ಕರ್ನಾಟಕ ಟಿವಿ : ಉತ್ತರ ಕರ್ನಾಟಕ ಕಳೆದೊಂದು ವಾರದಿಂದ ನೀರಿನಲ್ಲಿ ಮುಳುಗಿದೆ.. ಮಹಾರಾಷ್ಟ್ರದಲ್ಲಿ ತೀವ್ರ ಮಳೆಯಿಂದಾಗಿ ಕೃಷ್ಣಾ ನದಿ ಉಗ್ರರೂಪದಲ್ಲಿ ಹರಿಯುತ್ತಿದೆ. ಇತ್ತ ಘಟಪ್ರಭಾ, ಮಲಪ್ರಭಾ ಕೂಡ ರುದ್ರ ನರ್ತನ ಮಾಡುತ್ತಿವೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದು ಸಾವಿರಾರು ಕೋಟಿ ಆಸ್ತಿಪಾಸ್ತಿ ನಷ್ಟವಾಗಿದ್ದು ನದಿ ಪಾತ್ರದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ..
ಉತ್ತರ ಕರ್ನಾಟಕದ ನೆರವಿಗೆ ಧಾವಿಸುವಂತೆ ಡಿ ಬಾಸ್ ಕರೆ
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತರ ಕರ್ನಾಟಕದ ಕಷ್ಟಕ್ಕೆ ಸ್ಪಂದಿಸುವಂತೆ ಕರೆ ಕೊಟ್ಟಿದ್ದಾರೆ.. “ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿರುತ್ತದೆ. ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಇದರ ನಿಟ್ಟಿನಲ್ಲಿ ಮಾಡಬೇಕಾಗಿ ವಿನಂತಿ ಅಂತ ದರ್ಶನ್ ಟ್ವೀಟ್ ಮಾಡಿದ್ದಾರೆ..
ಸದಾ ಜನರ ಕಷ್ಟಗಳಿಗೆ ಮಿಡಿಯುವ ಚಾಲೆಂಜಿಂಗ್ ಸ್ಟಾರ್ ಉತ್ತರಕರ್ನಾಟಕದ ಜನರ ಪರವಾಗಿ ನಿಂತಿದ್ದಾರೆ..