Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿಗೆ ಐರನ್ ಲೆಗ್ ಎಂದ ವಿಚಾರಕ್ಕೆ ಸಂಬಂಧಿಸಿದಂತೆ ಜೋಶಿ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ 2014, 2018, 2019 ಚುನಾವಣೆಗಳಲ್ಲಿ ಮೋದಿಯವರ ವಿರುದ್ದ ಅಪ್ರಬುದ್ದ ಭಾಷೆ ಬಳಸಿದ್ರು. ನರ ರಾಕ್ಷಸ ಎಂದಿದ್ರು, ಜನ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ 9 ವರ್ಷದ ನಂತರ ಅಧಿಕಾರಕ್ಕೆ ಬಂದಿದ್ದೀರಿ. ಸಿದ್ದರಾಮಯ್ಯ, ತಂಗಡಗಿ ಮೋದಿ ಅವರ ವಿರುದ್ದ ಮಾತಾಡೋ ಮುಂಚೆ ನಿಮ್ಮ ಸ್ಥಿತಿ ಏನಿದೆ ನೋಡಿಕೊಳ್ಳಿ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಪ್ರೀಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಿಡಿದುಕೊಂಡು. ನೀವು ಉತ್ತರ ಪ್ರದೇಶದಲ್ಲಿ ಜಿರೋ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಿ. ಒಂದು ಕಾಲದಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಇತ್ತು. ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಸ್ಥಿತಿಗೆ ಬಂದು ತಲುಪಿದ್ದೀರಿ. ಅಹಂಕಾರ ಒಳ್ಳೇದಲ್ಲಾ. ಜಗತ್ತು ಮೋದಿ ಅವರನ್ನು ಸ್ವೀಕಾರ ಮಾಡಿದೆ. ಅಪ್ರಬುದ್ದ ಭಾಷೆ ಬಳಸೋದಕ್ಕೆ ಜನ ಉತ್ತರ ಕೊಟ್ಟಿದ್ದಾರೆ. ಮೋದಿ ಕೈ ಬೀಸಿದ ಕಡೆ ನಾವು ಅಧಿಕಾರಕ್ಕೆ ಬಂದಿದ್ದೀವಿ. ಕರ್ನಾಟಕದಲ್ಲಿ ಮಾತ್ರ ನೀವು ಅಧಿಕಾರಕ್ಕೆ ಬಂದಿದ್ದೀರಿ. ಲೋಕಸಭೆಯಲ್ಲಿ ನೀವು ಅಧಿಕೃತ ವಿರೋಧ ಪಕ್ಷ ಕೂಡ ಅಲ್ಲ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಇರಬೇಕು. ಈ ತರಹ ಸಾರ್ವಜನಿಕ ಯೋಗ್ಯವಲ್ಲದ ಭಾಷೆ ಬಳಸಬಾರದು ಎಂದು ಹೇಳಿದರು.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ನೆಹರು ಕಾಲದಿಂದ ಇದು ಆರಂಭವಾಗಿದೆ. ಭ್ರಷ್ಟಾಚಾರದಿಂದ ತುಂಬಿ ತುಳುಕಿದ್ದು ಕಾಂಗ್ರೆಸ್ ಪಾರ್ಟಿ. ಕರ್ನಾಟಕ ATM ಮಾಡಿಕೊಂಡಿರೋದಕ್ಕೆ ಸಂಕೇತ ಸಿಗುತ್ತಿದೆ. ಟ್ರಾನ್ಸಫರ್‌ಗಳನ್ನು ಮಾಡುತ್ತಿದ್ದಾರೆ, ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಕಮೀಷನ್‌ಗಾಗಿ ಕೆಲಸ ನಿಲ್ಲಿಸಿದ್ದಾರೆ. ಬಿಜೆಪಿ ರಾಜ್ಯ ಘಟಕ ಗಮನಿಸ್ತಿದೆ. ಸೂಕ್ತ ಸಮಯದಲ್ಲಿ ಹೋರಾಟ ಮಾಡ್ತೀವಿ. ಅಡ್ಜಸ್ಟಮೆಂಟ್ ರಾಜಕಾರಣದ ಬಗ್ಗೆ ಪ್ರತಾಪ್ ಸಿಂಹ ಮಾತಾಡಿದ್ದಾರೆ. ನಾನು ಅವರಿಗೆ ಬಹಿರಂಗವಾಗಿ ಮಾತಾಡದಂತೆ ಹೇಳಿದ್ದೇನೆ. ರಾಜ್ಯಧ್ಯಕ್ಷ, ರಾಷ್ಟ್ರಾಧ್ಯಕ್ಷರ ಜೊತೆ ಮಾತಾಡೋಕೆ ಹೇಳಿದ್ದೇನೆ. ಅದಕ್ಕೆ ಪ್ರತಾಪ್ ಸಿಂಹ ಒಪ್ಪಿಕೊಂಡಿದ್ದಾರೆ ಎಂದು ಜೋಶಿ ಹೇಳಿದರು.
‘ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ’
‘ಬಿಜೆಪಿಯಲ್ಲಿ ಶಿಸ್ತು ಹೋಗಿದೆ. ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ’
ನೀವೂ ಅಕ್ಕಿ ಖರೀದಿಸಿ ಜನರಿಗೆ ವಿತರಿಸಿ, ನಮ್ಮದೇನು ಅಭ್ಯಂತರವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ