Tuesday, April 15, 2025

Latest Posts

ತಮ್ಮ ಮುಂದಿನ ಚಿತ್ರದ ಬಗ್ಗೆ ದಚ್ಚು ಹೇಳಿದ್ದೇನು..?

- Advertisement -

ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಕಾಡು ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ಬಗ್ಗೆ ಚಿತ್ರ ನಿರ್ದೇಶಿಸಲಿದ್ದಾರೆ. ಅದಕ್ಕೆ ದಚ್ಚು ಹೀರೋ ಆಗಿ ನಟಿಸಲಿದ್ದಾರೆಂಬ ಸುದ್ದಿಗೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ.

ಸದ್ಯ ರಾಜವೀರ ಮದಕರಿನಾಯಕ ಚಿತ್ರಕ್ಕಾಗಿ ತಯಾರಿ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಥಿಯೇಟರ್‌ಗಳು ತೆರೆದ ಮೇಲೆ ಶೂಟಿಂಗ್ ನಡೆಯುತ್ತದೆ ಎಂದಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ಕಾಡಿನ ಚಿತ್ರವೊಂದನ್ನ ನಿರ್ದೇಶನ ಮಾಡಲಾಗುತ್ತಿದ್ದು, ಅದರಲ್ಲಿ ದಚ್ಚು ನಟಿಸುತ್ತಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ದರ್ಶನ್, ಥಿಯೇಟರ್ ಓಪೆನ್ ಆಗಿ, ಶೂಟಿಂಗ್‌ಗೆ ಪರ್ಮಿಷನ್ ಸಿಕ್ಕ ಮೇಲೆ ರಾಜವೀರ ಮದಕರಿ ನಾಯಕ ಸಿನಿಮಾ ಶೂಟಿಂಗ್ ಮುಗಿಸಿ, ನಂತರ ಮೂರು ಚಿತ್ರದ ಶೂಟಿಂಗ್ ಮುಗಿದ ಮೇಲೆ ಹೊಸ ಚಿತ್ರದ ಪ್ರಾಜೆಕ್ಟ್ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

ಇನ್ನು ಶೂಟಿಂಗ್ ಶುರುವಾಗುವ ಬಗ್ಗೆ ಮಾತನಾಡಿದ ದರ್ಶನ್, ಮೊದಲು ಥಿಯೇಟರ್ ಓಪೆನ್ ಆಗಬೇಕು. ನಂತರ ರೆಡಿಯಾಗಿರುವ ಸಿನಿಮಾ ರಿಲೀಸ್ ಆಗಬೇಕು. ಆಗ ಮುಂದಿನ ಚಿತ್ರಕ್ಕೆ ಎಷ್ಟು ಬಂಡವಾಳ ಹೂಡಬೇಕೆಂದು ನಿರ್ಮಾಪಕರಿಗೆ ಅಂದಾಜು ಸಿಗುತ್ತದೆ ಎಂದಿದ್ದಾರೆ.

- Advertisement -

Latest Posts

Don't Miss