Thursday, September 24, 2026

ಜಿಲ್ಲಾ ಸುದ್ದಿಗಳು

ಮೃಗಾಲಯ ಇತಿಹಾಸದಲ್ಲೇ ದಾಖಲೆ ಬರೆದ ಕಲೆಕ್ಷನ್ ಮೊತ್ತ!

ಮೈಸೂರು ದಸರಾ ನಾಡಹಬ್ಬದ ಸಂಭ್ರಮದ ನಡುವೆ ಈ ಬಾರಿ ಚಾಮರಾಜೇಂದ್ರ ಮೃಗಾಲಯ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಮೆರೆಯಿತು. ಹಬ್ಬದ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಜನಸಾಗರದಿಂದಾಗಿ ಮೃಗಾಲಯದಲ್ಲಿ ದಾಖಲೆಯ ಮಟ್ಟದ ಆದಾಯ ಸಂಗ್ರಹವಾಗಿದ್ದು, ಒಟ್ಟು 191.37 ಲಕ್ಷ ಗಳಿಸಲಾಗಿದೆ. ಇದು ಕಳೆದ ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಮೊತ್ತವಾಗಿದ್ದು ಹೊಸ ದಾಖಲೆ ನಿರ್ಮಿಸಿದೆ. ದಸರಾ ಅವಧಿಯಲ್ಲಿ 1.56...

ಮೈಸೂರು ಬರ್ಬರ ಕೊಲೆಗೆ ಟ್ವಿಸ್ಟ್ : 5 ಆರೋಪಿಗಳು ಶರಣು!

ದೊಡ್ಡಕೆರೆ ಮೈದಾನದ ಬಳಿ ನಡೆದ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಐವರು ಮಂಗಳವಾರ ತಡರಾತ್ರಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಮನೋಜ್ ಅಲಿಯಾಸ್ ಬಿಗ್ ಶೋ, ಮಲ್ಲಿಕಾರ್ಜುನ ಅಲಿಯಾಸ್ ಹಾಲಪ್ಪ ಸೇರಿದಂತೆ ಐವರು ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಚೆಗೆ ನಡೆದ ಕಾರ್ತಿಕ್ ಹತ್ಯೆ ಪ್ರಕರಣದ ನಂತರ ಉಂಟಾದ ಘಟನೆಗಳ ಸರಪಳಿಯೇ ವೆಂಕಟೇಶ್ ಹತ್ಯೆಗೆ ಕಾರಣವಾಗಿದೆ ಎಂದು...

ಮೀನಾಕ್ಷಿ ಸೋಮೇಶ್ವರ ದೇಗುಲದಲ್ಲಿ ಕುಂಬ್ಳೆ ದಂಪತಿ

ಭಾರತದ ಮಾಜಿ ಕ್ರಿಕೆಟಿಗ ಮತ್ತು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರು ಪತ್ನಿ ಚೇತನಾ ಜೊತೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಪ್ರಸಿದ್ಧ ಮೀನಾಕ್ಷಿ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿಂದೆ ಮಾಡಿದ ಹರಕೆ ನೆರವೇರಿದ ಹಿನ್ನೆಲೆಯಲ್ಲಿ ಕುಂಬ್ಳೆ ದಂಪತಿ ದೇವಾಲಯಕ್ಕೆ ಆಗಮಿಸಿದ್ದು, ಚೇತನಾ ಕುಂಬ್ಳೆ ದೇವರಿಗೆ ಮಡಿಲಕ್ಕಿ ಅರ್ಪಿಸಿದರು....

ಹಾಸನಾಂಬೆ ಉತ್ಸವಕ್ಕೆ ಸ್ಟ್ರಿಕ್ಟ್‌ ರೂಲ್ಸ್

ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್‌ 9ರಿಂದ ಜಾತ್ರೆ ಶುರುವಾಗ್ತಿದ್ದು, ಈ ಬಾರಿಯಿಂದ ವಿಐಪಿ, ವಿವಿಐಪಿ ಸಂಸ್ಕೃತಿಗೆ ಬ್ರೇಕ್‌ ಹಾಕಲಾಗಿದೆ. ಕಳೆದ ವರ್ಷ ವಿಐಪಿಗಳ ಎಸ್ಕಾರ್ಟ್‌ಗಳ ಸದ್ದು ಹೆಚ್ಚಾಗಿತ್ತು. ಈ ಬಾರಿ ಕೇವಲ 7 ಮಂದಿಗೆ ಮಾತ್ರ ಎಸ್ಕಾರ್ಟ್‌ ವ್ಯವಸ್ಥೆ ಮಾಡಲಾಗಿದೆಯಂತೆ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು,...

ಮೈಸೂರಲ್ಲಿ ಹಾಡುಹಗಲೇ ಬರ್ಬರ ಹತ್ಯೆ : ಹಳೆಯ ವೈಷಮ್ಯವೇ ಕಾರಣ?

ಮೈಸೂರು ವಸ್ತುಪ್ರದರ್ಶನ ಮೈದಾನದ ಸಮೀಪ ಮಧ್ಯಾಹ್ನ ನಡೆದ ಭೀಕರ ಘಟನೆ ನಗರವನ್ನೇ ಬೆಚ್ಚಿಬೀಳಿಸಿದೆ. ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಮುಖಾಮುಚ್ಚಿ, ಅಲಿಯಾಸ್ ಗಿಲಿಗಿಲಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ವೆಂಕಟೇಶ್ ಕಾರಿನಲ್ಲಿದ್ದಾಗ ಯುವಕರ ಗುಂಪೊಂದು ಲಾಂಗ್...

ಗಣತಿದಾರರ ಮೇಲೆ ಹಲ್ಲೆ: ದಾಖಲೆ ಕಿತ್ತುಕೊಂಡು ಗಲಾಟೆ!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್‌ನಲ್ಲಿ ಗಣತಿದಾರರ ಮೇಲೆ ಹಲ್ಲೆ ಮತ್ತು ದಾಖಲೆ ಕಿತ್ತುಕೊಂಡ ಘಟನೆ ನಡೆದಿದೆ. ಸಮೀಕ್ಷೆಗಾಗಿ ಮನೆಗೆ ತೆರಳಿದ್ದ ಗಣತಿದಾರ ಜನಾರ್ಧನ ಅವರ ಬಳಿ, ಒಂದು ಕುಟುಂಬ ದಾಖಲೆ ಕಿತ್ತುಕೊಂಡು ನಂತರ ವಾಪಸು ಕಳಿಸಿದ್ದೆಂದು ಆರೋಪಿಸಲಾಗಿದೆ. ಆ ಮನೆಯ R.R ನಂಬರ್ ಹಾಗೂ ರೇಷನ್ ಕಾರ್ಡ್ ಮಾಹಿತಿ ಕೇಳಿದ್ದಕ್ಕೆ ಕುಟುಂಬದ ಸದಸ್ಯರು ಗಣತಿದಾರರೊಂದಿಗೆ...

ನಡುರಸ್ತೆಯಲ್ಲಿ ಅಣ್ತಮ್ಮಾಸ್ ಜಗಳ

ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತು ಪದೇ, ಪದೇ ನಿಜವಾಗುತ್ತದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಮ್ಮಾರನಹಳ್ಳಿ ಗ್ರಾಮದಲ್ಲಿ ನಡೆದ ಈ ಘಟನೆ ಇದಕ್ಕೆ ಉದಾಹರಣೆಯಾಗಿದೆ. ಆಸ್ತಿ ವಿವಾದಕ್ಕೆ ಪೊಲೀಸರ ಎದುರೇ ಅಣ್ಣ ತಮ್ಮಂದಿರು, ಮಕ್ಕಳ ಮಧ್ಯೆ ಭಾರೀ ಕಾಳಗ ನಡೆದಿದೆ. ರುದ್ರಪ್ಪ -ಹಾಲೇಶಪ್ಪ ಕುಟುಂಬಗಳ ಮಧ್ಯೆ, ಅಡಿಕೆ ಕಟಾವು ಮಾಡುವ ವಿಚಾರಕ್ಕೆ ಹೊಡೆದಾಟವಾಗಿದೆ....

ಹುಲಿಗೆಮ್ಮ ದೇವಿ ದರ್ಶನಕ್ಕೂ ಮುನ್ನವೇ ಭಕ್ತರಿಗೆ ಮೃತ್ಯುವಿನ ಕರೆ!

ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದೇವಾಲಯದ ದರ್ಶನಕ್ಕಾಗಿ ಪಾದಯಾತ್ರೆಯಲ್ಲಿ ತೊಡಗಿದ್ದ ಭಕ್ತರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದ ಪರಿಣಾಮ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಮಂಗಳವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿ ನಡೆದಿದೆ. ಮೃತರನ್ನು 40 ವರ್ಷದ...

ಯಮಧೂತ ಬಸ್‌ಗೆ ಹುಲಿಗೆಮ್ಮ ಭಕ್ತರು ಬಲಿ

ಕೇವಲ 3 ಗಂಟೆ ಕಳೆದಿದ್ರೆ ದೇವರ ಸನ್ನಿಧಿ ತಲುಪುತ್ತಿದ್ರು. ಅಷ್ಟರಲ್ಲೇ ಯಮಧೂತನಂತೆ ಬಂದ ಬಸ್‌ ಹರಿದು, ಮೂವರು ಪಾದಯಾತ್ರಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದ, 40 ವರ್ಷದ ಅನ್ನಪೂರ್ಣ, 25 ವರ್ಷದ ಪ್ರಕಾಶ್, 19 ವರ್ಷದ ಶರಣಪ್ಪ ಬಲಿಯಾಗಿದ್ದಾರೆ....

ವಾಸಂತಿ ಇನ್ನೂ ಬದುಕಿದ್ದಾಳೆ ಎಂದ ಸುಜಾತಾ ಭಟ್

ಧರ್ಮಸ್ಥಳದ ಪ್ರಕರಣದಲ್ಲಿ ಸಂಚಲನ ಸೃಷ್ಟಿಸಿದ್ದ ಸುಜಾತಾ ಭಟ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುರುಡೆ ಗ್ಯಾಂಗ್‌ ಜೊತೆ ಹೋಗಿ ತಪ್ಪು ಮಾಡಿದ್ದೇನೆ. ಆ ಪಶ್ಚಾತ್ತಾಪ ನನಗೆ ಈಗಲೂ ಕಾಡುತ್ತಾ ಇದೆ. 60 ವರ್ಷದ ಜೀವನದಲ್ಲಿ ಇದೊಂದು ಕಪ್ಪುಚುಕ್ಕೆ. ಉಳಿದ ಜೀವನವನ್ನು ಚೆನ್ನಾಗಿ ಮಾಡುವ ಆಸೆ ಇದೆ. ಮುಂದಿನ ವಾರ ಧರ್ಮಸ್ಥಳಕ್ಕೆ ಹೋಗುತ್ತೇನೆ. ದೇವರ ದರ್ಶನ...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img