ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟದ್ದು ಅಭಿವೃದ್ಧಿಯಲ್ಲ, ಬರೀ ಚೊಂಬು!: ಬಿಜೆಪಿಯಿಂದ ಪ್ರತಿಭಟನೆ

Political News: ಬಿಜೆಪಿಗರು ಎಂದು ವಿಧಾನಸೌಧದ ಎದುರು ಕಾಂಗ್ರೆಸ್ ಸರ್ಕಾರದ ವಿರುದ್ಧ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯ ಸರ್ಕಾರದ ಬೊಕ್ಕಸ ಖಾಲಿ – ಇನ್ನಾದರೂ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವುದನ್ನು ನಿಲ್ಲಿಸಲಿ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯೇ ಈ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎನ್ನುವುದನ್ನು ಬಹಿರಂಗಪಡಿಸಿದೆ. ಕೇವಲ ಪ್ರಚಾರಕ್ಕಾಗಿ, ಜನರಿಗೆ ಸುಳ್ಳು ಆಶ್ವಾಸನೆ ನೀಡಿ ವಂಚಿಸುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ನೈತಿಕವಾಗಿಯೂ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಸಾವಿರಾರು ಕೋಟಿ ರೂಪಾಯಿಗಳ ಪೊಳ್ಳು ಘೋಷಣೆಗಳ ಹಿಂದೆ ಖಾಲಿಯಾಗಿರುವ ರಾಜ್ಯದ ಖಜಾನೆಯ ಚೊಂಬಿನ ಸದ್ದು ಮಾತ್ರ ಕೇಳುತ್ತಿದೆ. ಜನರಿಗೆ ಕೊಟ್ಟ ಭರವಸೆಗಳಿಗೆ ಹಣವಿಲ್ಲ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವಿಲ್ಲ, ಆದರೆ ಪ್ರಚಾರ ಮತ್ತು ಜಾಹೀರಾತುಗಳಿಗೆ ಮಾತ್ರ ಕೊರತೆಯಿಲ್ಲ. ಇದು ಕಾಂಗ್ರೆಸ್ ಸರ್ಕಾರದ ಹಣೆಬರಹ. ಸ್ವತಃ ಸರ್ಕಾರದ ಹಣಕಾಸು ಇಲಾಖೆಯ ಎಚ್ಚರಿಕೆಯೇ ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆಯ ಅಸಲಿಯತ್ತನ್ನು ಬಯಲು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜನರ ತೆರಿಗೆ ಹಣವನ್ನು ಅಭಿವೃದ್ಧಿಗೆ ಬಳಸಬೇಕಾದ ಸರ್ಕಾರ, ಜನರ ಕೈಗೆ ಚೊಂಬು ಕೊಡುವ ಸ್ಥಿತಿ ತಂದಿಟ್ಟಿದೆ. ಮುಖ್ಯಮಂತ್ರಿಗಳೇ, ರಾಜ್ಯದ ಜನರಿಗೆ ಇನ್ನು ನಿಮ್ಮ ಪೊಳ್ಳು, ಸುಳ್ಳು ಘೋಷಣೆಗಳ ಅಗತ್ಯವಿಲ್ಲ. ಜನರಿಗೆ ನಿಜವಾದ ಲೆಕ್ಕ ಬೇಕು. ಕರ್ನಾಟಕದ ಆರ್ಥಿಕ ಸ್ಥಿತಿ ಏನು? ರಾಜ್ಯದ ಒಟ್ಟು ಹಣಕಾಸಿನ ಬದ್ಧತೆ ಎಷ್ಟು? ಹೊಸ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ? ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಸರ್ಕಾರ ಉತ್ತರಿಸಬೇಕು.

ಜನರ ಮುಂದೆ ದೊಡ್ಡ ಖಾಲಿ ಚೊಂಬು ಹಿಡಿದು ಬರೀ ಸದ್ದು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಜನರು ನಿಜವಾದಲೆಕ್ಕ ಕೇಳುತ್ತಿದ್ದಾರೆ. ಉತ್ತರ ಕೊಡುವಿರಾ ಮುಖ್ಯಮಂತ್ರಿಗಳೇ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

 

About The Author