Chamarajanagara News: ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಲೆಯಲ್ಲೇ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬದನಗುಪ್ಪೆ ನಿವಾಸಿ ಶೃತಿ ಮತ್ತು ಲಿಂಗರಾಜು ದಂಪತಿ ಒಬ್ಬಳೇ ಮಗಳಾಗಿರುವ ತೇಜಸ್ವಿನಿ ಮೃತ ದುರ್ದೈವಿಯಾಗಿದ್ದಾಳೆ. ಎಂದಿನಂತೆ ಶಾಲೆಗೆ ತೆರಳಿದ್ದ ಈ ಮಗು, ಪಕ್ಕದ ಕ್ಲಾಸಿನಲ್ಲಿದ್ದ ಶಿಕ್ಷಕಿಗೆ ತನ್ನ ಹೋಮ್‌ವರ್ಕ್ ತೋರಿಸಲು ಹೋದಾಗ, ಗೋಡೆ ಹಿಡಿದು ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.
ಆದರೆ ಬಾಲಕಿ ಶಾಲೆಗೆ ಬರುವಾಗ ಆರಾಮವಾಗೇ ಇದ್ದಳು ಎನ್ನಲಾಗಿದೆ. ಆದರೆ ಹೃದಯಾಘಾತವಾಗಿ ಆಕೆ ಸಾವನ್ನಪ್ಪಿದ್ದಾಗಿ ವೈದ್ಯರು ಹೇಳಿದ್ದಾರೆ. ಇರುವ ಒಬ್ಬಳೇ ಮಗಳನ್ನು ಕಳೆದುಕೊಂಡಿರುವ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಪೋಷಕರು ಪೋಸ್ಟ್ ಮಾರ್ಟಮ್‌ಗೆ ಒಪ್ಪಲಿಲ್ಲ. ಹಾಗಾಗಿ ಮೃತದೇಹವನ್ನು ಹಾಗೆಯೇ ಪೋಷಕರಿಗೆ ಒಪ್ಪಿಸಲಾಗಿದೆ. ಇಷ್ಟು ಪುಟ್ಟ ಮಗುವಿಗೆ ಹಾರ್ಟ್ ಅಟ್ಯಾಕ್ ಆಗಿರುವುದು, ನಿಜಕ್ಕೂ ಬೆಚ್ಚಿಬೀಳಿಸುವ ವಿಷಯ.