Saturday, May 9, 2026

ರಾಜ್ಯ

35ರಿಂದ 37 ‘ಕೈ’ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ!

ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನವೆಂಬರ್‌ನಲ್ಲಿ ಸಂಪುಟ ಪುನಾರಚನೆ ಫಿಕ್ಸ್‌ ಅಂತ್ಲೇ ಹೇಳಲಾಗ್ತಿದೆ. ಈ ಮಧ್ಯೆ ನಿಗಮ ಮಂಡಳಿ ಆಕಾಂಕ್ಷಿಗಳಿಗೆ, ದಸರಾ ಗಿಫ್ಟ್‌ ನೀಡಲು ಹೈಕಮಾಂಡ್‌ ನಿರ್ಧರಿಸಿದೆ. 35ರಿಂದ 37 ಕಾಂಗ್ರೆಸ್‌ ನಾಯಕರಿಗೆ, ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸಿದ್ಧಪಡಿಸಿದ ಪಟ್ಟಿ,...

ಮುಕಳೆಪ್ಪ ಗಂಡ-ಹೆಂಡ್ತಿ ಕೇಸ್‌ಗೆ ಟ್ವಿಸ್ಟ್‌: ವಿಡಿಯೋ ರಿಲೀಸ್‌!

ಯುಟ್ಯೂಬ್ ಕಾಮಿಡಿ ಸ್ಟಾರ್, ಧಾರವಾಡದ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪನ ಮೇಲೆ ಲವ್ ಜಿಹಾದ್, ಕಿಡ್ನ್ಯಾಪ್ ಕೇಸ್ ದಾಖಲಾಗಿದೆ. ಈ ಪ್ರಕರಣ ದಾಖಲಾದ ಮೇಲೆ ಮೊದಲ ಬಾರಿಗೆ ಮುಕಳೆಪ್ಪ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ಹಿಂದೂ ಯುವತಿ ಗಾಯತ್ರಿ ಜಾಲಿಹಾಳ ಅವರನ್ನು ಮುಕಳೆಪ್ಪ ಮದುವೆಯಾದ ಸುದ್ದಿ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಇದಾದ ಬಳಿಕ ಮೊದಲ...

ಎಡಗಾಲಿನ ನೋವಿಗೆ ಬಲಗಾಲಿಗೆ ಆಪರೇಷನ್‌!

ಹಾಸನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರಿಗೆ ಭಾರೀ ನಷ್ಟ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಜ್ಯೋತಿ ಎಂಬ ಮಹಿಳೆ ಎರಡು ವರ್ಷಗಳ ಹಿಂದೆ ನಡೆದ ಅಪಘಾತದ ವೇಳೆ ಎಡಗಾಲಿಗೆ ರಾಡ್‌ ಅಳವಡಿಸಿದ್ದರು. ಇತ್ತೀಚೆಗೆ ಆ ಕಾಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ನೀಡಿದ ವೈದ್ಯ ಡಾ. ಸಂತೋಷ್ ಎಡಗಾಲಿಗೆ ರಾಡ್‌...

ದಸರಾ ಆರಂಭವಾದ ಮರುದಿನವೇ ಚಾಮುಂಡಿಬೆಟ್ಟ ಅರ್ಚಕ ನಿಧನ

ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. 22 ರಂದು ದಸರಾಗೆ ವಿದ್ಯುಕ್ತ ಚಾಲನೆ ಕೂಡ ಕೊಡಲಾಗಿದೆ. ಬೆಟ್ಟದಲ್ಲಿ ಸೂತಕದ ಛಾಯೆಯಂತೆ ಇಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿದೇಗುಲದ ಅರ್ಚಕ ರಾಜು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅರ್ಚಕ ರಾಜು ನಿಧನದ ಕಾರಣದಿಂದ ಸದ್ಯ ಚಾಮುಂಡೇಶ್ವರಿ ದೇಗುಲದ ಗರ್ಭಗುಡಿಗೆ ತೆರೆ ಎಳೆಯಲಾಗಿದೆ. ರಾತ್ರಿವರೆಗೂ ಮೂಲ ವಿಗ್ರಹದ ದರ್ಶನ ಇರುವುದಿಲ್ಲ. ದಸರಾಗೆ ಚಾಲನೆ ದೊರೆತ...

ನವರಾತ್ರಿ ವೈಭವ ಮೇಲುಕೋಟೆ ಶರನ್ನವರಾತ್ರಿ ಆರಂಭ !

ಈಗಾಗಲೇ ನಾಡಹಬ್ಬ ಮೈಸೂರು ದಸರಾ ಆರಂಭವಾಗಿದೆ. ಮೈಸೂರು ಮನೆತನದ ಕುಲದೈವ ಶ್ರೀಚೆಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ಮಹಾಲಕ್ಷ್ಮಿಕಲ್ಯಾಣನಾಯಕಿ ದೇವಿಗೆ ನಡೆದ ಬಂಗಾರದ ಶೇಷವಾಹನೋತ್ಸವದೊಂದಿಗೆ ಸೋಮವಾರ ನವರಾತ್ರಿ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ದೇವಿ ಮೂರ್ತಿಯನ್ನು ಅಲಂಕರಿಸಿ ಬಂಗಾರದ ಶೇಷವಾಹನೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಮೇಲೆಕೋಟೆಯ ರಾಜಬೀದಿಯಲ್ಲಿ ವೈಭವದಿಂದ ಜರುಗಿತು. ನವರಾತ್ರಿ ಅಂಗವಾಗಿ ಪ್ರತಿದಿನ ಬೆಳಿಗ್ಗೆ 6.30ಕ್ಕೆ ನಿತ್ಯಪೂಜೆ, 11...

ಮೈಸೂರಲ್ಲಿ ಅದ್ಧೂರಿ ದಸರಾ ವೈಭವ : ಯುವ ದಸರಾ ನಾಳೆಯಿಂದ ಆರಂಭ

ನಾಡಹಬ್ಬ ಮೈಸೂರು ದಸರಾ ವೈಭವ ಭಾರೀ ಸಂಭ್ರಮದಲ್ಲಿ ನಡೆಯುತ್ತಿದೆ. ಅರಮನೆ ಆವರಣದಲ್ಲಿ ಸಿಂಹಾಸನಾರೋಹಣ, ಚಾಮುಂಡೇಶ್ವರಿ ದೇವಿಯ ಪೂಜೆ, ದಸರಾ ಹಬ್ಬದ ಸಾಂಪ್ರದಾಯಿಕ ವೈಭವವನ್ನು ತೋರಿಸುತ್ತಿವೆ. ಪ್ರತಿರಾತ್ರಿ ಬೆಳಗುವ ಅರಮನೆ ಮತ್ತು ಅದ್ಭುತ ಲೇಸರ್ ಶೋ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಇಂದು ವಿಶೇಷವಾಗಿ ಅರಮೆನ ಮುಂಬಾಗದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಆಚರಿಸಲಾಯ್ತು. ಅರಮನೆ ಮುಂಬಾಗದಲ್ಲಿ...

ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿದ ಡಾಕ್ಟರ್‌

ಹಾಸನದ ಹಿಮ್ಸ್‌ ಆಸ್ಪತ್ರೆ ವೈದ್ಯರ ಯಡವಟ್ಟಿಗೆ, ಮಹಿಳೆ ಹಾಸಿಗೆ ಹಿಡಿಯುವಂತೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿ ಕಾವಲು ನಿವಾಸಿ ಜ್ಯೋತಿ, ಎರಡೂವರೆ ವರ್ಷದ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ರು. ಎಡಗಾಲಿಗೆ ಗಂಭೀರ ಗಾಯವಾಗಿತ್ತು. ಬಳಿಕ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ರಾಡ್ ಅಳವಡಿಸಲಾಗಿತ್ತು. ಇತ್ತೀಚೆಗೆ ರಾಡ್‌ ಅಳವಡಿಸಿದ್ದ ಕಾಲಿನಲ್ಲಿ ನೋವು, ನರದ ಕಾಯಿಲೆಗಳು ಕಾಣಿಸಿಕೊಂಡಿದೆ. ಹಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ...

ಕೋಲಾರದಲ್ಲೂ ಸರ್ವರ್‌ ಪ್ರಾಬ್ಲಂ

ಕೋಲಾರ ಜಿಲ್ಲೆಯಲ್ಲೂ ಜಾತಿಗಣತಿಗೆ ಚಾಲನೆ ನೀಡಲಾಗಿದೆ. ಪ್ರಮುಖ ನಾಯಕರ ಮನೆಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ, ಚಾಲನೆ ನೀಡಲಾಗಿದೆ. ಆದ್ರೆ ತಾಂತ್ರಿಕ ಸಮಸ್ಯೆ ಹಿನ್ನೆಲೆ, ಕೆಲ ಹೊತ್ತು ತೊಡಕುಂಟಾಗಿ ಆತಂಕ ಮೂಡಿಸಿತ್ತು. ಕೈಪಿಡಿ, ಬ್ಯಾಗ್‌ ಒಳಗೊಂಡ ಕಿಟ್‌ಗಳೊಂದಿಗೆ, 15 ತಾಲೂಕುಗಳಲ್ಲಿ ಮನೆ ಮನೆಗೆ ತೆರಳಿ ಗಣತಿದಾರರು ಸಮೀಕ್ಷೆ ಕೈಗೊಂಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 4 ಲಕ್ಷದ 17 ಸಾವಿರದ...

ಗೋಣಿ ಚೀಲದ ಮೇಲೆ ಕುಳಿತ ದಲಿತ ಅಧಿಕಾರಿ

ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಜಾತಿ ತಾರತಮ್ಯ ನುಸುಳಿದೆ. ದಲಿತ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು, ಚೇರ್ - ಟೇಬಲ್ ಕೊಡದೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಮೇಲಾಧಿಕಾರಿಯ ಕಿರುಕುಳಕ್ಕೆ ಬೇಸತ್ತು, ಅಧಿಕಾರಿಯೊಬ್ಬರು ನೆಲದ ಮೇಲೆ ಗೋಣಿ ಚೀಲ ಹಾಸಿಕೊಂಡು ಕುಳಿತು ಕೆಲಸ ಮಾಡುತ್ತಿದ್ದಾರೆ. ಹಣಕಾಸು ವಿಭಾಗದ ಆಡಳಿತ ಅಧೀಕ್ಷಕ ವಿನಯ್‌ಗೆ, ಆಡಳಿತ ವಿಭಾಗದ...

ಬಣ್ಣ – ಬಣ್ಣದ ರಂಗೋಲಿಯಿಂದ ಅರಳಿದ ಮೈಸೂರು ದಸರಾ ವೈಭವ!

ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆ ವೈಭವದಿಂದ ಜರುಗಿತು. ಕುರುಬರಹಳ್ಳಿಯ ಕಲಾವಿದ ಪುನೀತ್ ಅವರು ಅಂಬಾರಿ ಹೊತ್ತ ಅರ್ಜುನ ಆನೆಯ ಚಿತ್ರವನ್ನು ಮೂಡಿಸಿದ್ದು, ಅದಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶಾಸಕ ಶ್ರೀ ವತ್ಸ ಸ್ಪರ್ಧೆಯನ್ನು ಉದ್ಘಾಟಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 150ಕ್ಕೂ ಹೆಚ್ಚು...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img