Friday, February 21, 2025

Latest Posts

Chanakya Neeti: ಇಂಥ ಕೆಲಸ ಮಾಡುವಾಗ ಹಿಂಜರಿಕೆ ಬೇಡ ಅಂತಾರೆ ಚಾಣಕ್ಯರು

- Advertisement -

Chanakya Neeti : ಚಾಣಕ್ಯರು ತಮ್ಮ ಚಾಣಕ್ಯನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಮದುವೆಗೆ ವಧು ವರನನ್ನು ಹುಡುಕುವ ವಿಷಯದಿಂದ, ಹಣವನ್ನು ಹೇಗೆ ಬಳಸಬೇಕು, ಸ್ನೇಹ ಹೇಗೆ ಬೆಳಸಬೇಕು, ಸಂಬಂಧಿಕರ ಬಳಿ ಹೇಗೆ ವರ್ತಿಸಬೇಕು. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಕೆಲ ಕೆಲಸಗಳನ್ನು ಮಾಡುವಾಗ ಹಿಂಜರಿಯಬಾರದು ಎನ್ನುತ್ತಾರೆ. ಹಾಗಾದ್ರೆ ಅದ್ಯಾವ ಕೆಲಸ ಅಂತಾ ತಿಳಿಯೋಣ ಬನ್ನಿ.

ಊಟ ಮಾಡುವಾಗ ನಾಚಿಕೊಳ್ಳಬೇಡಿ. ಊಟ ಮಾಡುವಾಗ ಎಂದಿಗೂ ನಾಚಿಕೊಳ್ಳಬಾರದು ಅಂತಾರೆ ಚಾಣಕ್ಯರು. ಊಟ ಮಾಡುವ ವಿಷಯದಲ್ಲಿ ನಾಚಿಕೊಂಡರೆ, ಹೊಟ್ಟೆ ತುಂಬಲು ಸಾಧ್ಯವಿಲ್ಲ. ಮತ್ತು ಅರ್ಧ ಹೊಟ್ಟೆ ತುಂಬಿದ ಮನುಷ್ಯ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಹಾಗಾಗಿ ಊಟ ಮಾಡುವಾಗ ಯಾವುದೇ ಕಾರಣಕ್ಕೂ ನಾಚಿಕೊಳ್ಳಬೇಡಿ ಅಂತಾರೆ ಚಾಣಕ್ಯರು.

ಹಣದ ವಿಚಾರದಲ್ಲಿ ನಾಚಿಕೆಪಡಬೇಡಿ.  ಹಣದ ವಿಚಾರದಲ್ಲಿ ಎಂದಿಗೂ ನಾಚಿಕೊಳ್ಳಬೇಡಿ ಅಂತಾರೆ ಚಾಣಕ್ಯರು. ನೀವು ಯಾರಿಗಾದರೂ ಸಾಲ ನೀಡಿದ್ದಲ್ಲಿ, ನಿಮಗೂ ಹಣದ ಅವಶ್ಯಕತೆ ಹೆಚ್ಚಾಗಿದ್ದಲ್ಲಿ, ನೀವು ಸಾಲ ಕೊಟ್ಟವರ ಬಳಿ ಪುನಃ ದುಡ್ಡು ಕೇಳುವುದರಲ್ಲಿ ತಪ್ಪಿಲ್ಲ. ಈ ವೇಳೆ ನೀವು ಯಾವುದೇ ನಾಚಿಕೆ ಇಲ್ಲದೇ, ಕಷ್ಟವಿದೆ, ಸಾಲ ನೀಡಿದ ಹಣ ವಾಪಸ್ ಬೇಕಿತ್ತು ಎಂದು ಕೇಳಬಹುದು.

ಶಿಕ್ಷಣ ಪಡೆಯಲು ನಾಚಿಕೆ ಪಡಬೇಡಿ. ಕೆಲ ವಿದ್ಯಾರ್ಥಿಗಳು ಶಿಕ್ಷಕರ ಬಳಿ ಏನಾದರೂ ಡೌಟ್ ಕೇಳಲು ನಾಚಿಕೊಳ್ಳುತ್ತಾರೆ. ಹಿಂಜರಿಯುತ್ತಾರೆ. ಅಥವಾ ಹಿರಿಯರ ಬಳಿ ಯಾವುದಾದರೂ ವಿಷಯದ ಬಗ್ಗೆ ಕೇಳಲು ಹಿಂಜರಿಯುತ್ತಾರೆ. ಆದರೆ ಚಾಣಕ್ಯರ ಪ್ರಕಾರ, ಶಿಕ್ಷಣ ಪಡೆಯಲು, ಜ್ಞಾನ ಪಡೆಯಲು ಎಂದಿಗೂ ಹಿಂಜರಿಕೆ ಇರಬಾರದು.

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ನಾಚಿಕೊಳ್ಳಬೇಡಿ. ಎಂದಿಗೂ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ನಾಚಿಕೊಳ್ಳಬಾರದು. ಅಭಿಪ್ರಾಯ ಹಂಚಿಕೊಂಡಾಗ, ಮನಸ್ಸಿನಲ್ಲಿ ಇದ್ದ ವಿಷಯ ಹೇಳಿದಾಗಲೇ, ಗೊಂದಲಗಳು ಮುಗಿಯುತ್ತದೆ. ಜೀವನ ನೆಮ್ಮದಿಯುತವಾಗಿರುತ್ತದೆ.

- Advertisement -

Latest Posts

Don't Miss