ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೆಗ್ಗಣದೊಡ್ಡಿ ಗ್ರಾಮದಿಂದ ಚಿಗರಿ ಹಾಳ ಗ್ರಾಮಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶ್ರೀ ಕೃಷ್ಣಸಾಯಿ ಪಬ್ಲಿಕ್ ಶಾಲೆಯ ವಾಹನ ನಡು ರಸ್ತೆಯಲ್ಲಿ ಅಪಘಾತಕ್ಕೊಳಗಾಗಿದೆ.
'ಕೆಂಭಾವಿ–ಟಾಟಾ ರಸ್ತೆ ಬಳಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಅಪಘಾತದಲ್ಲಿ ಮೂರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳು ಆಗಿದ್ದು, ಅವರನ್ನು ತಕ್ಷಣವೇ ಸುರಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದ...
ಶಾಲಾ ಶಿಕ್ಷಣ ಇಲಾಖೆ ತುಮಕೂರು ವತಿಯಿಂದ ಪರೀಕ್ಷಾ ಮಿತ್ರ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು SVP ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ KN ರೇಣುಕಯ್ಯ ತಿಳಿಸಿದರು. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪರೀಕ್ಷಾ ಮಿತ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದಾರೆ.
SSLC, PUC ಫಲಿತಾಂಶ ಗಣನೀಯವಾಗಿ ಕಡಿಮೆ ಆಗುತ್ತಿರುವುದನ್ನು...
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ NDA ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಈ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಹೊಸ ಉತ್ಸಾಹ ಮೂಡಿದೆ. ಭವಿಷ್ಯದಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಮಾದರಿಯಲ್ಲಿ ಯಶಸ್ಸು ಸಾಧಿಸಲು ಉಭಯ ಪಕ್ಷಗಳು ಚಿಂತನೆ ನಡೆಸುತ್ತಿದ್ದಾರೆ. ರಾಜಕೀಯ ತಜ್ಞರು ಹೇಳುತ್ತಿರುವಂತೆ, ಬಿಹಾರದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಪ್ರಾದೇಶಿಕ...
ಮಂಡ್ಯ: ಜಿಲ್ಲೆಯಾದ್ಯಂತ ಸಿಪಿಐ(ಎಂ) ವತಿಯಿಂದ ಜನಪರ ಹೋರಾಟದ ಘೋಷಣೆ. ನವೆಂಬರ್ 15ರಿಂದ ಡಿಸೆಂಬರ್ 15ರವರೆಗೆ ಜನಾಂದೋಲನ ನಡೆಯಲಿದ್ದು, ರಾಜ್ಯ ಸರ್ಕಾರದ ವಿರುದ್ಧ 21 ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿಗೆ ಕಾವೇರಿ ನೀರಿನ 5ನೇ ಹಂತದ ಯೋಜನೆಗೆ ವಿರೋಧ, ಕಬ್ಬಿನ ಟನ್‌ಗೆ 5500 ಬೆಲೆ, ಉದ್ಯೋಗ ಖಾತರಿಯಡಿ 200 ದಿನಗಳ ಕೆಲಸ ಮತ್ತು ದಿನಕ್ಕೆ...
ಕರ್ನಾಟಕ ಭಾರತದ ಅತಿದೊಡ್ಡ ರೇಷ್ಮೆ ಉತ್ಪಾದಕ ರಾಜ್ಯ. ಈಗ ಮತ್ತೊಂದು ಐತಿಹಾಸಿಕ ಹೆಗ್ಗಳಿಕೆಯನ್ನು ಪಡೆಯುತ್ತಿದೆ. ರೇಷ್ಮೆ ಸೀರೆಗಳಿಗಾಗಿಯೇ ಪ್ರಸಿದ್ಧಿ ಪಡೆದ ಮೈಸೂರಿನಲ್ಲಿ, ದೇಶದ ಮೊದಲ ರೇಷ್ಮೆ ಮ್ಯೂಸಿಯಂ ಸ್ಥಾಪನೆಯಾಗುತ್ತಿದೆ. ಈ ಸಂಗ್ರಹಾಲಯವು ಭಾರತದಲ್ಲಿ ರೇಷ್ಮೆಯ ಸಂಪೂರ್ಣ ಇತಿಹಾಸವನ್ನು, ಹುಳುಗಳಿಂದ ಬಟ್ಟೆಯವರೆಗಿನ ಪ್ರತಿ ಹಂತವನ್ನು ಪ್ರದರ್ಶಿಸಲಿದೆ.
ಕೇಂದ್ರ ರೇಷ್ಮೆ ಮಂಡಳಿಯ ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆ...
ಮುಂಬರುವ ಡಿಸೆಂಬರ್‌ನಲ್ಲಿ ಚಳಿಗಾಲ ಅಧಿವೇಶನ ಆರಂಭಗೊಳ್ಳಲಿದೆ. ಈ ಹಿನ್ನೆಲೆ, ಎಲ್ಲಾ ಇಲಾಖೆಗಳ ಸಮನ್ವಯ ಮತ್ತು ದೋಷರಹಿತ ವ್ಯವಸ್ಥೆಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಬುಧವಾರ ಸುವರ್ಣ ವಿಧಾನಸೌಧದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಬಾರಿಯಂತೆ ಈ ಬಾರಿಯೂ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು....
ಬೀದರ್‌ನಲ್ಲಿ ಕಬ್ಬು ಬೆಳೆಗೆ ₹3,500 ರಷ್ಟು ದರ ನೀಡುವಂತೆ ರೈತರು ಬೃಹತ್ ಹೋರಾಟ ನಡೆಸಿದರು. ಆದರೆ ಹೋರಾಟದ ವೇಳೆ ಪ್ಲೆಕ್ಸ್ ಬ್ಯಾನರ್ ವಿಚಾರ ಗಲಾಟೆಗೆ ತಿರುಗಿ, ರೈತರು ಹಾಗೂ ಪೊಲೀಸರ ನಡುವೆ ಉದ್ವಿಗ್ನತೆ ಉಂಟಾಯಿತು.
ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮತ್ತು ಈಶ್ವರ ಖಂಡ್ರೆ ಅವರ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಲು...
ಹುಬ್ಬಳ್ಳಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳ ಟ್ರಯಾಂಗಲ್ ಲವ್ ಸ್ಟೋರಿ ರಕ್ತಪಾತಕ್ಕೆ ಕಾರಣವಾಗಿದೆ. ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ಸ್ನೇಹಿತರ ನಡುವಿನ ಕಲಹ ಉಂಟಾಗಿದೆ. ಬರ್ತ್‌ಡೇ ಪಾರ್ಟಿಯಲ್ಲೇ ಚಾಕು ಇರಿತದ ರೂಪ ಪಡೆದುಕೊಂಡಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ಗ್ಲೋಬಲ್ ಕಾಲೇಜು ಮುಂಭಾಗದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ...
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಕೌಟುಂಬಿಕ ಕಲಹದ ವಿಚಾರಣೆಗೆ ತೆರಳಿದ್ದ ASI ಹಾಗೂ PSI ಮೇಲೆಯೇ ದಂಪತಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಗೆಂದು ತೆರಳಿದ್ದ ASI ವೆಂಕಟಪ್ಪ ನಾಯಕ್ ಮತ್ತು PSI ವೆಂಕಟೇಶ್ ಮೇಲೆ ದಂಪತಿ ಹಿಂಸಾತ್ಮಕವಾಗಿ ವರ್ತಿಸಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುದಗಲ್ ಪೊಲೀಸ್...
ಮಂಡ್ಯ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿಯನ್ನು ಅಂಗವಾಗಿ ಜಿಲ್ಲಾ ಮಟ್ಟದ ಪಾದಯಾತ್ರೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಅತ್ಯಂತ ಮುಖ್ಯ, ಅದರಲ್ಲೂ ಯುವಜನತೆ ದೇಶದ ನಿಜವಾದ ಶಕ್ತಿ ಎಂದರು. ಯುವಕರು...
Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ.
ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...