ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಇತರೆ ಸ್ಟಾರ್ ನಟರು ಅಭಿನಯಿಸಿರೋ ಕುರುಕ್ಷೇತ್ರ ಚಿತ್ರದ ಆಡಿಯೋ ಲಾಂಚ್ ಪಾಸ್ ಕುರಿತಾದ ವಿವಾದಕ್ಕೆ ದಚ್ಚು ತೆರೆ ಎಳೆದಿದ್ದಾರೆ.
ಜುಲೈ 7 ಕ್ಕೆ ಕುರುಕ್ಷೇತ್ರ ಚಿತ್ರದ ಆಡಿಯೋ ಲಾಂಚ್ ಆಗಲಿದ್ದು, ಈ ಕಾರ್ಯಕ್ರಮದ ಪಾಸ್ ಗಳಲ್ಲಿ ನಟ ದರ್ಶನ್ ಫೋಟೋ ಪ್ರಿಂಟ್ ಮಾಡಿಲ್ಲ ಅಂತ ದಚ್ಚು ಅಪಾರ ಅಭಿಮಾನಿಗಳ ಗರಂ ಆಗಿದ್ರು. ದುರ್ಯೋದನನ ಪಾತ್ರದಲ್ಲಿ ಕಾಣಿಸಿಕೊಂಡಿರೋ ನಟ ದರ್ಶನ್ ಈ ಚಿತ್ರದ ಒಂದೊಂದು ಫೋಟೋಗಳಲ್ಲೂ ಕೂಡ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ್ದಾರೆ. ಇಂಥಹ ಫ್ಯಾನ್ಸ್ ಗೆ ಆಡಿಯೋ ಲಾಂಚ್ ಕಾರ್ಯಕ್ರಮದ ಪಾಸ್ ಮೇಲೆ ದಚ್ಚು ಫೋಟೋ ಯಾಕೆ ಹಾಕಿಲ್ಲ ಅಂತ ಸಿಕ್ಕಾಪಟ್ಟೆ ಆಕ್ರೋಶಗೊಂಡು ನಿರ್ಮಾಪಕ ಮುನಿರತ್ನ ಮೇಲೆ ಕೆಂಡಕಾರಿದ್ರು. ಇದೀಗ ಚಾಲೆಂಜಿಂಗ್ ಸ್ಟಾರ್ ಈ ವಿವಾದಕ್ಕೆ ಫುಲ್ ಸ್ಟಾಪ್ ಹಾಕಿ ಅಂತ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಇದೀಗ ಟ್ವೀಟ್ ಮಾಡಿರೋ ಡಿ ಬಾಸ್, ಕುರುಕ್ಷೇತ್ರ ಬಹುತಾರಾಗಣದ ಸಿನಿಮಾ, ಎಲ್ಲರನ್ಮ ಸಮಾನವಾಗಿ ನೋಡ್ಬೇಕು ಅಂತ ಫೋಟೋಗಳನ್ನ ಹಾಕಿಲ್ಲ. ಚಿಕ್ಕ ವಿಷಯಗಳಿಗೆಲ್ಲ ಬೇಸರ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ.ಆರಾಮಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ ಅಂತ ಕಿವಿ ಮಾತು ಹೇಳೋ ಮೂಲಕ ಡಿ ಬಾಸ್ ಅಭಿಮಾನಿಗಳಿಗೆ ಸಮಾಧಾನ ಪಡಿಸಿದ್ದಾರೆ.
ದಾಖಲೆ ಬರೆದ ಡಿ-ಬಾಸ್ ಕುರುಕ್ಷೇತ್ರ….!! ಮಿಸ್ ಮಾಡದೇ ಈ ವಿಡಿಯೋ ನೋಡಿ