Sunday, December 22, 2024

Latest Posts

Central budget : 2022-23 ನೇ ಸಾಲಿನ ಕೇಂದ್ರ ಬಜೆಟ್ ನ ಪ್ರಮುಖ ಅಂಶಗಳು..!

- Advertisement -

ನವದೆಹಲಿ : ದೇಶದ 2022- 23 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Union Finance Minister Nirmala Sitharaman) ಇಂದು ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(PM MODI) ಅವರ ನೇತೃತ್ವದ ಕೇಂದ್ರ ಸರ್ಕಾರದ 10ನೇ  ಬಜೆಟ್ ಇದಾಗಿದ್ದು, ನಿರ್ಮಲಾ ಸೀತಾರಾಮನ್  ಮಂಡಿಸಿದ ನಾಲ್ಕನೇ ಬಜೆಟ್ ಇದಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಜೆಟ್ ಅಧಿವೇಶನ ಪ್ರಾರಂಭಿಸಲಾಯಿತು. ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವರ್ಷದಂತೆ ಈ ವರ್ಷವೂ  ಕಾಗದರಹಿತ ರೂಪದಲ್ಲಿ 2022-23 ನೇ ಸಾಲಿನ ಬಜೆಟ್ ಮಂಡನೆ ಮಾಡಿದರು.

ಕೇಂದ್ರ ಬಜೆಟ್ ನ ಪ್ರಮುಖ ಅಂಶಗಳು.

ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

2022-23 ರಿಂದ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿಕೊಂಡು RBI Digital Rupee ಪರಿಚಯಿಸಲು ಪ್ರಸ್ತಾಪ.

2022-23 ರೊಳಗೆ 5G ಮೊಬೈಲ್ ಸೇವೆಗಳು ಬಿಡುಗಡೆ.

2022-23ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 80 ಲಕ್ಷ ಮನೆಗಳ ನಿರ್ಮಾಣ.

ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು.  

ಬಂಡವಾಳ ಸರಕುಗಳ ಆಮದಿನ ಮೇಲಿನ ರಿಯಾಯಿತಿ ಸುಂಕವನ್ನು ಹಂತಹಂತವಾಗಿ ರದ್ದುಗೊಳಿಸುವುದು.

ಸ್ಟಾರ್ಟ್-ಅಪ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಮಾರ್ಚ್ 2023 ರವರೆಗೆ ವಿಸ್ತರಣೆ.

ಕೃಷಿ ಅರಣ್ಯ ಬೆಳೆಸಲು ರೈತರಿಗೆ ಆರ್ಥಿಕ ನೆರವು ನೀಡಲಾಗುವುದು.

ದೇಶೀಯ ನಿಯಂತ್ರಣದಿಂದ ಮುಕ್ತವಾದ GIFT IFSC ನಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯಕ್ಕೆ ಅನುಮತಿ.

- Advertisement -

Latest Posts

Don't Miss