ಕೆ.ಆರ್.ಎಸ್. ಅಣೆಕಟ್ಟೆ ಬಳಿ ಕಾವೇರಿ ಆರತಿ ಪ್ರಕ್ರಿಯೆ ಕೈಗೊಂಡಿರುವುದು ಕಾನೂನಿಗೆ ಮಾಡುತ್ತಿರುವ ಅಪಮಾನವಾಗಿದೆ. ಅಣೆಕಟ್ಟು ಸುರಕ್ಷತೆ ಕಾಯ್ದೆಗೆ ಭಂಗ ಮಾಡಲಾಗುತ್ತಿದೆ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಅಣೆಕಟ್ಟೆ ಬಳಿ ಕಾವೇರಿ ಆರತಿ ಮಾಡಬಾರದು ಎಂದು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು...
93ರ ಇಳಿವಯಸ್ಸಲ್ಲೂ ರಾಜಕೀಯ ಹೋರಾಟ ನಿಲ್ಲಲ್ಲ ಎಂಬ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆ, ಜೆಡಿಎಸ್ಗೆ ಹೊಸ ಹುಮ್ಮಸ್ಸು ನೀಡಿದೆ. ಆದ್ರೆ, ಮಿತ್ರಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ದೇವೇಗೌಡರ ರಾಜಕೀಯ ಮುಗಿಯಿತೆಂಬ ಲೆಕ್ಕಾಚಾರದಲ್ಲಿದ್ದವರಿಗೆ, ಹೆಚ್ಡಿಡಿ ಮಾತು ಕೇಳಿ ನಡುಕ ಉಂಟಾಗಿದೆ. ರಾಜ್ಯಸಭೆಗೆ ವ್ಹೀಲ್ಚೇರ್ನಲ್ಲೇ ಹೋಗುತ್ತೇನೆ. ಅವಧಿ ಪೂರ್ಣಗೊಂಡರೂ ನನ್ನ ಹೋರಾಟ ನಿಲ್ಲುವುದಿಲ್ಲ ಎನ್ನುವ...
ರಾಜ್ಯದೆಲ್ಲೆಡೆ ರಸ್ತೆ ಗುಂಡಿಗಳ ವಿಚಾರ, ಭಾರೀ ಸದ್ದು ಮಾಡ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟಕ್ಕೆ ಕರೆ ಕೊಡಲಾಗಿದೆ. ಈ ಬಗ್ಗೆ ಜೆಡಿಎಸ್ ಶಾಸಕ ಸುರೇಶ್ ಬಾಬು ಪ್ರತಿಕ್ರಿಯಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಜನಸಾಮಾನ್ಯರಿಗೆ ಸೂಕ್ತ ರಸ್ತೆ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ರಸ್ತೆ...
ಪದ್ಮಭೂಷಣ ಪುರಸ್ಕೃತರಾದ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, 94 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ. 1931ರ ಆಗಸ್ಟ್ 20ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ, ಎಸ್.ಎಲ್. ಭೈರಪ್ಪ ಅವರು ಜನಿಸಿದ್ರು. ಭಾರತೀಯ ಕಾದಂಬರಿಕಾರ, ತತ್ವಜ್ಞಾನಿ, ಚಿತ್ರಕಥೆಗಾರರೂ ಆಗಿದ್ರು.
ಎಸ್.ಎಲ್. ಭೈರಪ್ಪ...
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಂದು ವಾರದಿಂದ ಸುರಿದಿದ್ದ ಮುಂಗಾರು ಮಳೆ ತಾತ್ಕಾಲಿಕವಾಗಿ ಬ್ರೇಕ್ ನೀಡಿದೆ. ಇದೇ ಸೆಪ್ಟಂಬರ್ 27ರಿಂದ ಒಟ್ಟು 09 ಜಿಲ್ಲೆಗಳಲ್ಲಿ ಮತ್ತೆ ಜೋರಾಗಿ ಮಳೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕಲಬುರಗಿ, ಬೀದರ್, ಕೊಪ್ಪಳ, ಯಾದಗಿರಿ, ಬೆಳಗಾವಿಯಲ್ಲಿ...
ಮೈಸೂರು ದಸರಾದ ವಿಶೇಷವಾಗಿ ಪ್ರತಿ ವರ್ಷ ಆಹಾರ ಮೇಳವಾನನು ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿ ದಸರಾ 2025 ರಲ್ಲೂ ಆಹಾರ ಮೇಳ ಹಾಕಲಾಗಿದೆ. ಬಹಳಷ್ಟು ಜಿಲ್ಲೆಗಳಿಂದ ಡಿಫ್ ಡಿಫ್ರೆಂಟ್ ಆಗಿರುವ ಆಹಾರ ಮಳಿಗೆಗಳನ್ನು ಹಾಕಲಾಗಿದೆ. ಇನ್ನು ವಿಸೇಷವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಳಿಯ ಚಂದನ್ಗೌಡ ಈ ಬಾರಿ ಆಹಾರ ಮೇಳದಲಲಿ ಮಳಿಗೆಯನ್ನು...
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಯೂಟ್ಯೂಬರ್ ಮುಕಳೆಪ್ಪ ಲವ್ ಕಂ ಮ್ಯಾರೇಜ್ ಕಹಾನಿ ಭಾರೀ ಸಂಚಲನ ಸೃಷ್ಟಿಸಿದೆ. ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮುಸ್ಲಿಂ. ಗಾಯತ್ರಿ ಹಿಂದು. ಹೀಗಾಗಿ ಲವ್ ಜಿಹಾದ್ ಆರೋಪ ಮಾಡಲಾಗಿದ್ದು, ಹಿಂದೂ ಸಂಘಟನೆಗಳು ಕೂಡ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದವು.
ಇದೀಗ ಕಿಡ್ನ್ಯಾಪ್ ಕೇಸ್ ದಾಖಲಾದ ಬೆನ್ನಲ್ಲೇ, ಮೊದಲ ಬಾರಿಗೆ ಪತ್ನಿ ಗಾಯತ್ರಿ ಜೊತೆ...
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ಸಾವುಗಳ ಆರೋಪಕ್ಕೆ ಮಾಸ್ಕ್ಮ್ಯಾನ್ ಚಿನ್ನಯ್ಯ ಎಂಟ್ರಿ ಬಳಿಕ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ನೂರಾರು ಶವಗಳನ್ನು ಹೂತಿದ್ದಾಗಿ ಚಿನ್ನಯ್ಯ ಹೇಳಿದ್ದ. ಆದ್ರೆ, ಆತ ಹೇಳಿದ್ದ ಜಾಗಗಳಲ್ಲಿ ಅಗೆದಾಗ ಅಸ್ಥಿಪಂಜರಗಳ ಸರಿಯಾದ ಸಾಕ್ಷಿ ಸಿಕ್ಕಿರಲಿಲ್ಲ. ಎಸ್ಐಟಿ ತೀವ್ರ ವಿಚಾರಣೆ ಬಳಿಕ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದು, ಇದೀಗ ಚಿನ್ನಯ್ಯನ 2ನೇ ಪತ್ನಿ ಮಲ್ಲಿಕಾ ಸರದಿ.
ಮಾಧ್ಯಮವೊಂದರ...
ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಸಮರ ಸಾರಿದ್ದಾರೆ. ರಾಜ್ಯ ಸರ್ಕಾರ ಕಾಟಾಚಾರಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದು, ಕಳಪೆ ಮಟ್ಟದ ಡಾಂಬರೀಕರಣ ಮಾಡಲಾಗ್ತಿದೆ ಎಂದು ಆರೋಪಿಸಿದೆ. ಹೀಗಾಗಿ ಬೆಂಗಳೂರಿನ ರಸ್ತೆಗಳನ್ನು ತಡೆದು, ಗುಂಡಿ ಮುಚ್ಚುವ ಅಭಿಯಾನವನ್ನು ಬಿಜೆಪಿಗರು ಕೈಗೊಂಡಿದ್ದಾರೆ. ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆಗೆ ಇಳಿದಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಬಿಜೆಪಿ ನಾಯಕರು ರೋಡಿಗಿಳಿದಿದ್ದಾರೆ....
ರಾಜ್ಯದಲ್ಲಿರುವ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು, ಈಗ ಸ್ವಯಂ ಉದ್ಯೋಗಿಗಳಾಗಿದ್ದಾರೆ. ಪ್ರತಿ ತಿಂಗಳು ಗೃಹಲಕ್ಷ್ಮೀಯಿಂದ ಬಂದ ಹಣವನ್ನು ಕೂಡಿಟ್ಟು, ಬಂಡವಾಳ ಮಾಡಿಕೊಂಡು ವ್ಯಾಪಾರ ಶುರು ಮಾಡಿದ್ದಾರೆ. ಮಹಿಳಾ ದಸರಾದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳ ಮಳಿಗೆಗಳು, ಎಲ್ಲರ ಗಮನ ಸೆಳೆದಿವೆ.
ತಿಂಡಿ ತಿನಿಸುಗಳ ಮಳಿಗೆ, ಬ್ಯಾಂಗಲ್ಸ್ ಸ್ಟೋರ್ ಹಾಗೂ ಬಟ್ಟೆ ಮಳಿಗೆ ತೆರೆದಿದ್ದು, ಸ್ವಯಂ ಉದ್ಯೋಗಿಗಳಾಗಿ ಫಲಾನುಭವಿಗಳು ಬದಲಾಗಿದ್ದಾರೆ. ವರಲಕ್ಷ್ಮಿ...
ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...