ಹಣ ಉಳಿಸೋಕೆ ಐಡಿಯಾ ಮಾಡಿದ ಕಾಂಗ್ರೆಸ್ ಶಾಸಕರೊಬ್ರು, ಪುದುಚೇರಿಯಲ್ಲಿ ಕಾರು ನೋಂದಣಿ ಮಾಡಿಸಿ ಸಿಕ್ಕಿಬಿದ್ದಿದ್ದಾರೆ. ನಾಗಠಾಣ ಮೀಸಲು ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ವಿರುದ್ಧ ಸರ್ಕಾರಕ್ಕೆ ತೆರಿಗೆ ಕಟ್ಟದ ಆರೋಪ ಕೇಳಿ ಬಂದಿದೆ.
ಶಾಸಕ ವಿಠ್ಠಲ ಕಟಕದೊಂಡ ಬಳಸುತ್ತಿರುವ ಕಾರು, ಪುದುಚೇರಿಯ ವಿಲ್ಲೈನೂರ್ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ. 2024ರ ಜುಲೈ 17ರಂದು ಖರೀದಿಸಿರುವ PY05 VE9836...
415ನೇ ಶ್ರೀರಂಗಪಟ್ಟಣ ದಸರಾಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು, ಶ್ರೀರಂಗಪಟ್ಟಣ ದಸರಾ ಉದ್ಘಾಟನೆ ಮಾಡಿದ್ರು. ಇಂದಿನಿಂದ 4 ದಿನಗಳ ಕಾಲ ದಸರಾ ಮಹೋತ್ಸವ ನಡೆಯಲಿದೆ. ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯ ಬಳಿಕ, ಪುಷ್ಪಾರ್ಚನೆ ಮಾಡಿ ಜಂಬೂಸವಾರಿಗೆ ವಿದ್ಯುಕ್ತ ಚಾಲನೆ ನೀಡಲಾಯ್ತು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ...
ಗಂಗಾರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ, "ಕಾವೇರಿ ಆರತಿ" ಮಾಡಲಾಗ್ತಿದೆ. ಸೆಪ್ಟೆಂಬರ್ 26ರ ಶುಕ್ರವಾರದಿಂದ 5 ದಿನಗಳ ಕಾಲ, ಬೃಂದಾವನ ಉದ್ಯಾನವನದಲ್ಲಿ ನೆರವೇರಲಿದೆ. ಮಧುವಣಗಿತ್ತಿಯಂತೆ ಕೆಆರ್‌ಎಸ್ ಸಿಂಗಾರಗೊಂಡಿದೆ. ಇಂದು ಸಂಜೆ 6 ಗಂಟೆಗೆ ಕಾವೇರಿ ನದಿಗೆ ಪುಷ್ಪಾರ್ಚನೆ ಮೂಲಕ, ಕಾವೇರಿ ಆರತಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ತರಬೇತಿ ಪಡೆದ 12ರಿಂದ 13...
ಹೃದಯ ಶಸ್ತ್ರಚಿಕಿತ್ಸೆಯಂತ ತುರ್ತು ಸಂದರ್ಭದಲ್ಲಿ ಕಾರ್ಮಿಕರನ್ನು, ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯುವುದು ಅಗತ್ಯವಿರುತ್ತದೆ. ಹೀಗಾಗಿ ಕಾರ್ಮಿಕರನ್ನು ಸಾಗಿಸಲು ಏರ್ ಅಂಬುಲೆನ್ಸ್ ಬಳಕೆಗೆ ಚಿಂತನೆ ನಡೆಸಲಾಗಿದೆ.
ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ನೇತೃತ್ವದಲ್ಲಿ, ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಎಚ್ಎಎಲ್ ಹೆಲಿಕಾಪ್ಟರ್ ವಿಭಾಗದ ಹಿರಿಯ ಇಂಜಿನಿಯರ್ ಮತ್ತುಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದೆ.
ಈ ವೇಳೆ...
ಯಾರ ವಿರೋಧಕ್ಕೂ ಜಗ್ಗದ ಸಿಎಂ ಸಿದ್ದರಾಮಯ್ಯ, ಜಾತಿಗಣತಿಗೆ ಆದೇಶ ಕೊಟ್ಟಿದ್ರು. ಸೆಪ್ಟೆಂಬರ್ 22ರಿಂದ ಸಮೀಕ್ಷೆ ಶುರುವಾಗಿದೆ. 4 ದಿನ ಕಳೆದರೂ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಜಾತಿಗಣತಿಗೆ ಮುಗಿಸಲು ಅಕ್ಟೋಬರ್ 7ರ ಡೆಡ್‌ಲೈನ್ ಕೊಡಲಾಗಿದೆ. ಆದ್ರೆ, ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷಗಳಿಂದಾಗಿ, ಸಮೀಕ್ಷೆಯ ವೇಗ ಕುಂಠಿತವಾಗುತ್ತದೆ. ಶಿಕ್ಷಕರು ಗಣತಿ ವೇಳೆ ಪರದಾಡುವಂತಾಗಿದೆ.
ಈ ಎಲ್ಲಾ...
ಹಿರಿಯ ಸಾಹಿತಿ, ಕನ್ನಡ ಕಾದಂಬರಿಗಳ ದಂತಕಥೆ ಎಸ್.ಎಲ್ ಭೈರಪ್ಪ ಅವರ ಅಂತ್ಯಕ್ರಿಯೆ ಇಂದು ಮೈಸೂರಿನಲ್ಲಿ ನೆರವೇರಲಿದೆ. ಭೈರಪ್ಪ ಅವರ ಮಗ ಲಂಡನ್‌ನಿಂದ ಬರುವಿಕೆಗೆ ಕಳೆದ 2 ದಿನಗಳಿಂದ ಕಾಯಲಾಗುತ್ತಿತ್ತು. ಇದೀಗ ಅಂತಿಮ ವಿಧಿ ವಿಧಾನಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಸರಸ್ವತಿ ಪುತ್ರ ಎಸ್.ಎಲ್. ಭೈರಪ್ಪನವರ ಅಂತಿಮ ವಿಧಿವಿಧಾನ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಭೈರಪ್ಪನವರ...
ಕನ್ನಡದ ಹಿರಿಯ ಸಾಹಿತಿ, ಸರಸ್ವತಿ ಪುತ್ರ ಎಸ್.ಎಲ್ ಭೈರಪ್ಪ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದಿಂದ ಸಾಹಿತ್ಯ ಲೋಕವೇ ಶೋಕದಲ್ಲಿ ಮುಳುಗಿದೆ. ಭೈರಪ್ಪನವರ ಕಾದಂಬರಿಗಳನ್ನು ಪ್ರೀತಿಸುತ್ತಿದ್ದ ಓದುಗರು ನೀರವ ಮೌನಕ್ಕೆ ಜಾರಿದ್ದಾರೆ.
ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ಹಾಜರಾಗಿ ಶ್ರದ್ಧಾಂಜಲಿ...
ಧರ್ಮಸ್ಥಳ ಶವ ಹೂತ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಹೇಳಿಕೊಂಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಹಾಗೂ ಇತರರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಅರ್ಜಿ ವೈಯಕ್ತಿಕ ಹಿತಾಸಕ್ತಿ ಹಾಗೂ ಹಣ ವಸೂಲಿಗಾಗಿ ಸಲ್ಲಿಸಿದ...
ಧರ್ಮಸ್ಥಳ ನಿಗೂಢ ಸಾವುಗಳ ಪ್ರಕರಣದ SIT ತನಿಖೆ ನಡೀತಿದೆ. ಮತ್ತೊಂದೆಡೆ ಸೌಜನ್ಯ ಸಾವಿಗೆ ನ್ಯಾಯ ಸಿಗುವಂತೆ ಆಗ್ರಹಿಸಿ, ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಪ್ರತಿಭಟನೆಯ ಹಾದಿ ಹಿಡಿದಿದೆ. ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ನೇತೃತ್ವದಲ್ಲಿ, ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನೂರಾರು ಜನರು ಪ್ರತಿಭಟನೆಗಿಳಿದಿದ್ದಾರೆ.
ಪ್ರತಿಭಟನಾಕಾರರು ಧರ್ಮಸ್ಥಳದ ನೂರಾರು ಅಸಹಜ ಸಾವುಗಳ ಬಗ್ಗೆ ತನಿಖೆಯಾಗಲಿ. ಗ್ರಾಮಾಭಿವೃದ್ಧಿ ಹೆಸರಿನ ಮೈಕ್ರೋ ಫೈನಾನ್ಸ್...
ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಸಿಸಿ ಕ್ಯಾಮೆರಾಗಳನ್ನೂ ಕಿತ್ತೆಸೆದು, ಸಿಕ್ಕಸಿಕ್ಕ ವಸ್ತುಗಳನ್ನೆಲ್ಲಾ ದೋಚಿ ಎಸ್ಕೇಪ್ ಆಗ್ತಿದ್ದಾರೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ, ಕಳ್ಳತನಕ್ಕೆ ಬಂದ ಖದೀಮರ ಗ್ಯಾಂಗ್ ಬರೀ ಗೈಯಲ್ಲಿ ವಾಪಸ್ ಆಗಿದೆ.
ಸೆಪ್ಟೆಂಬರ್ 24ರ ತಡರಾತ್ರಿ ಚಿನ್ನದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ನಾರಾಯಣ ಪೋತದಾರಗೆ ಸೇರಿದ್ದ ಚಿನ್ನಾಭರಣ...