Haveri News: ಹಾವೇರಿ: ಹಾವೇರಿಯಲ್ಲಿ ಕೋಮು ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದಿ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರಹುಣ್ಣಿಮೆ ರೈತಾಪಿ ಜನರ ಪವಿತ್ರವಾದ ಹಬ್ಬವಾಗಿದೆ. ಮಸೀದಿ ಬಳಿ ಹೋರಿ ಹೋಗಿದಕ್ಕೆ ಮುಸ್ಲಿಮರು ಗಲಾಟೆ ಮಾಡಿದ್ದಾರೆ. ರೈತರ ಮಕ್ಕಳಿಗೆ ಕುಡುಗೋಲಿನಿಂದ ಕೈಯನ್ನ ಕಡಿದಿದ್ದಾರೆ. ಇದೊಂದು ರಾಕ್ಷಸಿ ಪ್ರವೃತ್ತಿ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೀದಿ ಒಳಗೆ ಹೋರಿ ಹೊದರೆ ಏನ್ ತಪ್ಪಿದೆ..? ಹೋರಿಗೆ ಏನ್ ಬುದ್ದಿಯಿದಿಯಾ…? ಹಲ್ಲೆ ಮಾಡಿದವರನ್ನ ಒದ್ದು ಒಳಗಡೆ ಹಾಕಬೇಕೂ. ಕೋಮುಗಲಭೆ ಅಂತೇಳಿ ಹಿಂದೂಗಳ ಮೇಲೆ ಕೇಸ್ ಹಾಕಿದರೆ ಹೋರಾಟ ಮಾಡ್ತೀವಿ. ರೈತರ ಮೇಲೆ ಹಲ್ಲೆ ಮಾಡಿದವರು, ನಾಳೆ ನಿಮ್ಮನ್ನ ಸಹ ಬಿಡುವುದಿಲ್ಲ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಆಗಿದ್ದೇನು..?
ಹಾವೇರಿಯಲ್ಲಿ ಕಾರಹುಣ್ಣಿಮೆ ಸಂಭ್ರಮದ ಮಧ್ಯೆ ಕೋಮು ಉದ್ವಿಗ್ನತೆ ಉಂಟಾಗಿದ್ದು, ಹೋರಿ ಸ್ಪರ್ಧೆ ಆಗುವಾಗ, ಕೈಯಲ್ಲಿ ಕುಡುಗೋಲು ಹಿಡಿದು, ರಕ್ತ ಬರುವಂತೆ ಹಲ್ಲೆ ಮಾಡಲಾಗಿದೆ.
ಕಾರಹುಣ್ಣಿಮೆ ದಿನವೇ ನರೇಗಲ್ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಗಲಾಟೆಯಾಗಿದ್ದು, ಅನ್ಯಕೋಮಿನ ಯುವಕರು, ಹಿಂದೂಗಳ ಮೇಲೆ ಕುಡುಗೋಲಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಮಸೀದಿ ಎದುರು ಈ ಗಲಾಟೆ ನಡೆದಿದ್ದು, ಖಾಜಾಸಾಬಾ ಗೌಂಡಿ ಎಂಬ ಅನ್ಯಕೋಮಿನ ಯುವಕ ಸಿಕ್ಕ ಸಿಕ್ಕವರ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ.




