕ್ಕೆ ಸಹಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ 22,900 ಕೋಟಿ ರೂ.ಗಳ ( ೩ ಬಿಲಿಯನ್ ಡಾಲರ್) ಹೂಡಿಕೆಯ ದೇಶದ ಮೊತ್ತ ಮೊದಲ ಪ್ರತಿಷ್ಠಿತ ಸೆಮಿಕಂಡಕ್ಟರ್ ಪ್ಲಾಂಟ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಹಾಗೂ ಐಎಸ್‍ಎಂಸಿ ಅನಲಾಗ್ ಫ್ಯಾಬ್ ಪ್ರೈ.ಲಿ ನಡುವೆ ಒಪ್ಪಂದಕ್ಕೆ ಇಂದು ಸಹಿ ಹಾಕಲಾಯಿತು. ಏಳು ವರ್ಷಗಳ ಅವಧಿಯಲ್ಲಿ ಒಟ್ಟು 1500 ಜನರಿಗೆ ಉದ್ಯೋಗ...

ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿ ಎದುರು ಕಾಂಗ್ರೆಸ್ ಜತೆಗಿನ ನಂಟಿನ ಬಗ್ಗೆ ದಿವ್ಯ ಹಾಗರಗಿ ಸ್ಪೋಟಕ ಹೇಳಿಕೆ.?

ಕಲಬುರ್ಗಿ: ರಾಜ್ಯ ಸರ್ಕಾರದಿಂದ ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಸಿಐಡಿ ತನಿಖೆಗೆ ನೀಡಿತ್ತು. ತನಿಖೆ ನಡೆಸುತ್ತಿರೋ ಸಿಐಡಿ ಅಧಿಕಾರಿಗಳು ಕ್ವೀನ್ ಪಿನ್ ದಿವ್ಯಾ ಹಾಗರಗಿಯನ್ನು ಬಂಧಿಸಿತ್ತು. ಬಂಧಿತ ಆರೋಪಿಯನ್ನು ತಮ್ಮ ವಶಕ್ಕೆ ಪಡೆದಿದು ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಸಿಐಡಿ ತನಿಖೆಯ ವೇಳೆಯಲ್ಲಿ ಕಾಂಗ್ರೆಸ್ ಜೊತೆಗಿನ ಸಂಬಂಧದ ಬಗ್ಗೆ ಸ್ಪೋಟಕ ಮಾಹಿತಿಯನ್ನು ದಿವ್ಯಾ ಹಾಗರಗಿ ಬಿಚ್ಚಿಟ್ಟಿದ್ದಾರೆ...

KSRTC ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳ ಮನ್ನಾ‌

ಬೆಂಗಳೂರು: ಕೆ ಎಸ್ ಆರ್ ಟಿ ಸಿ ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ‌ ಮಾಡಲಾಗಿದೆ. ಈ ಮೂಲಕ ಕಾರ್ಮಿಕ ದಿನಾಚರಣೆಯಂದೇ, ನೌಕರರಿಗೆ ಭಂಪರ್ ಗಿಫ್ಟ್ ಅನ್ನು ನಿಗಮವು ನೀಡಿದೆ. ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ, ನಿಗಮದ...
- Advertisement -spot_img

Latest News

ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಸಿಎಂ ವಿರುದ್ಧ ಆರ್.ಅಶೋಕ್ ಆರೋಪ

Political News: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿದಿನ ತಮಿಳುನಾಡಿಗೆ ಕದ್ದು ಮುಚ್ಚಿ 2 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್...
- Advertisement -spot_img