Saturday, May 9, 2026

ರಾಜ್ಯ

ಸಾಬ್ರು 25 ಹೆತ್ತು ನಮ್ಮ ತೆರಿಗೆ ತಿಂದು ತೇಗುತ್ತಾರೆ: ಯತ್ನಾಳ್‌!

ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್‌ಗೂ ವಿವಾದಕ್ಕೂ ಬಿಡಿಸಲಾಗದ ನಂಟಿದೆ. ಮದ್ದೂರು, ತುಮಕೂರು, ಕೊಪ್ಪಳದಲ್ಲಿ ದಾಖಲಾದ ಎಫ್‌ಐಆರ್‌ಗಳಿಗೆ ಕ್ಯಾರೇ ಅನ್ನದ ಯತ್ನಾಳ್ ಅವರು ದಾವಣಗೆರೆಯಲ್ಲಿ ಶಪಥ ಮಾಡಿದ್ದಾರೆ. ದೇಶದಲ್ಲಿ ಈಗ ಪ್ರಧಾನಿಯಾಗಿ ನರೇಂದ್ರ ಮೋದಿ ಇದ್ದಾರೆ. ಮುಂದೆ ಯೋಗಿ ಆದಿತ್ಯನಾಥ್ ಬರ್ತಾರೆ. ಯೋಗಿಯವರು ಮೋದಿಗಿಂತ ದಿಟ್ಟ ನಿರ್ಧಾರ ಕೈಗೊಳ್ತಾರೆ. ನಾನು ಸಿಎಂ ಆದ್ರೆ ಜೆಸಿಬಿ ಸಹಿತ...

ಹಿಂದೂನಾ? ಲಿಂಗಾಯತನಾ? ಪಂಚಮಸಾಲಿ ಸಭೆಯಲ್ಲಿ ಗದ್ದಲ!

ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಜಾತಿಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿಗಳ ಹೆಸರು ಇರೋದಕ್ಕೆ ಬಿಜೆಪಿ ವಿರೋಧಿಸಿದೆ. ಈ ನಡುವೆ ಲಿಂಗಾಯತ ಸಮುದಾಯದಲ್ಲಿ ಧರ್ಮ ಮತ್ತು ಜಾತಿ ಕಾಲಂನಲ್ಲಿ ಏನು ಬರೆಸಬೇಕು ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ,ಪಂಚಮಸಾಲಿ ಲಿಂಗಾಯತ ಮುಖಂಡರ ಸಭೆಯಲ್ಲಿ ತೀವ್ರ ಚರ್ಚೆ ಹಾಗೂ ಗದ್ದಲ ಉಂಟಾಗಿದೆ. ಪಂಚಮಸಾಲಿ...

ಯೋಗ ಸೆಂಟರ್‌ನಲ್ಲಿ ಯೋಗ ಗುರು ಕಾಮಕ್ರೀಡೆ!

ಕುಂಟನಿಗೆ 8 ಚೇಷ್ಟೆ ಆದ್ರೆ ಕುರುಡನಿಗೆ ನಾನಾ ಚೇಷ್ಟೆ ಅನ್ನೋದು ಗಾದೆ ಮಾತು. ಬೆಂಗಳೂರಲ್ಲಿ ಯೋಗ ಗುರು ಒಬ್ಬ ತನ್ನ ಚೇಷ್ಟೆಯಿಂದಲೇ 8 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರೋ ಆರೋಪ ಕೇಳಿ ಬಂದಿದೆ. ತನ್ನ ಯೋಗ ಸೆಂಟರ್‌ಗೆ ಬರುತ್ತಿದ್ದ ಬಾಲಕಿ, ಯುವತಿಯರನ್ನೇ ಈತ ಬಳಸಿಕೊಂಡಿದ್ದಾನೆ. 8 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ದೂರು ಈ ಯೋಗ...

ಬಂಗ್ಲೆಗುಡ್ಡದಲ್ಲಿ ಮೂಳೆಗಳ ರಾಶಿ, ರಾಶಿ

ಧರ್ಮಸ್ಥಳ ಪ್ರಕರಣ ಕ್ಲೈಮ್ಯಾಕ್ಸ್‌ಗೆ ಬಂದಿತ್ತು ಅನ್ನುವಷ್ಟರಲ್ಲಿ ಯಾರೂ ಊಹಿಸಿರದ ಸ್ಫೋಟಕ ಟ್ವಿಸ್ಟ್‌ ಸಿಕ್ಕಿದೆ. ಬಂಗ್ಲೆಗುಡ್ಡದಲ್ಲಿ ಸೆಪ್ಟೆಂಬರ್‌ 17ರಂದು ನಡೆದ ಶೋಧ ಕಾರ್ಯದಲ್ಲಿ, ಬರೋಬ್ಬರಿ 5 ತಲೆಬುರುಡೆ, 100 ಮೂಳೆಗಳು ಪತ್ತೆಯಾಗಿವೆ. ಸೌಜನ್ಯ ಮಾವ ವಿಠಲ ಗೌಡ ಹೇಳಿಕೆ ಆಧರಿಸಿ, ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ರು. ಇಡೀ ದಿನ ಪ್ರತ್ಯೇಕ 3 ತಂಡಗಳಾಗಿ, ಶೋಧ ಕಾರ್ಯ...

ಯಡಿಯೂರಪ್ಪ ಮಾತಿಗೆ ಕೆರಳಿದ ಪಾಟೀಲ್‌

ಜಾತಿಗಣತಿಯ ಹಿನ್ನೆಲೆಯಲ್ಲಿ ರಾಜ್ಯದ ಲಿಂಗಾಯತ ಸಮುದಾಯದ ಯುದ್ಧ ಜೋರಾಗಿದೆ. ವೀರಶೈವ-ಲಿಂಗಾಯತರು ಧರ್ಮದ ಕಾಲಂನಲ್ಲಿ, ಹಿಂದೂ ಎಂದು ಬರೆಸುವಂತೆ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆಡಿದ ಮಾತಿಗೆ ಸಚಿವ ಎಂ.ಬಿ. ಪಾಟೀಲ್‌ ಕಿಡಿಕಾರಿದ್ದಾರೆ. ಬಿಜೆಪಿಯನ್ನು ಮೆಚ್ಚಿಸಲು ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಹಿಂದು ಎಂದು ಬರೆಸುವಂತೆ ಕರೆ ನೀಡಿದ್ದಾರೆ. ಆದರೆ, ಅವರ...

ರಾಜ್ಯಕ್ಕೆ ಮತ್ತೆ ವರುಣಾಘಾತ: ಇಂದು ಯಾವ ಜಿಲ್ಲೆಗೆ ಅಲರ್ಟ್!

ರಾಜ್ಯಾದ್ಯಂತ ಮಳೆರಾಯನ ಆರ್ಭಟ ಮತ್ತೆ ಜೋರಾಗಿದೆ. ನಿನ್ನೆ ರಾತ್ರಿ ರಾಜಧಾನಿ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಗೆ ಜನರು ಬೆಚ್ಚಿಬಿದ್ದಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಇಡೀ ರಾತ್ರಿ ಜಾಗರಣೆ ಮಾಡುವಂತಾಗಿದೆ. ಲಾಲ್‌ ಬಾಗ್ ರಸ್ತೆ, ಕಾರ್ಪೊರೇಷನ್, ಟೌನ್ ಹಾಲ್, ಜಯನಗರ, ಶಾಂತಿನಗರ, ಡಬ್ಬಲ್ ರೋಡ್ ಸೇರಿ ಸುತ್ತಮುತ್ತ ಸುರಿದ ಮಳೆಯಿಂದ ಮರಗಳು, ಕರೆಂಟ್ ಕಂಬಗಳು ಧರೆಗುರುಳಿವೆ....

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಗುಡುಗು, ಸಿಡಿಲಿನ ಆರ್ಭಟ

ಬೆಂಗಳೂರು ನಗರ ಸೇರಿದಂತೆ, ಉತ್ತರ ಕರ್ನಾಟಕದ ಹಲವೆಡೆ ಭರ್ಜರಿ ಮಳೆಯಾಗಿದೆ. ಸೆಪ್ಟೆಂಬರ್ 18, 19ರಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆ ಇದೆ. 13 ಜಿಲ್ಲೆಗಳಿಗೆ ಭಾರಿ ಮಳೆಯ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉತ್ತರ ಕನ್ನಡ ಹಾಗೂ ಉಡುಪಿ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ರಾಯಚೂರು, ವಿಜಯಪುರ ಜಿಲ್ಲೆಗಳಿಗೆ ಇಂದು...

ಮಂಡ್ಯ ಜಿಲ್ಲೆಗೆ ಡೆಂಘೀ ಚಿಕುನ್‌ಗುನ್ಯಾ ಅಪಾಯ!

ಡೆಂಗಿ ಸಾಂಕ್ರಾಮಿಕ ರೋಗವಾಗಿದ್ದು, ನಿಯಂತ್ರಣ ಕ್ರಮಗಳಲ್ಲಿ ಸಹಕರಿಸದವರ ವಿರುದ್ಧ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ ಎಚ್ಚರಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ...

13 ಭಾಗಗಳಲ್ಲಿ ವಿಸರ್ಜನೆ : ಮೈಸೂರು ಸಿಂಹಾಸನದ ಅಚ್ಚರಿಯ ಕಥೆ

ಮೈಸೂರು ಅರಮನೆ ದರ್ಬಾರ್ ಹಾಲಿನಲ್ಲಿ ಇಂದು ನವರಾತ್ರಿ ಪೂಜಾ ಕೈಂಕರ್ಯದ ಅಂಗವಾಗಿ ರತ್ನ ಖಚಿತ ಸ್ವರ್ಣ ಸಿಂಹಾಸನವನ್ನು ಜೋಡಿಸಲಾಯಿತು. ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಮತ್ತು ಗೆಜ್ಜೆಗಳ್ಳಿಯ ನಿಪುಣರು ಈ ಕಾರ್ಯವನ್ನು ನೆರವೇರಿಸಿದರು. ಇದಕ್ಕೂ ಮುನ್ನ ಗಣಪತಿ ಹೋಮ, ಚಾಮುಂಡಿ ದೇವಿಯ ಪೂಜೆ ಹಾಗೂ ಹವನಗಳನ್ನು ನಡೆಸಲಾಗಿದ್ದು, ನಂತರ ಭದ್ರತಾ ಕೊಠಡಿಯಲ್ಲಿದ್ದ...

ದಸರಾ ಜಂಬೂ ಸವಾರಿ ವೀಕ್ಷಣೆಗೆ ಹಳೆಯ ಕಟ್ಟಡಗಳಿಗೆ ಬೀಗ!

ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ದಿನ ಅರಮನೆಯಿಂದ ಬನ್ನಿಮಂಟಪ ಮೈದಾನವರೆಗೆ ಸಾಗುವ ಮಾರ್ಗದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ನಗರದ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಸ್ತೆ ಎರಡೂ ಬದಿಯ ಹಳೆಯ ಹಾಗೂ ಶಿಥಿಲ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಪರಿಶೀಲಿಸಿತು. ಕಟ್ಟಡ ಮಾಲೀಕರಿಗೆ ಕಟ್ಟಡಗಳ ಮೇಲ್ಛಾವಣಿ, ಟೆರೆಸ್,...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img