ಹಾಸನ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತ ಹಿನ್ನಲೆ ನಗರದ ಹೇಮಾವತಿ ಪ್ರತಿಮೆ ಬಳಿ ಬುಧವಾರ ಸಂಜೆ ಎಎಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಮುಖಂಡ ಅಗಿಲೆ ಯೋಗೇಶ್ ಮಾತನಾಡಿ, ದೇಶದ ಸಮಸ್ಯೆಗಳಿಗೆ ಪೊರಕೆಯೇ ಪರಿಹಾರವಾಗಿದೆ. ಇದನ್ನು ಅರಿತ ದೆಹಲಿಯ ಜನತೆ ಎಎಪಿ ಪಕ್ಷಕ್ಕೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ನೀಡಿದ್ದಾರೆ. ಎಎಪಿ ನಂಬಿಕಸ್ತ ಪಕ್ಷವಾಗಿದ್ದು, ಇದೇ ಕಾರಣದಿಂದ ಬಿಜೆಪಿ ಕೈನಲ್ಲಿದ್ದ ಅಧಿಕಾರವನ್ನು ನಮ್ಮ ಪಕ್ಷಕ್ಕೆ ನೀಡಿದ್ದಾರೆ. ಪರ್ಯಾಯ ರಾಜಕಾರಣಕ್ಕೆ ಎಎಪಿ ಅಗತ್ಯವಾಗಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕ ಹಾಗೂ ಹಾಸನದಲ್ಲೂ ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿದರು. ಈ ವೇಳೆ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಜನಪ್ರಿಯ ನಟಿ ಕೀರ್ತಿ ಸುರೇಶ್ ಗೆ ಕಾಸ್ಟಿಂಗ್ ಕೌಚ್ ಕಾಟ ? ನಟಿ ಹೇಳಿದ್ದೇನು?




