National News: ಐಸಿಸ್ಗೆ ಉಗ್ರರನ್ನು ಸೇರಿಸಲು ಯುವಕರನ್ನು ಸೆಳೆಯುತ್ತಿದ್ದವನಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಬೂಬಕರ್ ಬಾಗ್ದಾದಿ ಎಂಬ ವ್ಯಕ್ತಿ ಐಸಿಸ್ ಉಗ್ರರಿಗೆ ಬೆಂಲಿಸುತ್ತಿದ್ದ ಕಾರಣಕ್ಕೆ, ಈ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ, 2 ಲಕ್ಷ 15 ಸಾವಿರ ದಂಡ ವಿಧಿಸಿದೆ.
ಅಬೂಬಕರ್ ಟ್ವೀಟ್ ಮೂಲಕ ಉಗ್ರ ಚಟುವಟಿಕೆಗಳಿಗೆ ಯುವಕರನ್ನು ಸೆಳೆಯುತ್ತಿದ್ದ. SAMI Witness...
Pakistan News: ಪಾಕಿಸ್ತಾನಿ ಸಿಂಗರ್ ಬಿಲಾಲ್ ಸಯೀದ್, ಸಂಗೀತ ಕಾರ್ಯಕ್ರಮ ನಡೆಯುವ ವೇಳೆ ಸಿಟ್ಟಾಗಿ ತನ್ನ ಅಭಿಮಾನಿಯ ಬಳಿ ಮೈಕ್ ಬಿಸಾಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್ಗಳು ಬರುತ್ತಿದೆ.
ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಭಿಮಾನಿಯ ನಡೆಗೆ ಸಿಟ್ಟಾದ ಸಯೀದ್, ಮೈಕ್ ಎಸೆದು, ಕಾರ್ಯಕ್ರಮ ಬಿಟ್ಟು ಹೊರಹೋಗಿದ್ದಾರೆ....
International News: ಆಸ್ಟ್ರೇಲಿಯಾಗೆ ಅರ್ಧ ಟನ್ಗೂ ಹೆಚ್ಚು ಕೊಕೇನ್ ರಫ್ತು ಮಾಡಿದ್ದಕ್ಕಾಗಿ, ಯುಕೆಯಲ್ಲಿರುವ ಭಾರತೀಯ ದಂಪತಿಗೆ 33 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಆರ್ತಿ ಧೀರ್(59), ಕವಲ್ಜೀತ್ ಸಿನ್ಹಾ(35) ಎಂಬುವವರನ್ನು ಬಂಧಿಸಲಾಗಿದ್ದು, ತಾಯಿ ಮಗನ ವಯಸ್ಸಲ್ಲಿರುವ ಇವರು ದಂಪತಿಗಳೆಂದು ಹೇಳಲಾಗುತ್ತಿದೆ. 2021ರಲ್ಲಿ ಆಸ್ಟ್ರೇಲಿಯಾಗೆ ಕೊಕೇನ್ ಮಾರಾಟ ಮಾಡಲು ಯತ್ನಿಸಿದಾಗ, ಇವರಿಬ್ಬರನ್ನು ಬಂಧಿಸಲಾಗಿತ್ತು. ಇಂದು ತೀರ್ಪು ಬಂದಿದ್ದು,...
International News: ಮೆಕ್ಸಿಕೋದ ಸಿನೋಲಾವಾ ಎಂಬಲ್ಲಿ ಡಬಲ್ ಡಕರ್ ಬಸ್ ಮತ್ತು ಟ್ರಕ್ ಡಿಕ್ಕಿಯಾಗಿದ್ದು, ಅಪಘಾತದಲ್ಲಿ 19 ಜನ ಸಾವನ್ನಪ್ಪಿದ್ದಾರೆ. 22 ಮಂದಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಜಲಿಸ್ಕೋದ ಗ್ವಾಡಲಜಾರಾ ನಗರದಿಂದ ಸಿನಾಲೋವಾದ ಲಾಸ್ ಮೋಚಿಸ್ಗೆ ಈ ಬಸ್ ಚಲಿಸುತ್ತಿತ್ತು. ಇದರಲ್ಲಿ 50 ಜನ ಪ್ರಯಾಣಿಕರಿದ್ದರು. ಈ ಡಬಲ್...
International News: ಪಾಕಿಸ್ತಾನದ ಬಲುಚಿಸ್ತಾನದಲ್ಲಿ ಬಾಂಬ್ ಸ್ಪೋಟವಾಗಿದ್ದು, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ಮೂವರ ದುರ್ಮರರಣವಾಗಿದೆ.
ನಿನ್ನೆಯಷ್ಟೇ ಪಾಕಿಸ್ತಾನ ಸರ್ಕಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಖುರೇಶಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾಗಿ ಸ್ವಲ್ಪ ಹೊತ್ತಿಗೆ ಈ ದುರಂತ ಸಂಭವಿಸಿದೆ. ಇಮ್ರಾನ್ ಖಾನ್ ಪಕ್ಷದ...
National News: ಕಳೆದ ವರ್ಷ ಮಾಲ್ಡೀವ್ಸ್ಗೆ ಪ್ರವಾಸಕ್ಕೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಾಗಿತ್ತು. ಆ ಕಾರಣಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರತ ನಂಬರ್ 1 ರ್ಯಾಂಕಿಂಗ್ನಲ್ಲಿ ಇತ್ತು. ಆದರೆ ಪ್ರಧಾನಿ ಮೋದಿಯನ್ನು ಮಾಲ್ಡೀವ್ಸ್ ಸಂಸದರು, ಇಸ್ರೇಲ್ ಗೊಂಬೆ ಎಂದು ಹಂಗಿಸಿದ ಬಳಿಕ, ಭಾರತೀಯರು ಮೋದಿಗೆ ಸಪೋರ್ಟ್ ಮಾಡಿ, ಬಾಯ್ಕಾಟ್ ಮಾಲ್ಡೀವ್ಸ್ ಎಂಬ ಅಭಿಯಾನ ಶುರು ಮಾಡಿದರೋ,...
International News: ಮಾನವನ ಮೆದುಳಿನಲ್ಲಿ ಮೊದಲ ರೊಬೋಟ್ ಚಿಪ್ ಅಳವಡಿಕೆ ಯಶಸ್ವಿಯಾಗಿದೆ ಎಂದು, ಎಲಾನ್ ಮಸ್ಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನ್ಯೂರಾಲಿಂಕ್ ಸಂಸ್ಥೆ ಮೊದಲ ಬಾರಿಗೆ ಮಾನವನ ಮೆದುಳಿನಲ್ಲಿ ಚಿಪ್ ಅಳವಡಿಸಲಾಗಿದ್ದು, ಆ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾನೆ. ನರಕೋಶಗಳ ಪತ್ತೆ ನಿಖರವಾಗಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಈಗಾಗಲೇ ಚಿಪ್ಗಳನ್ನು ಹಂದಿ ಮತ್ತು ಮಂಗಗಳ ಮೆದುಳಿನಲ್ಲಿ ಚಿಪ್...
International News: ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ, ಶಿಕ್ಷಣ ಪಡೆಯುತ್ತಿದ್ದ ಭಾರತದ ವಿದ್ಯಾರ್ಥಿಯನ್ನ, ಅಮೆರಿಕದ ನಿವಾಸಿ ಕೊಂದಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿ ವಿವೇಕ್ ಸೈನಿ(25) ಎಂದು ಗುರುತಿಸಲಾಗಿದ್ದು, ಈತ ಹರ್ಯಾಣಾದ ಪಂಚಕುಲದ ನಿವಾಸಿಯಾಗಿದ್ದ. ಅಮೆರಿಕದ ಜಾರ್ಜಿಯಾದಲ್ಲಿ, ಶಿಕ್ಷಣ ಪಡೆಯುತ್ತ, ಅಂಗಡಿಯೊಂದರಲ್ಲಿ ಪಾಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ. ಈತನನ್ನು ಕೊಂದ ವ್ಯಕ್ತಿ ಜೂಲಿಯನ್ ಫಾಕ್ನರ್...
International News: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ 10 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಅಧಿಕೃತ ರಹಸ್ಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ.
ಇಮ್ರಾನ್ ಖಾನ್ ಜೊತೆಗೆ, ಮಾಜಿ ವಿದೇಶಾಂಗ ಸಚಿವ ಶಾ ಮಹಮದ್ ಖುರೇಶಿಗೂ ಕೂಡ 10 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ದಾಖಲೆಯೊಂದನ್ನು ಸೋರಿಕೆ ಮಾಡಿದ್ದಕ್ಕಾಗಿ ಇಮ್ರಾನ್ ಖಾನ್ ಮತ್ತು ಶಾ...
International News: ಸಾಮಾನ್ಯವಾಗಿ ಎಲ್ಲ ಸಂಸತ್ತಿನಲ್ಲೂ ವಾದ ವಿವಾದ ಇದ್ದೇ ಇರುತ್ತದೆ. ಅದು ಆರೋಗ್ಯಕರವಾಗಿದ್ದರೆ ಚೆಂದ. ಆದರೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ಸಂಸದರು ಹೊಡೆದಾಾಡುವ ರೀತಿಯಲ್ಲಿ ವಾದ ವಿವಾದ ನಡೆದಿದೆ.
ಪೀಪಲ್ ನ್ಯಾಷನಲ್ ಕಾಂಗ್ರೆಸ್, ಪ್ರೊಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್, ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರೆಟಿಕ್ ಪಾರ್ಟಿ ಈ ಮೂರು ಪಾರ್ಟಿಗಳ ನಡುವೆ, ಘರ್ಷಣೆ ನಡೆದಿದೆ. ಆಡಳಿತ...
Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...