Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ“ಂಡಿದ್ದಾರೆ.
ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ ಪತ್ನಿ ಸೇರಿ, ಪೌರ ಕಾರ್ಮಿಕರಿಗೆ ಅರಿಶಿನ-ಕುಂಕುಮ ಮತ್ತು ಧವಸ ಧಾನ್ಯಗಳನ್ನು ನೀಡಿ, ಜ್ಮನದಿನವನ್ನು ಆಚರಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಮಂಜುನಾಥ್, ಇಂದು ನನ್ನ ಜನ್ಮದಿನ. ಅದೇ ದಿನ ಪೌರ ಕಾರ್ಮಿಕರ ದಿನವೂ ಆಗಿರುವುದು ನನಗೆ ಇನ್ನಷ್ಟು ವಿಶೇಷ ಹಾಗೂ ಭಾವನಾತ್ಮಕ ಕ್ಷಣ. ನಾವು ಪ್ರತಿದಿನ ಸ್ವಚ್ಛವಾದ ಪರಿಸರದಲ್ಲಿ ಉಸಿರಾಡಲು, ಆರೋಗ್ಯಕರ ಬದುಕು ನಡೆಸಲು ತಮ್ಮ ಶ್ರಮವನ್ನು ಮೌನವಾಗಿ ಅರ್ಪಿಸುವ ಪೌರ ಕಾರ್ಮಿಕರ ಸೇವೆಯನ್ನು ಸ್ಮರಿಸಿ, ಅವರಿಗೆ ಅರಿಶಿನ-ಕುಂಕುಮ ಹಾಗೂ ದಿನಸಿ ಪದಾರ್ಥಗಳನ್ನು ನೀಡಿ ಗೌರವಿಸಲಾಯಿತು.
ನಮ್ಮ ನಗರವನ್ನು ಸ್ವಚ್ಛವಾಗಿಡುವ ಅವರ ಕೈಗಳಿಗೆ ಗೌರವ ಸಲ್ಲಿಸಿದಾಗಲೇ, ನನ್ನ ಜನ್ಮದಿನದ ಆಚರಣೆಗೆ ನಿಜವಾದ ಅರ್ಥ ಸಿಕ್ಕಂತಾಯಿತು. ನನ್ನ ಸಂತೋಷವನ್ನು ಅವರೊಂದಿಗೆ ಹಂಚಿಕೊಂಡ ಈ ದಿನ, ನನ್ನ ಪಾಲಿಗೆ ಸದಾ ನೆನಪಿನಲ್ಲಿ ಉಳಿಯುವ ಅತ್ಯಂತ ಅರ್ಥಪೂರ್ಣ ಜನ್ಮದಿನ.




