ನಮಸ್ಕಾರ ಸ್ನೇಹಿತರೇ ದೇವರ ಪೂಜೆಯಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಆಗುವಂತಹ ಕೆಲವು ಘಟನೆಗಳು ನಮಗೆ ಸಂಕೇತ ಸೂಚನೆಗಳನ್ನು ನೀಡುತ್ತದೆ, ಪೂಜೆಯಲ್ಲಿ ಯಾವ ರೀತಿಯ ಘಟನೆಗಳು ನಡೆದವು ಎಂಬ ಆಧಾರದ ಮೇಲೆ ಅದು ಶುಭ ಸೂಚನೆಯ ಅಥವಾ ಅಶುಭ ಸೂಚನೆಯೋ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರು ದೇವರ ಪೂಜೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಸಾಕಷ್ಟು ತಲೆಯನ್ನು ಕೆಡಿಸಿಕೊಳ್ಳುತ್ತಾರೆ. ಇದು ಯಾಕೆ ಈಗಾಯ್ತು ಇದರ ಅರ್ಥವೇನು ಎಂದು, ಹಾಗಾದರೆ ಪೂಜೆ ಸಂದರ್ಭದಲ್ಲಿ ನಡೆಯುವಂತಹ ಘಟನೆಗಳು ಯಾವ ರೀತಿಯ ಶುಭ ಸೂಚನೆಯನ್ನು ನೀಡುತ್ತವೆ. ಇದರ ಹಿಂದಿನ ಅರ್ಥ ಏನು ಎಂದು ನೋಡೋಣ. ಸಾಮಾನ್ಯವಾಗಿ ದೇವರ ಪೂಜೆಯನ್ನು ಮಾಡುವಾಗ ಪ್ರತಿಯೊಬ್ಬರೂ ದೇವರ ಮೇಲೆ ಹೆಚ್ಚು ಗಮನವನ್ನು ಕೊಡುತ್ತಾರೆ, ಪೂಜೆ ಸಮಯದಲ್ಲಿ ಹಾಗುವಂತಹ ಕೆಲವು ಘಟನೆಗಳು ಭವಿಷ್ಯದ ಸೂಚನೆಯನ್ನು ನೀಡುತ್ತದೆ ಎನ್ನುವುದು ಸಾಕಷ್ಟು ನಂಬಿಕೆಗಳು ಅದು ನಿಜ ಕೂಡ ಹೌದು ಶಾಸ್ತ್ರಗಳ ಪ್ರಕಾರ ಕೂಡ ಇದು ಸತ್ಯ. ಮೊದಲನೆಯದಾಗಿ ದೇವರ ಪೂಜೆಯನ್ನು ಮಾಡುವಾಗ ದೇವರಿಗೆ ಅರ್ಪಿಸಿದ ಹಾಗೂ ಏನಾದರೂ ಬಲಗಡೆಯಿಂದ ಕೆಳಗೆ ಬಿದ್ದರೆ ಅದು ನಿಮಗೆ ಪ್ರಸಾದ ರೀತಿಯಲ್ಲಿ ಶುಭ ಸೂಚನೆಯನ್ನು ನೀಡುತ್ತದೆ, ನೀವು ಯಾವ ಕೋರಿಕೆಯನ್ನು ಸಲ್ಲಿಸುತ್ತಿರುವ ಕೋರಿಕೆ ಈಡೇರುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ.
ಯಾವುದಾದರೂ ಕೆಲಸಕ್ಕೆ ಹೋಗಬೇಕಾದರೆ, ಪೂಜೆಯನ್ನು ಮಾಡುವಾಗ ಈ ರೀತಿಯ ಹೋಗುವುದಿದ್ದರೆ, ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ದೇವರ ಆಶೀರ್ವಾದ ಪೂರ್ಣಗೊಳ್ಳುತ್ತದೆ ಎಂಬ ಸೂಚನೆ ಇದಾಗಿರುತ್ತದೆ, ಅದೇ ಒಂದು ವೇಳೆ ಏನಾದರೂ ಎಡಗಡೆಯಿಂದ ಹೋಗುವುದಿದ್ದರೆ ನಿಮ್ಮ ಇಷ್ಟಾರ್ಥಗಳು ಅಥವಾ ಕೋರಿಕೆಗಳು ನಡೆಯದೆ ಇರಬಹುದು ಅಥವಾ ತಡವಾಗಬಹುದು, ಆದ್ದರಿಂದ ಆ ಕೆಲಸಗಳನ್ನು ಸ್ವಲ್ಪಮಟ್ಟಿಗೆ ನಿಲ್ಲಿಸುವುದು ಒಳ್ಳೆಯದು. ಇನ್ನು ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸುವಾಗ ತೆಂಗಿನಕಾಯಿಯನ್ನು ಒಡೆದಾಗ ಅದು ಮಧ್ಯದಲ್ಲಿ ಎರಡು ಭಾಗವಾಗದೆ ದುಟ್ಟಿಲ್ಲ ರೂಪದಲ್ಲಿ ಭಾಗವಾದರೆ ಆಗ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಯಾರಿಗಾದರೂ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ದೇವರ ಮುಂದೆ ಹಚ್ಚಿದ ದೀಪವು ಪ್ರಕಾಶಮಾನವಾಗಿ ಉರಿಯುತ್ತಿದ್ದರೆ ಅದರ ಅರ್ಥ ನಿಮ್ಮ ಮನೆಯಲ್ಲಿ ಶುಭ ಸುದ್ದಿಗಳು ಕೇಳುವಿರಿ, ಅಥವಾ ಯಾವುದಾದರೂ ಶುಭಕಾರ್ಯಗಳು ನಡೆಯುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ, ಅಷ್ಟೇ ಅಲ್ಲದೆ ಮನೆಯಲ್ಲಿ ಏನಾದರೂ ಋಣಾತ್ಮಕ ಪರಿಣಾಮಗಳು ಇದ್ದರೆ ಮನೆಯಲ್ಲಿ ಕಷ್ಟಗಳು ಇದ್ದರೆ ಅದು ನಿವಾರಣೆಯಾಗಿ ಇನ್ನು ಮುಂದೆ ಮನೆಯಲ್ಲಿ ಅಭಿವೃದ್ಧಿ ಗಳು ಕಂಡುಬರುತ್ತವೆ ಎಂಬ ಸೂಚನೆಯನ್ನು ಕೂಡ ಇದು ನೀಡುತ್ತದೆ.
ಇನ್ನು ಮದುವೆ ಆಗದೆ ಇರುವವರಿಗೆ ಏನಾದರೂ ದೇವರ ಪೂಜೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಮ್ಮ ಮೇಲೆ ಅರಿಶಿನ ಅಥವಾ ಕುಂಕುಮ ಚೆಲ್ಲಿದರೆ ಶೀಘ್ರವಾಗಿ ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಈ ರೀತಿಯಾಗಿ ದೇವರ ಪೂಜೆಯನ್ನು ಮಾಡುವಾಗ ಈ ರೀತಿಯ ಘಟನೆಗಳು ನಡೆದರೆ ಅದು ನಿಮಗೆ ಶುಭದಾಯಕವಾಗಿರುತ್ತದೆ ಭವಿಷ್ಯದಲ್ಲಿ ನಿಮಗೆ ಶುಭಕಾರ್ಯಗಳು ಶುಭ ವಿಷಯಗಳು ಶುಭಫಲಗಳು ದೊರೆಯುತ್ತವೆ ಎನ್ನುವುದರ ಸಂಕೇತ ಇದಾಗಿರುತ್ತದೆ.