ರೇವಣ್ಣನ ಕಾಲ ಮುಗಿದಿದೆ ಎಂದು ತಿಳಿದುಕೊಂಡಿದ್ದಾರೆ. ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಯಾರು ಅನ್ಯಾಯ ಮಾಡಿದ್ದಾರೋ ಅವರನ್ನು ಧರ್ಮಸ್ಥಳದ ಮಂಜುನಾಥನೇ ನೋಡಿಕೊಳ್ಳುತ್ತಾನೆ ಎಂದು ಗುಡುಗಿದರು.
ಇದುವರೆಗೂ ನಾನು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಿದ್ದೇನೆ. ದೇವೇಗೌಡರ ಅಧಿಕಾರ ಅವಧಿಯಲ್ಲಿಯೂ ರಾಷ್ಟ್ರೀಯ ಹೆದ್ದಾರಿ, ರೈಲ್ವೆ...
ಎರಡು ದಿನದ ಮೈಸೂರು ಪ್ರವಾಸದಲ್ಲಿದ್ದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಅರಮನೆಯಲ್ಲಿರುವ ರಾಜವಂಶಸ್ಥರ ಮನೆಗೆ ಭೇಟಿ ನೀಡಿ, ಬೆಳಗಿನ ಉಪಹಾರ ಸೇವಿಸಿದ್ದಾರೆ ಹಾಗೂ ಅರಮನೆಯ ಕೆಲವು ಭಾಗಗಳನ್ನು ವೀಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಸಂತೋಷ ವ್ಯಕ್ತಪಡಿಸಿದ್ದಾರೆ. ಗಣ್ಯರನ್ನು ಸ್ವಾಗತಿಸಲು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆ ಆಗಿದೆ. ನನ್ನ ಆಹ್ವಾನವನ್ನು ಸ್ವೀಕರಿಸಿ ಗೌರವಿಸಿದ್ದಕ್ಕಾಗಿ...
ಜೀ ಪವರ್ ವಾಹಿನಿಯ ಹೊಸ ರಿಯಾಲಿಟಿ ಶೋ ‘ಹಳ್ಳಿ ಪವರ್’ ಈಗಾಗಲೇ ಪ್ರೇಕ್ಷಕರ ಮನ ಸೆಳೆದಿದೆ. ಸ್ಪರ್ಧಿಗಳು ಮೊದಲೇ ದಿನದಿಂದ ಹಳ್ಳಿ ಜೀವನದ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ನಗರ ಜೀವನಕ್ಕೆ ಗುಡ್‌ಬೈ ಹೇಳಿ ಹಳ್ಳಿಗೆ ಕಾಲಿಟ್ಟ 12 ಸ್ಪರ್ಧಿಗಳ ಪೈಕಿ ಕೆಲವರು ಶೋನಿಂದ ಅರ್ಧಕ್ಕೆ ಹೊರಡುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ರಿಯಾಲಿಟಿ ಶೋಗೆ...
ಹಾಸನ ಜಿಲ್ಲೆಯ ಹಳೇಬೀಡು ಭಾಗದಲ್ಲಿ, ಶುಂಠಿ ಬೆಳೆಗೆ ರೋಗ ಹರಡುತ್ತಿದೆ. ಗಿಡಗಳಲ್ಲಿ ಬಿಳಿ ಸುಳಿ ಕಾಣಿಸಿಕೊಂಡಿದ್ದು, ಹಳದಿ ಬಣ್ಣಕ್ಕೆ ತಿರುಗಿ ಕೊಳೆಯುತ್ತಿವೆ. ಬೆಂಕಿ ಬೆಳೆ ರೋಗದಿಂದಲೂ ಶುಂಠಿ ಬೆಳೆ ಹಾಳಾಗ್ತಿದೆ.
ಸಾಲ ಮಾಡಿ ಶುಂಠಿ ಬೆಳೆ ಹಾಕಿದ್ದಾಯ್ತು. ಕೈ ತುಂಬಾ ಹಣ ಗಳಿಸಿ, ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಲು ಹೊರಟ ರೈತರು ಕಂಗಾಲಾಗಿದ್ದಾರೆ. ರಾಜಗೆರೆ ಗ್ರಾಮದ ರೈತರು...
ಬಿಜೆಪಿಗರಿಗಿಂತ ಒಂದು ದಿನ ಮೊದಲೇ ನಡೆದ ಜೆಡಿಎಸ್‌ನ ಸತ್ಯಯಾತ್ರೆ ಯಶಸ್ವಿಯಾಗಿದೆ. ಆಗಸ್ಟ್ 31ರಂದು ಹಾಸನದಿಂದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹೊರಟ ಸತ್ಯ ಯಾತ್ರೆ, ಧರ್ಮಸ್ಥಳದಲ್ಲಿ ಕಹಳೆ ಮೊಳಗಿಸಿತ್ತು. ಎಲ್ಲಿ ನೋಡಿದ್ರೂ ಕೇಸರಿ ಬಾವುಟಗಳೇ ರಾರಾಜಿಸಿದ್ವು. ಧರ್ಮಸ್ಥಳದ ಪರ ನಾವಿದ್ದೇವೆ ಅಂತಾ ಸಾರಿ ಸಾರಿ ಹೇಳಿದಂತೆ ಭಾಸವಾಗಿತ್ತು.
ಸತ್ಯಯಾತ್ರೆಯ ಯಶಸ್ಸಿಗೆ ನಿಖಿಲ್ ಕುಮಾರಸ್ವಾಮಿ, ಟ್ವೀಟ್...
ಕೆಎಂಎಫ್ ಚುನಾವಣೆ, ವಿಧಾನಸಭಾ, ಲೋಕಸಭಾ ಚುನಾವಣೆಗಳಿಗೂ ಕಮ್ಮಿ ಇಲ್ಲ. ಘಟಾನುಘಟಿ ನಾಯಕರ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ. ಅಧ್ಯಕ್ಷ ಹುದ್ದೆಗೆ ನಾಲ್ವರು ಕಾಂಗ್ರೆಸ್ ನಾಯಕರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಈ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ.
23 ಲಕ್ಷ ಸದಸ್ಯತ್ವವನ್ನು ಹೊಂದಿರುವ ಕೆಎಂಎಫ್, 4 ಒಕ್ಕೂಟದಿಂದ ಆರಂಭವಾಗಿ 16 ಒಕ್ಕೂಟಗಳವರೆಗೆ ಬೆಳೆದು ನಿಂತಿದೆ. ಗುಜರಾತ್...
ಧರ್ಮಸ್ಥಳದ ಜೊತೆ ನಾವಿದ್ದೇವೆ ಅನ್ನೋ ಸಂದೇಶ ಸಾರಲು, ದೋಸ್ತಿ ಪಕ್ಷಗಳು ಶ್ರೀಕ್ಷೇತ್ರಕ್ಕೆ ಸಾಲು ಸಾಲು ಯಾತ್ರೆ ಕೈಗೊಳ್ಳುತ್ತಿದ್ದಾರೆ. ಧರ್ಮಸ್ಥಳ ಚಲೋ ಹೆಸರಲ್ಲಿ ಬಿಜೆಪಿ ಯಾತ್ರೆ ಮಾಡಿದ್ರೆ, ಸತ್ಯ ಯಾತ್ರೆ ಹೆಸರಲ್ಲಿ ಧರ್ಮಸ್ಥಳಕ್ಕೆ ಜೆಡಿಎಸ್ ನಿಯೋಗ ಎಂಟ್ರಿ ಕೊಟ್ಟಿತ್ತು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ, ಹಾಸನದಿಂದ ಯಾತ್ರೆ ಕೈಗೊಳ್ಳಲಾಗಿದೆ. ನಗರದ ಹೊರವಲಯದ ಕಂದಲಿಯಿಂದ...
ರಾಜ್ಯದಲ್ಲಿ ಮತ್ತೊಂದು ಭಯಾನಕ ಹತ್ಯೆ ನಡೆದಿದೆ. ಮನೆಯಲ್ಲಿ ಜಗಳವಾಡಿದ ವಿವಾದ, ಕೊನೆಗೆ ಕ್ರೂರ ಹತ್ಯೆಯ ರೂಪವನ್ನು ಪಡೆದುಕೊಂಡಿದೆ. ಪತ್ನಿ ಮಂಚಕ್ಕೆ ಬರಲು ನಿರಾಕರಿಸಿದ್ದಕ್ಕೆ ಪತಿ ಆಕೆಯ ಕತ್ತು ಸೀಳಿ ಜೀವವನ್ನೇ ತೆಗೆದಿದ್ದಾನೆ. ಈ ಘಟನೆ ರಾಜ್ಯದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದೇಸಾಯಿ ಬೋಗಾಪುರ ಗ್ರಾಮದಲ್ಲಿ ನಡೆದಿದೆ
ದೇಶಾಯಿ ಬೋಗಾಪುರ ಸಣ್ಣ ಹಳ್ಳಿ. ಆದರೆ ಶನಿವಾರ...
ಅರಸೀಕೆರೆಯಲ್ಲಿ ಜೆಡಿಎಸ್ ವಿರುದ್ಧ ಶಾಸಕ ಕೆ.ಎಂ ಶಿವಲಿಂಗೇಗೌಡರು ಸಮರ ಸಾರಿದ್ದಾರೆ. ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಶಿವಲಿಂಗೇಗೌಡ್ರು ಹೇಳಿದ್ದಾರೆ. ವಸತಿ ಯೋಜನೆ ಅನುಷ್ಠಾನದ ವೇಳೆ ನಡೆದಿರುವ ಹಗರಣದಲ್ಲಿ ನನ್ನ ಹಸ್ತಕ್ಷೇಪವಿದೆ ಎಂದು ಆರೋಪಿಸಲಾಗಿದೆ. ಇದು ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಸೆಪ್ಟಂಬರ್ 1ರಂದು ರಾಜ್ಯ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸುತೇನೆಂದು...
Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...