ಮಧ್ಯ ಭಾರತದ ರೈಲು ಸಂಪರ್ಕವನ್ನು ಬಲಪಡಿಸಲು ₹24,634 ಕೋಟಿ ರೂ. ಮೌಲ್ಯದ ನಾಲ್ಕು ಪ್ರಮುಖ ರೈಲು ಯೋಜನೆಗಳಿಗೆ ಇಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಈ ಯೋಜನೆಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮತ್ತು ಛತ್ತೀಸ್ಗಢ ರಾಜ್ಯಗಳ 18 ಜಿಲ್ಲೆಗಳನ್ನು ಒಳಗೊಂಡಿವೆ. ಹೊಸ ಮೂರನೇ ಮತ್ತು ನಾಲ್ಕನೇ...
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆಗೆ ಸಂಬಂಧಿಸಿ ವಕೀಲ ರಾಕೇಶ್ ಕಿಶೋರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಯಾವುದೇ ಪಶ್ಚಾತಾಪವಿಲ್ಲ, ನಾನು ಮಾಡಿದದ್ದು ಸರಿಯೇ. ದೇವರೇ ನನ್ನನ್ನು ಅದಕ್ಕೆ ಪ್ರಚೋದಿಸಿದರು ಎಂದು ಅವರು ಹೇಳಿದರು.
ಸೋಮವಾರ ನಡೆದ ಘಟನೆ ವೇಳೆ ರಾಕೇಶ್ ಕಿಶೋರ್ ಅವರು ಸನಾತನ ಧರ್ಮಕ್ಕೆ...
ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ ಜೈಮನ್ ಜೋಸೆಫ್ ಸಚಿವರ ನಿಂದನೆ ಮತ್ತು ವರ್ಗಾವಣೆಯಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ದುಃಖದ ಘಟನೆ ಸಂಭವಿಸಿದೆ. ಪೊನ್ಕುನ್ನಂ ಡಿಪೋಗೆ ಸೇರಿದ್ದ ಚಾಲಕ ಜೈಮನ್, ಮುಂಡಕ್ಕಯಂ-ಪಾಲಾ ಮಾರ್ಗದಲ್ಲಿ ಬಸ್ ಚಲಾಯಿಸುತ್ತಿತ್ತು.
ಈ ಸಂದರ್ಭದಲ್ಲಿ ಕಾಂಜೀರಪಳ್ಳಿಯ ಪೂತಕುಳಿಯ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾಂಜೀರಪಳ್ಳಿ...
ಶಬರಿಮಲೆ ಅಯ್ಯಪ್ಪ ದೇವಾಸ್ಥಾನದ ಚಿನ್ನದ ತಟ್ಟೆಗಳ ಕಳ್ಳತನ ಪ್ರಕರಣಕ್ಕೆ ಹೊಸ ಬೆಳಕು ಬಂದಿದೆ. ದೇವಸ್ಥಾನಕ್ಕೆ ನೀಡಿರುವ ಚಿನ್ನದ ತಟ್ಟೆಗಳನ್ನು ಪ್ರಾಯೋಜಕರು ತಮ್ಮ ಕುಟುಂಬದ ಮದುವೆ ಉದ್ದೇಶಕ್ಕಾಗಿ ಬಳಸಲು ಅನುಮತಿ ಕೇಳಿದ್ದರು ಎಂಬುದು ಇದೀಗ ಮುಂಗಡ ದಾಖಲೆಗಳಿಂದ ಹೊರಬಂದಿದೆ.
ಪ್ರಾಯೋಜಕರಾದ ಉನ್ನಿಕೃಷ್ಣನ್ ಪೊಟ್ಟಿ ಡಿಸೆಂಬರ್ 9, 2019ರಂದು ತಿರುವಾಂಕೂರು ದೇವಸ್ವಂ ಮಂಡಳಿಗೆ ಪತ್ರ ಬರೆದು, ದೇವಾಲಯದ ಗರ್ಭಗುಡಿಯಲ್ಲಿ...
ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 2001ರ ಇದೇ ದಿನದಂದು ಗುಜರಾತ್ನ ಸಿಎಂ ಆಗಿ ಪ್ರಮಾಣವಚನ ತೆಗೆದುಕೊಂಡಿದ್ದ ಪ್ರಧಾನಿ ಮೋದಿ, ಅಲ್ಲಿಂದ ಇಲ್ಲಿಯವರೆಗೂ ಸತತ 24 ವರ್ಷಗಳ ಸರ್ಕಾರದ ಮುಖಸ್ಥರಾಗಿ ಕೆಲಸ ಮಾಡಿದ ಅವರು ಮಂಗಳವಾರ ಟ್ವೀಟ್ ಮೂಲಕ ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ತಮ್ಮ 24 ವರ್ಷಗಳ ಅವಧಿಯಲ್ಲಿ...
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದ ವಿಚಿತ್ರ ಘಟನೆ ಅಧಿಕಾರಿಗಳನ್ನು ಅಚ್ಚರಿಗೊಳಿಸಿದೆ. ಸಾಮಾನ್ಯವಾಗಿ ಈ ಜಿಲ್ಲೆಯಲ್ಲಿ ಸಮಾಧಾನ್ ದಿವಸ್ ಕಾರ್ಯಕ್ರಮದ ವೇಳೆ ನಿವಾಸಿಗಳು ವಿದ್ಯುತ್, ರಸ್ತೆ ಹಾಗೂ ಪಡಿತರ ಚೀಟಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಆದರೆ ಮಹಮೂದಾಬಾದ್ ಪ್ರದೇಶದ ಲೋಧ್ಸಾ ಗ್ರಾಮದ ನಿವಾಸಿ ಮೆರಾಜ್ ಈ ಬಾರಿ ವಿಚಿತ್ರ ಕೌಟುಂಬಿಕ ವಿಷಯವನ್ನು ಮನಗಂಡಿದ್ದಾರೆ.
ಮೆರಾಜ್...
ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ದಲಿತ ಯುವಕ ಹರಿಯೋಮ್ ವಾಲ್ಮೀಕಿ ಅವರ ಕ್ರೂರ ಹತ್ಯೆ ಪ್ರಕರಣಕ್ಕೆ ದೇಶದಾದ್ಯಾಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಹತ್ಯೆಯನ್ನ ದೇಶದ ಸಂವಿಧಾನಾತ್ಮಕ ಮೌಲ್ಯಗಳ ಮೇಲೆ ಎಸಗಿದ ಹಲ್ಲೆ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತು ಪ್ರತ್ಯೇಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ....
ಲಾಟರಿ ಲಾಟರಿ ಬಂಪರ್ ಲಾಟರಿ… ಅದೃಷ್ಟ ಎಂದರೆ ಇದೇ ಇರಬಹುದು. ಆಲಪ್ಪುಳ ಜಿಲ್ಲೆಯ ತುರವೂರಿನ ಶರತ್ ಎಸ್. ನಾಯರ್ ಅವರ ಜೀವನ ಒಂದು ಕ್ಷಣದಲ್ಲಿ ಬದಲಾದಂತಾಗಿದೆ. ನೆಟ್ಟೂರಿನ ನಿಪ್ಪಾನ್ ಪೇಂಟ್ಸ್ ಅಂಗಡಿಯಲ್ಲಿ ಕೆಲಸ ಮಾಡುವ ಈ ಯುವಕ, ಮೊದಲ ಬಾರಿಗೆ ಓಣಂ ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದರು. ಅದೇ ಟಿಕೆಟ್ 2025ರ ಓಣಂ ಬಂಪರ್ನಲ್ಲಿ...
ರಾಜಸ್ಥಾನದ ಕುಚಮನ್ನಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ನಡೆದಿದೆ. ರಮೇಶ್ ರುಲಾನಿಯಾ ಮೇಲೆ ಮೂವರು ಮುಸುಕುಧಾರಿಗಳು ಗುಂಡು ಹಾರಿಸಿ ಪರಾರಿಯಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ರಮೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಬೆಳಗ್ಗೆ...
ಜಾನಪದ ಗಾಯಕಿ ಮೈಥಿಲಿ ಠಾಕೂರ್, ಬಿಹಾರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸ್ತಾರಾ? ಹೀಗೊಂದು ಪ್ರಶ್ನೆ ಸದ್ಯ ಭಾರೀ ಚರ್ಚೆಯಾಗ್ತಿದೆ. ಯಾಕಂದ್ರೆ, ಬಿಜೆಪಿ ಚುನಾವಣಾ ಉಸ್ತುವಾರಿ ವಿನೋದ್ ತಾವ್ಡೆ ಮತ್ತು ಕೇಂದ್ರ ಸಚಿವ ನಿತ್ಯಾನಂದ ರೈ ಅವರನ್ನು, ಮೈಥಿಲಿ ಠಾಕೂರ್ ಭೇಟಿಯಾಗಿದ್ದು, ಊಹಾಪೋಹ ಹುಟ್ಟುಹಾಕಿದೆ.
ಮೈಥಿಲಿ ಠಾಕೂರ್ ಭೇಟಿ ಫೋಟೋಗಳನ್ನು, ವಿನೋದ್ ತಾವ್ಡೆ ಟ್ವಿಟ್ಟರ್ನಲ್ಲಿ ಹಂಚಿಕೊಂಡ ಬಳಿಕ ವದಂತಿಗಳು...
Sandalwood: ಇಷ್ಟು ದಿನ ಅನಾರೋಗ್ಯದಿಂದ ನರಳುತ್ತಿದ್ದ ನಟಿ ಲಲೀತಮ್ಮಾ ಇಂದು ನಿಧರನಾಗಿದ್ದಾರೆ. ಇವರು ಹಲವು ದಿನಗಳಿಂದ ನಡೆಯಲು ಸಾಧ್ಯವಾಗದೇ ವ್ಹೀಲ್ಚೇರ್ ಬಳಸುತ್ತಿದ್ದರು.
65 ವರ್ಷದ ಲಲೀತಮ್ಮ ಅವರಿಗೆ...