Political News: ಇಂದು ರಾಮನಗರ ಜಿಲ್ಲಾಧಿಕಾರಿ ಕಛೇರಿ ಎದುರು ಕಳೆದ 3 ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಕಲಚೇತನರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ನಿಖಿಲ್ ಕುಮಾರ್ ಭಾಗವಹಿಸಿ ಪ್ರತಿಭಟನೆಗೆ ಬೆೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ನಿಖಿಲ್, ಪ್ರತಿಭಟನಾಕಾರರ ಅಹವಾಲು ಆಲಿಸಿ, ನಿಮ್ಮ ಹೋರಾಟದ ಕೊನೆಯವರೆಗೂ ನಾನು ನಿಮ್ಮ ಜೊತೆ ಇರುತ್ತೇನೆ. ನೀವು ಯಾರೂ ಧೃತಿಗೆಡಬೇಡಿ. ನಿಮ್ಮ ಜೊತೆ ದೇವೇಗೌಡರ ಕುಟುಂಬ ಸದಾ ಇರುತ್ತದೆ ಎಂದು ಧೈರ್ಯ ತುಂಬಿದರು.
ಈಗಿನ ಸರ್ಕಾರ ನಿಮ್ಮನ್ನು ಬೀದಿಗೆ ಬಿಟ್ಟಿದೆ. ಸರ್ಕಾರ ದಿವಾಳಿಯಾಗಿದೆ. ಸರ್ಕಾರದ ಬಳಿ ಹಣವಿಲ್ಲ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳೇ ಹೇಳುತ್ತಿದ್ದಾರೆ. ಇಂತಹ ಸಂಪದ್ಭರಿತ ರಾಜ್ಯವನ್ನು ಈ ಸರ್ಕಾರ ದಿವಾಳಿ ಮಾಡಿದೆ. ಕಳೆದ ಹಲವು ತಿಂಗಳುಗಳಿಂದ ವಿಶೇಷ ಚೇತನರಿಗೆ ಮಾಸಾಶನ ಬಂದಿಲ್ಲ. ಗೌರವಧನ ಏರಿಕೆಯನ್ನೂ ಸರ್ಕಾರ ಮಾಡುತ್ತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಿಶೇಷ ಚೇತನರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಿಖಿಲ್ ಸರ್ಕಾರನವನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ಸಬ್ಬಕೆರೆ ಶಿವಲಿಂಗಪ್ಪ, ಶ್ರೀ ಕಾಂತರಾಜು, ಶ್ರೀ ಉಮೇಶ್, ಶ್ರೀ ಬಾಲಗೆರೆ ರವಿ, ಶ್ರೀ ಅಂಜನಾಪುರ ವಾಸು, ಶ್ರೀ ಪಾಂಡು, ಶ್ರೀ ಚಂದ್ರು, ಶ್ರೀ ದೇವರಾಜು, ಶ್ರೀ ಮೂರ್ತಿ, ಶ್ರೀ ಗೋವಿಂದರಾಜು, ಶ್ರೀ ಸುಗ್ಗನಹಳ್ಳಿ ರಾಮಕೃಷ್ಣ, ಶ್ರೀ ನವಚೇತನ ಮಂಜುನಾಥ್ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.




