Wednesday, September 11, 2024

Latest Posts

ಉತ್ತಮ ಸ್ನೇಹಿತನ ಲಕ್ಷಣಗಳಿವು: ನಿಮ್ಮ ಸ್ನೇಹಿತನಲ್ಲೂ ಈ ಲಕ್ಷಣಗಳಿದೆಯಾ ನೋಡಿ..

- Advertisement -

ಯಾರಾದರೂ ವಯಸ್ಸಿಗೆ ಬಂದ ಮೇಲೆ ಕೆಟ್ಟ ಗುಣಗಳನ್ನು ಕಲಿತರೆ, ಸಂಗತಿ ಸಂಗ ದೋಷ ಅಂತಾ ಹೇಳ್ತಾರೆ. ಅಂದ್ರೆ ಕೆಟ್ಟ ಸ್ನೇಹಿತರ ಸಂಗ ಮಾಡಿ ಕೆಟ್ಟ ಗುಣಗಳನ್ನು ಕಲಿತನೆಂದು ಅರ್ಥ. ಹಾಗಾಗಿ ನಾವು ಯಾರೊಂದಿಗಾದ್ರೂ ಸ್ನೇಹ ಮಾಡಿದ್ರೆ, ಅವರಲ್ಲಿರುವ ಕೆಲ ಗುಣಗಳನ್ನು ಗಮನಿಸಬೇಕು. ಚಾಣಕ್ಯರ ಪ್ರಕಾರ ಒಳ್ಳೆಯ ಸ್ನೇಹಿತನಿಗಿರಬೇಕಾದ ಗುಣಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಸ್ನೇಹಿತನೆಂದರೆ ಕಷ್ಟ ಕಾಲದಲ್ಲಿ ಸಹಾಯ ಮಾಡುವವನು. ತನ್ನ ಸ್ನೇಹಿತನಿಗೆ ದುಡ್ಡಿನ ಕಷ್ಟ, ಅಪಘಾತ ಸಂದರ್ಭ, ಆರೋಗ್ಯದ ತೊಂದರೆ ಇತ್ಯಾದಿ ಬಂದಿದ್ದರೆ, ಆ ಸಂದರ್ಭದಲ್ಲಿ ಕಾರಣ ಹೇಳಿ ದೂರ ಹೋಗದೇ, ಅವನೊಟ್ಟಿಗೆ ಇದ್ದು ಅವನಿಗೆ ಸಹಾಯ ಮಾಡುವವನೇ ನಿಜವಾದ ಸ್ನೇಹಿತ. ಅವಶ್ಯಕಾನುಸಾರವಾಗಿ ವ್ಯಕ್ತಿ ಸ್ನೇಹಿತನಿಗೆ ಹೆಗಲು ಕೊಡಬೇಕು ಅಂತಾರೆ ಚಾಣಕ್ಯರು.

ಉದಾ: ಅಪಘಾತವಾದಾಗ, ದುಡ್ಡಿನ ಅವಶ್ಯಕತೆ ಇರುತ್ತದೆ. ದುಡ್ಡಿದ್ದರಷ್ಟೇ ಚಿಕಿತ್ಸೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆಗ ಸ್ನೇಹಿತನಾದವನು ತನ್ನ ಕೈಲಾದಷ್ಟು ಹಣದ ವ್ಯವಸ್ಥೆ ಮಾಡಬೇಕು. ಸಂಬಂಧಿಕರಿಗೆ ಈ ಬಗ್ಗೆ ವಿಷಯ ತಿಳಿಸಬೇಕು. ಹೀಗೆ ಸಹಾಯ ಮಾಡು  ಗುಣವುಳ್ಳನನ್ನು ಸ್ನೇಹಿತನನ್ನಾಗಿ ಪಡೆಯಬೇಕು ಅಂತಾರೆ ಚಾಣಕ್ಯರು. ಆದ್ರೆ ಸಹಾಯ ಮಾಡಿದ ಸ್ನೇಹಿತನ ಋಣವನ್ನು ಎಂದಿಗೂ ಮರೆಯಬಾರದು ಅಂತಾನೂ ಹೇಳಿದ್ದಾರೆ.

ಇನ್ನು ನಿಮ್ಮ ಜೇಬಿಂದಲೇ ದುಡ್ಡು ತೆಗಿಸುವ, ಮಜಾ ಮಾಡುವ ಸ್ನೇಹಿತರು ನಿಮ್ಮ ಕಷ್ಟಕಾಲಕ್ಕೆ ಎಂದಿಗೂ ಸಹಾಯಕ್ಕೆ ಬರುವುದಿಲ್ಲ. ನಿಮ್ಮ ಒಳ್ಳೆಯತನವನ್ನು ಉಪಯೋಗಿಸಿ, ನಿಮ್ಮನ್ನು ಅಡ್ಡದಾರಿಗೆ ಕೊಂಡೊಯ್ಯಲು ಪ್ರಯತ್ನಿಸುವ ಸ್ನೇಹಿತರ ಗುಣವನ್ನು ನೀವು ಬೇಗ ಅಂದಾಜಿಸಲು ಕಲಿಯಬೇಕು. ಇಲ್ಲವಾದ್ದಲ್ಲಿ  ಸಂಗತಿ ಸಂಗದೋಷವಾಗುವುದು ಖಂಡಿತ.

- Advertisement -

Latest Posts

Don't Miss