Thursday, September 24, 2026

ಜಿಲ್ಲಾ ಸುದ್ದಿಗಳು

ತಮ್ಮನ ಅಕಾಲಿಕ ಸಾವು ಅಣ್ಣನ ಹೃದಯ ನಿಲ್ಲಿಸಿತು!

ಅಣ್ಣ–ತಮ್ಮ ಎನ್ನುವುದು ಕೇವಲ ಸಂಬಂಧವಲ್ಲ… ಅದು ಹೃದಯದಿಂದ ಹುಟ್ಟುವ ಸುಂದರ ಬಾಂಧವ್ಯ. ಆಸ್ತಿಗಾಗಿ ಜಗಳವಾಡುವ ಸಹೋದರರು ಒಂದು ಕಡೆ ಇದ್ದರೆ, ಬದುಕಿನ ಕೊನೆಯ ಕ್ಷಣಗಳಲ್ಲೂ ಬಾಂಧವ್ಯದ ನಂಟು ಅಳೆಯದ ಈ ಅಣ್ಣ–ತಮ್ಮರ ಕಥೆ ಮತ್ತೊಂದು ಕಡೆ. ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಇಡೀ ಊರನ್ನು ಮೌನದಲ್ಲಿ...

ತುಮಕೂರು ಬಳಿ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು!

ತುಮಕೂರು ತಾಲ್ಲೂಕಿನ ಬೆಳಧರ ಗೇಟ್ ಬಳಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಮುಖಾಮುಖಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಇದ್ದ ಐವರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಧರ್ಮಸ್ಥಳಕ್ಕೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೃತರಾದವರು ಕೊರಟಗೆರೆ ತಾಲ್ಲೂಕಿನವರು. ಕತ್ತಿನಾಗೇನಹಳ್ಳಿಯ ಶಿವಕುಮಾರ್ (28), ಬೈಚಾಪುರದ ಶಿವಶಂಕರ್ (28),...

ಹೆತ್ತ ತಾಯಿಗೆ ಯಮನಾದ ಪಾಪಿ ಪುತ್ರ

ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗನ ನಡುವೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯವಾಗಿದೆ. ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕದಾಳು ಚನ್ನಾಪುರ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. 19 ವರ್ಷದ ಪುತ್ರ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಕಂಠಪೂರ್ತಿ ಕುಡಿದಿದ್ದ ಸಂತೋಷ್ ಮನೆಗೆ ಬಂದಿದ್ದ. ಅಡುಗೆ ಮಾಡದ ವಿಚಾರಕ್ಕೆ ತಾಯಿ ಪ್ರೇಮ ಜೊತೆ ಜಗಳ ಶುರು ಮಾಡಿದ್ದಾನೆ....

ವಜಾ ಹಿಂದೆ ರಾಜಕೀಯ ಷಡ್ಯಂತ್ರ..?

ಸೂಕ್ತ ಕಾರಣವಿಲ್ಲದೇ ಡೇರಿ ಆಡಳಿತ ಮಂಡಳಿ ವಜಾ ಮಾಡಿರುವುದನ್ನು ವಿರೋಧಿಸಿ, ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಸಹಕಾರ ಇಲಾಖೆ ಸಹಾಯಕ ನಿಬಂಧಕರ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ರಾಜಕೀಯ ದುರುದ್ದೇಶದಿಂದ ಆಡಳಿತ ಮಂಡಳಿ ವಜಾಗೊಳಿಸಲಾಗಿದೆ. ಹೊಸದಾಗಿ ಡೇರಿ ಕಾರ್ಯದರ್ಶಿ ನೇಮಕವಾದ ಬಳಿಕ ಈ ರೀತಿ ಮಾಡಲಾಗಿದೆ. ನಿಯಮ...

ಕೃಷ್ಣೆಗಾಗಿ ರಾಜ್ಯದಲ್ಲಿ ಹೋರಾಟದ ಕಹಳೆ

ರಾಜ್ಯದ 3 ಜಿಲ್ಲೆಗಳಿಗೆ ಕೃಷ್ಣಾ ನದಿ ನೀರನ್ನು ತರುವ, ಗಂಭೀರ ಪ್ರಯತ್ನಕ್ಕೆ ವೇದಿಕೆ ಸಿದ್ಧವಾಗಿದೆ. ಹಲವು ದಶಕಗಳಿಂದ ಕಾವೇರಿ ಕೊಳ್ಳದ ನೀರಿಗಾಗಿ, ಜಾತಕ ಪಕ್ಷಿಯಂತೆ ಕಾಯುತ್ತಾ ಕೂತಿದ್ರೂ, ಕನಸು ನನಸಾಗುವ ಲಕ್ಷಣಗಳು ಕಾಣಿಸ್ತಿಲ್ಲ. ಹೀಗಾಗಿ ನೆರೆಯ ಆಂಧ್ರ ಪ್ರದೇಶದ ಕುಪ್ಪಂನಲ್ಲಿ ಹರಿಯುತ್ತಿರುವ ಕೃಷ್ಣೆಯನ್ನು, ರಾಜ್ಯಕ್ಕೆ ತರಲು ಪ್ರಯತ್ನ ಶುರುವಾಗಿದೆ. ಕೃಷ್ಣಾ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು...

ಜಾತಿಗಣತಿಯ ಪ್ರಶ್ನೆಗಳು ಟು ಮಚ್‌ ಯಾ..

ಬೆಂಗಳೂರಲ್ಲಿ ಇಂದಿನಿಂದ ಜಾತಿ ಗಣತಿಯ ಸಮೀಕ್ಷೆ ಶುರುವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮನೆಗೆ ಗಣತಿದಾರರು ಹೋಗಿ ಸಮೀಕ್ಷೆ ನಡೆಸಿದ್ದಾರೆ. ಪ್ರಾರಂಭದಲ್ಲಿ ತಾಳ್ಮೆಯಿಂದಲೇ ಇದ್ದ ಡಿಕೆಶಿ, ಕೆಲ ಹೊತ್ತಿನ ಬಳಿಕ ಗರಂ ಆಗಿದ್ದಾರೆ. ಬರೋಬ್ಬರಿ 1 ಗಂಟೆಗಳ ಕಾಲ ಸಾಲು, ಸಾಲು ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ಸುಸ್ತಾಗಿದ್ದಾರೆ. ಬಳಿಕ ಇದೆಲ್ಲಾ ಬೇಕಾ ಅಂತಾ ಪ್ರಶ್ನಿಸಿದ್ದಾರೆ. ಸಮೀಕ್ಷೆಯಲ್ಲಿ ಜನ್ಮ ಜಿಲ್ಲೆ...

ಯಲ್ಲಾಲಿಂಗ ಸಾವು ಕೊಲೆಯಲ್ಲ, ಆತ್ಮಹತ್ಯೆ – 9 ಆರೋಪಿಗಳಿಗೆ ಕ್ಲೀನ್‌ಚಿಟ್!!!

ಕೊಪ್ಪಳ ಜಿಲ್ಲೆಯ ಹುಲಿಹೈದರ ಗ್ರಾಮದ ಯುವಕ ಯಲ್ಲಾಲಿಂಗನ ಸಾವಿಗೆ ಸಂಬಂಧಿಸಿದ 2013ರಲ್ಲಿ ದಾಖಲಾಗಿದ್ದ ಚರ್ಚಿತ ಕೊಲೆ ಪ್ರಕರಣಕ್ಕೆ ಕೊನೆಗೂ ನ್ಯಾಯಾಲಯ ತೀರ್ಪು ನೀಡಿದೆ. ಕೊಲೆಯಲ್ಲ, ಆತ್ಮಹತ್ಯೆ ಎಂದು ಪರಿಗಣಿಸಿರುವ ನ್ಯಾಯಾಲಯ, ಈ ಪ್ರಕರಣದಲ್ಲಿ ಆರೋಪಿತರಾದ ಸಚಿವ ಶಿವರಾಜ್ ತಂಗಡಗಿಯ ಆಪ್ತ ಹನುಮೇಶ ನಾಯಕ ಸೇರಿದಂತೆ ಒಂಬತ್ತು ಮಂದಿಗೆ ಖುಲಾಸೆ ನೀಡಿದೆ. 2015ರಲ್ಲಿ ಯಲ್ಲಾಲಿಂಗನ ಶವ ಕೊಪ್ಪಳದ...

ಮದ್ಯ, ಜೂಜಾಟ ಮುಕ್ತ ಗ್ರಾಮ ಬಿನ್ನಾಳದಲ್ಲಿ ಗಾಂಧಿ ಚಿಂತನ ಸಭಾ!

ಮದ್ಯಪಾನ ಮತ್ತು ಜೂಜಾಟ ಮುಕ್ತ ಗ್ರಾಮ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದಲ್ಲಿ ಪಾದಯಾತ್ರೆ ಮಾಡುವ ಮೂಲಕ ಗಾಂಧಿ ಜಯಂತಿ ನಿಮಿತ್ಯ ಗಾಂಧಿ ಚಿಂತನ ಸಭಾ ಅದ್ದೂರಿಯಾಗಿ ಜರುಗಿದೆ. ಆದ್ಯಾತ್ಮಿಕ ಬಿನ್ನಾಳ ಗ್ರಾಮ ಶ್ರೀ ಜಯದೇವ ಮುರುಘರಾಜೇಂದ್ರ ಜಗದ್ಗುರುಗಳು ಜನಿಸಿದ ಗ್ರಾಮ ಪ್ರಸ್ತುತ ಮೇಘಾಲಯ ರಾಜ್ಯಪಾಲರು ಸಿ.ಎಚ್. ವಿಜಯಶಂಕರ ಮೂಲ ಊರು ಬಿನ್ನಾಳದಲ್ಲಿ ಗಾಂಧಿ ತತ್ವ...

ಯಾರು ಸಿಎಂ ಆದರೂ ಲಾಭ ಇಲ್ಲ – ಭ್ರಷ್ಟಾಚಾರ–ಬೆಲೆ ಏರಿಕೆ ಬಗ್ಗೆ ಕಿಡಿ!

ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ಬಗ್ಗೆ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಟೀಕೆ ಮಾಡಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಮಂತ್ರಿಗಳು ಜನರ ಸಂಪರ್ಕ ಕಳೆದುಕೊಂಡಿದ್ದು, ಸಹಕಾರ ಸಂಘಗಳ ಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ. ಜನರ ಕಷ್ಟಗಳನ್ನು ಕೇಳುವ ಸಂವೇದನೆ ಮಂತ್ರಿಗಳಲ್ಲಿ ಇರಲಿಲ್ಲ. ಈಗಲಾದರೂ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಯಾರು ಸಿಎಂ ಆಗುತ್ತಾರೋ ಮುಖ್ಯವಲ್ಲ, ಜನ...

ಸಿದ್ದರಾಮಯ್ಯ ಬರ್ತಾರೆ ಬಿರಿಯಾನಿ ತಿಂದು ಹೋಗ್ತಾರೆ – ಆರ್. ಅಶೋಕ್ ಕಿಡಿ!

ರಾಜ್ಯದ ಮಳೆ ಹಾನಿಗೆ ಕೇಂದ್ರ ಸರ್ಕಾರ ಈಗಾಗಲೇ NDRF ಅನುದಾನ ಬಿಡುಗಡೆ ಮಾಡಿದೆ. ಆದರೆ ಆ ಹಣವನ್ನು ರೈತರ ಪರಿಹಾರಕ್ಕೆ ಬಳಸದೆ, ರಾಜ್ಯ ಸರ್ಕಾರ ತನ್ನ ಉಚಿತ ಯೋಜನೆಗಳಿಗೆ ವರ್ಗಾಯಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲೆ ನಾಗನೂರಿನಲ್ಲಿ ಬೆಳೆ ಹಾನಿಗೊಳಗಾದ ರೈತರೊಂದಿಗೆ ನಡೆದ ಸಭೆಯಲ್ಲಿ ಆರ್. ಅಶೋಕ್...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img