ಕೈ ಕೈ ಹಿಡಿದು ಒಟ್ಟಿಗೆ ಪ್ರಾಣ ತ್ಯಜಿಸಿದ ಡಚ್ ಮಾಜಿ ಪ್ರಧಾನಿ ಮತ್ತು ಪತ್ನಿ

International News: ಪತಿ ಪತ್ನಿ ಇಬ್ಬರೂ ಒಟ್ಟಿಗೆ ಸಾಯುವುದು, ಅದರಲ್ಲೂ ಕೈ ಕೈ ಹಿಡಿದು ಒಂದೇ ಸಮಯಕ್ಕೆ ಸಾಯುವುದು ಅಂದ್ರೆ ಅದು ಸಾಮಾನ್ಯ ಮಾತಲ್ಲ. ಕೋಟಿ ಜನರಲ್ಲಿ ಒಬ್ಬರಿಗೆ ಈ ಅದೃಷ್ಟ ಸಿಗುತ್ತದೆ. ಪತಿಯ ಮುನ್ನ ಪತ್ನಿ ತೀರಿಕೊಂಡರೂ, ಪತ್ನಿಯ ಮುನ್ನ ಪತಿ ತೀರಿಕೊಂಡರೂ, ಇಬ್ಬರಿಗೂ ಏಕಾಂಗಿತನ ಕಾಡೇ ಕಾಡುತ್ತದೆ. ಆದರೆ ಇಬ್ಬರೂ ಒಮ್ಮೆಲೆ ತೀರಿಕೊಂಡರೆ ಉತ್ತಮವಾಗಿರುತ್ತದೆ ಅಂತಾ ಹಲವರು ೆಣಿಸುತ್ತಾರೆ.

ಇದೇ ರೀತಿ ಡಚ್ ಮಾಜಿ ಪ್ರಧಾನಿ ಮತ್ತು ಅವರ ಪತ್ನಿ ಕೈ ಕೈ ಹಿಡಿದೇ, ಒಂದೇ ಸಮಯಕ್ಕೆ ಪ್ರಾಣ ಬಿಟ್ಟಿದ್ದಾರೆ. 93 ವರ್ಷದ ಡ್ರೈಸ್ ವೆನ್ ಆಗ್ಟ್ ಮತ್ತು ಅವರ ಪತ್ನಿ ಯುಜೆನಿ ಇಬ್ಬರೂ ಹೀಗೆ ಒಟ್ಟಿಗೆ ಪ್ರಾಣ ಬಿಟ್ಟಿದ್ದಾರೆ. ಆದರೆ ಇವರಿಬ್ಬರೂ ಯಾವುದೇ ರೋಗಕ್ಕೆ ತುತ್ತಾಗಿ, ಅಥವಾ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಲಿಲ್ಲ. ಬದಲಾಗಿ ಇಬ್ಬರೂ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ್ದರು. ದಯಾಮರಣಕ್ಕೆ ಒಪ್ಪಿಗೆ ಸಿಕ್ಕ ಬಳಿಕ, ಇಬ್ಬರೂ ಜೊತೆಯಾಗಿ ಸಾವನ್ನಪ್ಪಿದ್ದಾರೆ.

ವಾಸಿಯೇ ಆಗದ ಖಾಯಿಲೆ ಇದ್ದರೆ ಮಾತ್ರ ಹಲವು ದೇಶಗಳಲ್ಲಿ ದಯಾಮರಣ ನೀಡಲಾಗುತ್ತದೆ. ಆದರೆ ನೆದರ್‌ಲ್ಯಾಂಡ್‌ನಲ್ಲಿ ಹಲವರು ದಯಾಮರಣ ಪಡೆದು ಸಾಯುತ್ತಿದ್ದಾರೆ. ಡ್ರೈಸ್ ಮತ್ತು ಯುಜೆನಿ 70 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದಾರೆ. ಇದೀಗ ಪ್ರೀತಿಯ ಮಡದಿಯೊಂದಿಗೆ ಜೀವನ ಪಯಣ ಅಂತ್ಯಗೊಳಿಸಿದ್ದಾರೆ.

ನಾಯಿಗೆ ಹಿಂಸಿಸಿದ್ದ ಪೆಟ್ ಕ್ಲಿನಿಕ್ ಸಿಬ್ಬಂದಿಗಳು ಅರೆಸ್ಟ್..

ಅಮೆರಿಕದ ಮನೆಯಲ್ಲಿ ಶವವಾಗಿ ಪತ್ತೆಯಾದ ಭಾರತೀಯ ಕುಟುಂಬ..

ಇಂಡಿಗೋ ವಿಮಾನದಲ್ಲಿ ಕೊಟ್ಟ ಸ್ಯಾಂಡ್‌ವಿಚ್‌ನಲ್ಲಿ ಬೋಲ್ಟ್ ಪತ್ತೆ..?

About The Author