ಕೇಂದ್ರ ಸರ್ಕಾರ ವಾಹನ ಚಾಲಕರಿಗೆ ಸಿಹಿ ಸುದ್ದಿ ನೀಡಿದೆ. ಆಗಸ್ಟ್ 15ರಿಂದ ಅಂದ್ರೆ ಇಂದಿನಿಂದ ದೇಶಾದ್ಯಂತ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಯೋಜನೆ ಆರಂಭವಾಗಲಿದೆ. ಈ ಪಾಸ್ ತೆಗೆದುಕೊಳ್ಳುವವರು ವರ್ಷವಿಡೀ ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಪಾಸ್ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ...
ಧರ್ಮಸ್ಥಳ ನಿಗೂಢ ಸಾವುಗಳ ಕೇಸ್, ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಮೊದಲ ಬಾರಿಗೆ ಅನಾಮಿಕ, ಮಾಸ್ಕ್ ಮ್ಯಾನ್, ಮಾಧ್ಯಮದ ಎದುರು ಮಾತನಾಡಿದ್ದಾನೆ. ನ್ಯಾಷನಲ್ ಮೀಡಿಯಾ ಇಂಡಿಯಾ ಟುಡೇ ವರದಿಗಾರನ ಜೊತೆ, ತಾನು ನೋಡಿದ್ದೇನು? ಮಾಡಿದ್ದೇನು? ಬಳಿಕ ಏನಾಯ್ತು? ಧರ್ಮಸ್ಥಳ ತೊರೆದಿದ್ದು ಯಾವಾಗ? ಮತ್ತೆ ಬಂದಿದ್ದೇಕೆ? ಅನ್ನೋ ಬಗ್ಗೆ, ಎಲ್ಲಾ ವಿಚಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಇಂಡಿಯಾ ಟುಡೇ ವರದಿಗಾರನ...
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ, ನಟ ದರ್ಶನ್ ಅಂಡ್ ಗ್ಯಾಂಗ್ ಮತ್ತೆ ಜೈಲು ಪಾಲಾಗಿದೆ. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ, ತಕ್ಷಣವೇ ಬಂಧಿಸುವಂತೆ ಸೂಚಿಸಿತ್ತು. ದರ್ಶನ್ ಬೇಲ್ ರದ್ದಾಗಲು ಪ್ರಾಸಿಕ್ಯೂಷನ್ ಪರ ವಕೀಲರ ಪ್ರಬಲ ವಾದ ಮಂಡನೆಯೇ ಕಾರಣ.
ಪ್ರಾಸಿಕ್ಯೂಷನ್ ಪರ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿದ್ದು, ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ. ಸುಪ್ರೀಂಕೋರ್ಟ್ ನಲ್ಲಿ ಸಾಕಷ್ಟು ವರ್ಷಗಳಿಂದ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಅರೆಸ್ಟ್ ಆಗಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಇದ್ದರೂ ದರ್ಶನ್ ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಬೇಲ್ ರದ್ದು ಮಾಡಿದ್ದ ಸುಪ್ರೀಂಕೋರ್ಟ್, ತಕ್ಷಣವೇ ಬಂಧಿಸುವಂತೆ ಆದೇಶಿಸಿತ್ತು. ಸುಪ್ರೀಂ ಆದೇಶದಂತೆ, ದರ್ಶನ್ಗಾಗಿ ಪೊಲೀಸರು ಹುಡುಕಾಡಿದ್ದಾರೆ. ದರ್ಶನ್ ಕುಟುಂಬಸ್ಥರನ್ನೂ ಪೊಲೀಸರು ವಿಚಾರಿಸಿದ್ದರು.
ತಮಿಳುನಾಡಿನತ್ತ ಹೋಗಿದ್ದ ದರ್ಶನ್ಗೆ, ಬೇಲ್ ರದ್ದಾದ ವಿಷಯವನ್ನು ಕೂಡಲೇ ತಿಳಿಸಲಾಗಿದೆ. ಸಂಜೆ...
ಇದ್ರೆ ನೆಮ್ದಿಯಾಗಿ ಇರಬೇಕು ಎನ್ನುತ್ತಿದ್ದ ನಟ ದರ್ಶನ್ಗೆ, ಡೆವಿಲ್ ಸಿನಿಮಾ ರಿಲೀಸ್ಗೂ ಮುನ್ನವೇ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ದರ್ಶನ್ ಸೇರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳ ಜಾಮೀನನ್ನು ರದ್ದು ಮಾಡಿದೆ. ಈ ಹಿಂದೆ ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ಗೆ, ವಿಶೇಷ ವ್ಯವಸ್ಥೆ, ಆತಿಥ್ಯ ನೀಡಲಾಗಿತ್ತು. ಈ ಬಾರಿ ನಟ...
ದೆಹಲಿ, ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಾಗುತ್ತಿದೆ. ರಸ್ತೆಗಳಲ್ಲಿ ಓಡಾಡುವವರ ಮೇಲೆ ನಡೆದ ದಾಳಿಗೆ ಅನೇಕ ಮಂದಿ ಬಲಿಯಾಗುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ನೋಡಿದ ಸುಪ್ರೀಂ ಕೋರ್ಟ್ ದೆಹಲಿ ಸೇರಿದಂತೆ ಎಲ್ಲಾ ನಗರಗಳಿಗೆ ಕಠಿಣ ಸೂಚನೆಗಳನ್ನು ನೀಡಿದೆ.
ದೆಹಲಿಯಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಲು ಸುಪ್ರೀಂಕೋರ್ಟ್ ಆದೇಶಿಸಿದೆ. ಆ ಆದೇಶದ ಒಂದು ದಿನದ...
ಆಗಸ್ಟ್ 11ರಂದು ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಿಂದ ಕೆ.ಎನ್ ರಾಜಣ್ಣ ಅವರ ತಲೆದಂಡವಾಗಿದೆ. ಸಿಎಂ ಆಪ್ತರೂ ಎನ್ನುವುದನ್ನು ನೋಡದೇ ಹೈಕಮಾಂಡ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದೆ. ಇದಕ್ಕೆ ರಾಹುಲ್ ಗಾಂಧಿಗೆ ದೂರು ಕೊಟ್ಟಿರುವುದೇ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ದೂರು ಕೊಟ್ಟಿದ್ದು ಯಾರು ಅನ್ನೋ ಸತ್ಯ ಇದೀಗ ಬಯಲಾಗಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ,...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಸೇರಿದಂತೆ ಹಲವು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗವು ದೇಶದ ಚುನಾವಣಾ ವ್ಯವಸ್ಥೆಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ.
ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸುವ ಪ್ರಯತ್ನವಾಗಿ ಭಾರತದ ಚುನಾವಣಾ ಆಯೋಗ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಿದೆ. ಈ...
ಭಾರತದಲ್ಲಿ ನಡೆದಿರುವ ಒಂದು ಮಹತ್ವದ ಆರ್ಥಿಕ ಬೆಳವಣಿಯಿಂದ, ಜವಳಿ ಉದ್ಯಮ, ಲಕ್ಷಾಂತರ ಕಾರ್ಮಿಕರ ಜೀವನ ಮತ್ತು ರಫ್ತು ಆಧಾರಿತ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಲಿರುವುದು ಸ್ಪಷ್ಟವಾಗಿದೆ. ಯಾಕಂದ್ರೆ ಭಾರತದಿಂದ - ಅಮೇಜಾನ್, ವಾಲ್ಮಾರ್ಟ್ ಮತ್ತಿತರ ರೀಟೇಲ್ ಮಾರಾಟಗಾರರು ಖರೀದಿಯನ್ನ ನಿಲ್ಲಿಸಿದ್ದಾರೆ.
ಇತ್ತೀಚೆಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದಂತೆ, ಭಾರತದಿಂದ ಆಮದು ಮಾಡುವ...