Banglore News : ಯಾವುದೇ ಕಾರಣಕ್ಕೂ ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು ಎಂದು ಕನ್ನಡ ಪರ ಸಂಘಟನೆಗಳು, ರೈತರು ಇಂದು ಬೆಂಗಳೂರು ಬಂದ್ಗೆ ಕರೆ ಕೊಟ್ಟಿವೆ. 90ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ. ಇನ್ನು ಬಂದ್ ನಡುವೆ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಲು ಕೆಲ ಸಂಘಟನೆಗಳು ಮುಂದಾಗಿವೆ. ಎಲ್ಲೆಲ್ಲಿ? ಯಾವ ಸಂಘಟನೆಗಳು ಹೋರಾಟ ನಡೆಸಲಿವೆ ಇಲ್ಲಿವೆ ಮಾಹಿತಿ.
ಕಾವೇರಿ ಹೋರಾಟ ಸಮಿತಿ: ಬೆಳಗ್ಗೆ 09.30ಕ್ಕೆ ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಬಳೆಪೇಟೆ, ಮೈಸೂರು ಬ್ಯಾಂಕ್ ಸರ್ಕಲ್, ಟೌನ್ ಹಾಲ್ ಸಮೀಪ ಜನರಲ್ಲಿ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.
ಕನ್ನಡ ಚಳುವಳಿ ಕೇಂದ್ರ ಸಮಿತಿ, ನಾಡಪ್ರಭು ಕೆಂಪೇಗೌಡ ಪ್ರತಿಷ್ಟಾನ ವತಿಯಿಂದ ಟೋಲ್ ಗೇಟ್ ಸಿಗ್ನಲ್ ನಿಂದ ಟೌನ್ ಹಾಲ್ ತನಕ ಬೆಳಗ್ಗೆ 9 ಘಂಟೆಗೆ ಬೈಕ್ ರ್ಯಾಲಿ.
ಜಯ ಕರ್ನಾಟಕ ಸಮರ ಸೇನೆ: ಬಾಪೂಜಿನಗರಿಂದ ಸ್ಯಾಟಲೈಟ್ ಬಸ್ ನಿಲ್ದಾಣ ತನಕ ಕಾಲ್ನಡಿಗೆ ಮೂಲಕ ಬಂದು ತಮಿಳುನಾಡು ಬಸ್ ತಡೆ. ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಟೌನ್ ಹಾಲ್ ತನಕ ಸೈಕಲ್ ಜಾಥ ( ಖಾಲಿ ಬಿಂದಿಗೆಯನ್ನ ಸೈಕಲ್ಗಳಿಗೆ ಕಟ್ಟಿಕೊಂಡು ಕೆ.ಆರ್. ಮಾರ್ಕೆಟ್, ಟೌನ್ ಹಾಲ್ ತನಕ ಗುಲಾಬಿ ಹೂ ನೀಡಿ ಬಂದ್ ಗೆ ಮನವಿ.
ಖಾಸಗಿ ವಾಹನ ಮಾಲೀಕರ ಒಕ್ಕೂಟ: ನ್ಯಾಷನಲ್ ಕಾಲೇಜ್ ಮೈದಾನದಿಂದ ಟೌನ್ ಹಾಲ್ ವರೆಗೆ ಒಂದು ಸಾವಿರ ಆಟೋ, 300 ಕ್ಯಾಬ್ ಗಳ ಮೂಲಕ ಮೆರವಣಿಗೆ ಸ್ವಾಭಿಮಾನಿ ಸೇನೆಯಿಂದ ಮೈಸೂರು ರೋಡ್ ನ ಗಾಳಿ ಆಂಜನೇಯ ದೇವಸ್ಥಾನ ದಿಂದ ಮೆಜೆಸ್ಟಿಕ್, ಗಾಂಧಿನಗರ, ಬ್ರಿಗೇಡ್ , ಟೌನ್ ಹಾಲ್ ತನಕ ಕ್ಯಾಂಟರ್ ವಾಹನ ಮೂಲಕ ಬಂದ್ ಬಗ್ಗೆ ಜಾಗೃತಿ, ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡುವಂತೆ ಮನವಿ.
ಪೀಸ್ ಆಟೋ ಸಂಘಟನೆಯಿಂದ 9 ಗಂಟೆಗೆ ಆಟೋ ರ್ಯಾಲಿ
ಕರ್ನಾಟಕ ಕ್ರೈಸ್ತ ಸಂಘಟನೆಯ 200 ಜನರಿಂದ ಟೌನ್ ಹಾಲ್ ನಿಂದ ಫ್ರೀಡಂಪಾರ್ಕ್ ವರೆಗೆ ಬೈಕ್ ರ್ಯಾಲಿ
ನಮ್ಮ ಕರುನಾಡು ಯುವ ಸೇನೆಯಿಂದ ನವರಂಗ್ ಸರ್ಕಲ್ ಬಳಿ ಟೈರ್ ಗೆ ಬೆಂಕಿ, ರಾಜ್ಯ ನಾಯಕರ ಪ್ರತಿಕೃತಿ ದಹನ.
Jeeni Millet : ಪ್ರತಿಭಾ ಕಾರಂಜಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜೀನಿ ಕಂಪನಿ ವತಿಯಿಂದ ಊಟದ ವ್ಯವಸ್ಥೆ