Tuesday, October 14, 2025

Latest Posts

ಚಾಣಕ್ಯರ ಪ್ರಕಾರ ನೀವು ವಿವಾಹಕ್ಕೂ ಮುನ್ನ ವಧುವಿಗೆ ಕೇಳಬೇಕಾದ ಪ್ರಶ್ನೆಗಳಿವು- ಭಾಗ 1

- Advertisement -

ನೀವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ, ಇತರರರ ಮನೆಯ ವಿಷಯದ ಬಗ್ಗೆ ನಾವು ಹೀಯಾಳಿಸಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಇಂಥ ಹಲವು ವಿಚಾರಗಳನ್ನು ಹೇಳಿರುವ ಚಾಣಕ್ಯರು, ಮನುಷ್ಯನ ಗುಣದ ಬಗ್ಗೆ, ಮದುವೆ ಬಗ್ಗೆಯೂ ಹಲವು ವಿಷಯಗಳನ್ನ ಹೇಳಿದ್ದಾರೆ. ಅದರಲ್ಲಿ ನಾವಿಂದು ವಿವಾಹಕ್ಕೂ ಮುನ್ನ ವರ ವಧುವಿಗೆ ಕೇಳಬೇಕಾದ ಪ್ರಶ್ನೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮದುವೆಗೂ ಮುನ್ನ ಹುಡುಗ ಹುಡುಗ ಭೇಟಿಯಾಗಿ ಮಾತನಾಡುವ ಸಮಯ ಬರುತ್ತದೆ. ಆಗ ವರ ವಧುವಿಗೆ ಹೇಗೆ ಮಾತನಾಡಿಸಲಿ, ಏನು ಪ್ರಶ್ನೆ ಕೇಳಲಿ ಎಂಬ ಗೊಂದಲದಲ್ಲಿರುತ್ತಾನೆ. ಅಂಥವರಿಗಾಗಿಯೇ ಚಾಣಕ್ಯರು 5 ಪ್ರಶ್ನೆಗಳನ್ನು ಕೇಳಬೇಕು ಎಂದು ಹೇಳಿದ್ದಾರೆ. ಮೊದಲನೇಯದಾಗಿ ನಿಮಗೆ ಈ ಮದುವೆ ಇಷ್ಟವಿದೆಯಾ..? ಈ ಮದುವೆಗೆ ನೀವು ಸಂಪೂರ್ಣ ಮನಸ್ಸಿನಿಂದ ಒಪ್ಪಿದ್ದೀರಾ ಎಂದು ಕೇಳುವ ಮೂಲಕ, ಮಾತು ಶುರು ಮಾಡಿ.

ಯಾಕಂದ್ರೆ ಪ್ರತೀ ಹೆಣ್ಣು ತನ್ನೊಪ್ಪಿಗೆಯಿಂದಲೇ ಮಾತನಾಡ್ಡುತ್ತಾಳೆ ಎಂದು ಹೇಳಲು ಬರುವುದಿಲ್ಲ. ಮನೆಯವರ ಒತ್ತಾಯದ ಮೇರೆಗೆ ಆಕೆ ಮದುವೆಯಾಗಬಹುದು. ಅಥವಾ . ಯಾವುದೋ ಹೆದರಿಕೆಯಿಂದ ಆಕೆ ಮದುವೆಗೆ ಒಪ್ಪಿರಬಹುದು. ಒತ್ತಾಯಪೂರ್ವಕವಾಗಿ ಮದುವೆಯಾದರೆ, ಆ ಜೀವನದಲ್ಲಿ ಸಂತೋಷ ಬರಲು ಸಾಧ್ಯವೇ ಇಲ್ಲ. ಹಾಗಾಗಿ ಆಕೆಯ ಬಳಿ ಮದುವೆಗೆ ಸಂಪೂರ್ಣ ಒಪ್ಪಿಗೆ ಇದೆಯೇ ಎಂದೊಮ್ಮೆ ಕೇಳಿ.

ಎರಡನೇಯದಾಗಿ ಆಕೆಯ ಕೆಲಸದ ಬಗ್ಗೆ ಕೇಳಿ. ಇಂದಿನ ಕಾಲದ ಹೆಣ್ಣು ಮಕ್ಕಳಲ್ಲಿ ಹಲವರು ಬರೀ ಗೃಹಿಣಿಯಾಗಿರಲು ಇಚ್ಛಿಸುವುದಿಲ್ಲ. ಅವರಿಗೆ ಅವರದೊಂದು ಪರಿಚಯ ಸಮಾಜಕ್ಕಿರಬೇಕು, ತಾನೂ ನಾಲ್ಕು ಕಾಸು ದುಡಿಯಬೇಕು. ತಾನು ಸ್ವಾವಲಂಬಿಯಾಗಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿ ಬರೀ ಮನೆ ಕೆಲಸಕ್ಕೆ ಸೀಮಿತವಾಗಿರಬೇಕು ಅನ್ನೋದು ನಿಮ್ಮ ಆಸೆ ಇದ್ದರೆ, ನೀವು ಗೃಹಣಿಯಾಗಿರಲು ಇಚ್ಛಿಸುವ ಹೆಣ್ಣನ್ನೇ ಹುಡುಕಬೇಕಾಗುತ್ತದೆ. ಆದ್ರೆ ನೀವು ವಿದ್ಯಾವಂತ, ಕೆಲಸ ಮಾಡಲು ಇಚ್ಛಿಸುವ ಹೆಣ್ಣನ್ನು ವಿವಾಹವಾದರೆ, ಆಕೆ ನಿಮ್ಮ ಸುಖ ದುಃಖಗಳಲ್ಲಿ ಭಾಗಿಯಾಗಬಹುದು. ಹಾಗಾಗಿ ಮದುವೆಗೂ ಮುನ್ನ ಆಕೆ ಕೆಲಸಕ್ಕೆ ಹೋಗಲು ಇಚ್ಛಿಸುತ್ತಾಳೋ, ಇಲ್ಲವೋ ಅನ್ನೋದರ ಬಗ್ಗೆ ಖಂಡಿತ ಕೇಳಿ.

ಮೂರನೇಯದಾಗಿ ಊಟದ ಬಗ್ಗೆ ವಿಚಾರಿಸುವುದು ಕೂಡಾ ತುಂಬ ಮುಖ್ಯ. ಇದು ನಿಮಗೆ ತಮಾಷೆ ಎನ್ನಿಸಬಹುದು. ಆದ್ರೆ ಎಷ್ಟೋ ಮದುವೆಗಳು ಈ ವಿಷಯಕ್ಕೆ ಮುರಿದು ಬಿದ್ದಿದೆ ಅಂದ್ರೆ ನೀವು ನಂಬಲೇಬೇಕು. ಹಾಗಾಗಿ ಮದುವೆಗೂ ಮುನ್ನ ನೀವು ಮಾಂಸಾಹಾರಿಯೋ, ಶಾಖಾಹಾರಿಯೋ ಅನ್ನೋ ಪ್ರಶ್ನೆಯನ್ನ ಖಂಡಿತವಾಗಿಯೂ ಕೇಳಿ. ಯಾಕಂದ್ರೆ ನೀವು ಶಾಖಾಹಾರಿಯಾಗಿದ್ದು, ಆಕೆ ಮಾಂಸಾಹಾರಿಯಾಗಿದ್ದರೆ, ನಿಮ್ಮ ಕುಟುಂಬದಲ್ಲಿ ಆಕೆ ಹೊಂದಿಕೊಂಡಿರಲು ಸಾಧ್ಯವಾ ಅನ್ನೋದನ್ನೂ ನೀವು ತಿಳಿದುಕೊಂಡಿರಬೇಕು.

ಅಲ್ಲದೇ, ನೀವು ಮಾಂಸಾಹಾರಿಯಾಗಿದ್ದು, ಆಕೆ ಶಾಖಾಹಾರಿಯಾಗಿದ್ದರೆ, ಆಕೆಗೆ ನಿಮ್ಮ ಜೊತೆ ಜೀವನ ನಡೆಸಲು ಕಷ್ಟವಾಗಬಹುದು. ಅದರ ಬಗ್ಗೆ ಅರಿತುಕೊಳ್ಳಬೇಕು. ಹೀಗೆ ಇನ್ನೂ ಕೆಲವು ಪ್ರಶ್ನೆಗಳ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ .

- Advertisement -

Latest Posts

Don't Miss