Friday, December 5, 2025

ರಾಜ್ಯ

ಕೇವಲ 341 ಮತಗಳ ಅಂತರದಿಂದ ಸೋತ ಕೈ ಅಭ್ಯರ್ಥಿ

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಜಯಭೇರಿ ಬಾರಿಸಿದ್ದಾರೆ. ಮತಎಣಿಕೆಯ ಬಹುತೇಕ ಸುತ್ತುಗಳಲ್ಲೂ ಕೆಲವೇ ಮತಗಳ ಅಂತರ ಕಾಯ್ದುಕೊಂಡಿದ್ದ ಉಭಯ ಪಕ್ಷದ ಅಭ್ಯರ್ಥಿಗಳ ಜಿದ್ದಾಜಿದ್ದಿಗೆ ತೆರೆ ಬಿದ್ದು, ಬಿಜೆಪಿಯ ಶ್ರೀನಿವಾಸ ಪ್ರಸಾದ್ ಗೆದ್ದಿದ್ದಾರೆ. ಆದ್ರೆ ಕೇವಲ 341 ಮತಗಳಿಂದ ಕಾಂಗ್ರೆಸ್ ನ ಧ್ರುವನಾರಾಯಣ್...

ಫಲಿತಾಂಶ ಅನಿರೀಕ್ಷಿತ- ಪಕ್ಷವನ್ನು ಬಲಪಡಿಸೋಣ- ಸಿಎಂ ಕುಮಾರಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರೋ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಫಲಿತಾಂಶದ ಕುರಿತಾಗಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಅನಿರೀಕ್ಷಿತ. ಈ ಫಲಿತಾಂಶವನ್ನು ಗೌರವಿಸುತ್ತೇನೆ ಹಾಗೂ ಮತ್ತೊಮ್ಮೆ ಜನಾದೇಶ ಪಡೆದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ರಾಜ್ಯದಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೂ ನನ್ನ ಶುಭಾಶಯಗಳು ಎಂದು ಕುಮಾರಸ್ವಾಮಿ ಟ್ವೀಟ್...

ತುಮಕೂರಿನಲ್ಲಿ ದೇವೇಗೌಡರಿಗೆ ಹೀನಾಯ ಸೋಲು

ಲೋಕಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಕಣಗಳಲ್ಲೊಂದಾದ ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ ಸೋತಿದ್ದಾರೆ. ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ವಿರುದ್ಧ 15433 ಮತಗಳ ಅಂತರದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಿದ್ದಾರೆ.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಜಯಭೇರಿ

ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜಿದ್ದಾಜಿದ್ದಿನ ಕಣವಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ವಿರುದ್ಧ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಸ್ಪರ್ಧಿಸಿದ್ದರು. ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಇದೀಗ ಸುಮಲತಾ ಗೆಲುವು ಸಾಧಿಸಿ ನಿಖಿಲ್ ಕುಮಾರ್ ರನ್ನು ಹಿಂದಿಕ್ಕಿದ್ದಾರೆ.

‘ನನ್ನ ಮುಖಕ್ಕೆ ಬಾರಿಸಿದಂತಾಗಿದೆ’- ನಟ ಪ್ರಕಾಶ್ ರಾಜ್

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್ ರಾಜ್ ಸೋಲುಂಡಿದ್ದಾರೆ. ತಮ್ಮ ಸೋಲಿನ ಕುರಿತು ಟ್ವೀಟ್ ಮಾಡಿರೋ ಪ್ರಕಾಶ್ ರಾಜ್ ಫಲಿತಾಂಶವು ನನ್ನ ಮುಖಕ್ಕೆ ಜೋರಾಗಿ ಬಾರಿಸಿದಂತಾಗಿದೆ. ಹೆಚ್ಚು ಅವಹೇಳನ, ಅಪಮಾನ ನನ್ನ ದಾರಿಗೆ ಬಂದರೂ ನಾನು ಅದೆನ್ನೆಲ್ಲಾ ದೃಢವಾಗಿ ಮೆಟ್ಟಿನಿಲ್ಲುವೆ. ಜಾತ್ಯತೀತ ದೇಶಕ್ಕಾಗಿ ಹೋರಾಡುವೆ. ನನ್ನ ಕಠಿಣ...

ದುರಹಂಕಾರದಿಂದ ಟೀಕಿಸಿದ್ರು- ಜನರೇ ಪಾಠ ಕಲಿಸಿದ್ದಾರೆ- ಡಿವಿಎಸ್

ಬೆಂಗಳೂರು: ಬೆಂಗಳೂರು ಉತ್ತರ ಲೋಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿನ್ನೆಯಷ್ಟೇ ತಮ್ಮನ್ನು ಟೀಕಿಸಿದ್ದ ಸಿದ್ದಾರಮಯ್ಯ ವಿರುದ್ಧ ಟ್ವೀಟ್ ಮಾಡೋ ಮೂಲಕ ಸದಾನಂದಗೌಡ ಕಿಡಿ ಕಾರಿದ್ದಾರೆ. ದುರಹಂಕಾರದಿಂದ ನನ್ನನ್ನು ಟೀಕಿಸಿದ, ನನ್ನ ನಗುವನ್ನು ಅಪಹಾಸ್ಯಗೈದ, ವೈಯುಕ್ತಿಕ ನಿಂದನೆಗೆ ಇಳಿದ ಅತಿ ಬುದ್ದಿವಂತ ವಿರೋಧ ಪಕ್ಷ ನಾಯಕರುಗಳಿಗೆ ನನ್ನ...

ಎಲೆಕ್ಷನ್ ಕೌಂಟಿಂಗ್ ಕ್ಷಣಕ್ಷಣದ ಮಾಹಿತಿ

05.55pm- ಉತ್ತರ ಪ್ರದೇಶದ ಮಥುರಾದಲ್ಲಿ ಬಿಜೆಪಿಯ ಹೇಮಾಮಾಲಿನಿ ಗೆಲುವು 05.40pm- ಚಾಮರಾಜನಗರದಲ್ಲಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಗೆಲುವು. ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ವಿರುದ್ಧ ಕೇವರ 341 ಮತಗಳ ಅಂತರದಿಂದ ಗೆಲುವು 05.05pm- ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಗೆಲುವು 4.15pm- ತುಮಕೂರಿನಲ್ಲಿ ದೇವೇಗೌಡರಿಗೆ ಮುಖಭಂಗ, ಬಿಜೆಪಿಯ ಜಿ.ಎಸ್ ಬಸವರಾಜು ಭರ್ಜರಿ ಗೆಲುವು 03.40pm- ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ...

ಚಾಮುಂಡೇಶ್ವರಿ ಮೊರೆ ಹೋದ ನಿಖಿಲ್

ಮೈಸೂರು: ಇಂದು ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ನಿಖಿಲ್ ಕುಮಾರ್  ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ್ರು. ಇಂದು ಬೆಳಗ್ಗೆ 5 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ತಮ್ಮ ಗೆಲುವಿಗಾಗಿ ಪ್ರಾರ್ಥಿಸಿದ್ರು. ನಿಖಿಲ್‌ಗೆ ಉಸ್ತುವಾರಿ ಸಚಿವ‌ ಜಿ.ಟಿ.ದೇವೇಗೌಡ, ಶಾಸಕ ಸುರೇಶ್ ಗೌಡ, ಎಂ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ...

ಇಂದು ಲೋಕಸಭಾ ಮಹಾಸಮರ ಫಲಿತಾಂಶ- ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಬೆಂಗಳೂರು: 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಕೌಂಟಿಂಗ್ ಶುರುವಾಗಲಿದ್ದು ಸಂಜೆ 6 ಗಂಟೆ ವೇಳೆಗೆ ಫಲಿತಾಂಶ ಹೊರಬೀಳೋ ಸಾಧ್ಯತೆಯಿದೆ. 543 ಲೋಕಸಭಾ ಕ್ಷೇತ್ರಗಳ ಪೈಕಿ 542ಕ್ಷೇತ್ರಗಳಿಗೆ ಏಳು ಹಂತದಲ್ಲಿ ಮತದಾನ ಕಳೆದೊಂದು ತಿಂಗಳಿಂದ ಮತದಾನ ನಡೆದಿತ್ತು.  ಶೇ.67.11ರಷ್ಟು ಮತದಾನ ನಡೆದು ಹಿಂದಿನ ದಾಖಲೆಗಳನ್ನೆಲ್ಲಾ ಮುರಿದಿದೆ. ತಮಿಳುನಾಡಿನ ವೆಲ್ಲೂರು...

ಫಲಿತಾಂಶಕ್ಕೆ ಕ್ಷಣಗಣನೆ- ತಾಯಿ ಜೊತೆ ನಿಖಿಲ್ ಟೆಂಪಲ್ ರನ್

ಲೋಕಸಭಾ ಮಹಾಸಮರದ ತೀರ್ಪು ನಾಳೆ ಪ್ರಕಟವಾಗೋ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಈ ಮಧ್ಯೆ ಮಂಡ್ಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಗೆಲುವಿಗಾಗಿ ತಾಯಿ ಅನಿತಾ ಕುಮಾರಸ್ವಾಮಿ ನಾನಾ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಇಂದು ಬೆಳಗ್ಗಿನಿಂದ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯ, ಮಾವಿನಕೆರೆ...
- Advertisement -spot_img

Latest News

ಅಂದು ಭಗವದ್ಗೀತೆ ನಿಷೇಧಿಸಿದ್ದ ರಷ್ಯಾ – ಇಂದು ಅದನ್ನೇ ಗೌರವಿಸಿದ ಪುಟಿನ್!

ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್...
- Advertisement -spot_img