Tuesday, November 5, 2024

Latest Posts

Chanakya Neeti: ನಿಮ್ಮಲ್ಲಿ ಈ ಗುಣಗಳಿದ್ದರೆ ನೀವು ಶತಮೂರ್ಖರು ಅಂತಾರೆ ಚಾಣಕ್ಯರು

- Advertisement -

Chanakya Neeti: ಚಾಣಕ್ಯ ನೀತಿಯ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ವಿವಾಹ, ಜೀವನ, ಶ್ರೀಮಂತಿಕೆ ಹೀಗೆ ಜೀವನ ಸಾಗಿಸಲು ಏನೇನು ಬೇಕೋ ಎಲ್ಲದರ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇನ್ನು ನಾವು ಶತಮೂರ್ಖರು ಎನ್ನುವುದಕ್ಕೆ, ನಮ್ಮಲ್ಲಿರುವ ಕೆಲ ಗುಣಗಳೇ ಸಾಕಂತೆ. ಹಾಾಗಾದ್ರೆ ಯಾವ ಗುಣಗಳಿದ್ದರೆ ನಾವು ಶತಮೂರ್ಖರು ಎನ್ನಿಸಿಕೊಳ್ಳುತ್ತೇನೆ ಎಂದು ತಿಳಿಯೋಣ ಬನ್ನಿ.

ಮೊದಲನೇಯ ಗುಣ ತನಗೆಲ್ಲ ಗೊತ್ತು ಎನ್ನುವ ವ್ಯಕ್ತಿ: ನೀವು ಯಾರಿಗಾದರೂ ಏನಾದರೂ ವಿವರಿಸಲು ಹೋದಾಗ, ಹಾಾ ಹಾ ನನಗೂ ಗೊತ್ತು ಎನ್ನುವ ವ್ಯಕ್ತಿ. ಅಥವಾ ನೀವು ಏನೂ ಕೇಳದಿದ್ದರೂ, ಎಲ್ಲವನ್ನೂ ಅಗತ್ಯಕ್ಕಿಂತ ಹೆಚ್ಚು ವಿವರಿಸುವ ವ್ಯಕ್ತಿ ಮೂರ್ಖನಂತೆ ಕಾಣುತ್ತಾನೆ. ಹಾಗಾಗಿ ನಾವು ಯಾರ ಬಳಿಯೂ ನನಗೆಲ್ಲ ಗೊತ್ತು ಎನ್ನುವ ರೀತಿ ದುರಹಂಕಾರವೂ ಪಡಬಾರದು. ಮಿತಿ ಮೀರಿ ವಿವರಿಸಲೂ ಹೋಗಬಾರದು.

ಎರಡನೇಯ ಗುಣ ಯೋಚಿಸದೇ ಮಾತನಾಡುವ ವ್ಯಕ್ತಿ: ಇನ್ನೊಬ್ಬರ ಮುಂದೆ ಏನಾದರೂ ಮಾತನಾಡುವ ಮುನ್ನ ಅವರಿಗೆ ಏನೆನ್ನಿಸುತ್ತದೆ..? ಅವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ..? ನನ್ನ ಮಾತಿನಿಂದ ಅವರಿಗೆ ಬೇಸರವಾಗಬಹುದಾ..? ನಾನು ಮಾತನಾಡಲು ಹೊರಟಿರುವುದು ಸರಿಯಾ ಎನ್ನುವ ಬಗ್ಗೆ ಯೋಚಿಸಬೇಕಾಗುತ್ತದೆ. ಆದರೆ ಏನನ್ನೂ ಯೋಚಿಸದೇ, ಹಿಂದೆ ಮುಂದೆ ನೋಡದೇ, ತಾನು ಮಾತನಾಡಿದ್ದೇ ಸರಿ ಎನ್ನುವ ವ್ಯಕ್ತಿ ಮೂರ್ಖನಾಗಿರುತ್ತಾನೆ. ಆತನ ಮಾತು ಮೂರ್ಖತೆಯಿಂದ ಕೂಡಿರುತ್ತದೆ.

ಮೂರನೇಯ ಗುಣ ಇನ್ನೊಬ್ಬರನ್ನು ಅವಮಾನಿಸುವ ವ್ಯಕ್ತಿ: ಮೂರ್ಖ ವ್ಯಕ್ತಿಯಲ್ಲಿರುವ ಮೂರನೇಯ ಗುಣ ಅಂದ್ರೆ, ಇನ್ನೊಬ್ಬರನ್ನನು ಅವಮಾನ ಮಾಡುವ ಗುಣ. ಏಕೆಂದರೆ, ತಾನು ಇನ್ನೊಬ್ಬರನ್ನು ಅವಮಾನಿಸಿದರೆ, ಇನ್ನೊಬ್ಬರ ಬಗ್ಗೆ ಕೊಂಕು ಮಾತನಾಡಿ, ಅವರ ಮನಸ್ಸು ನೋಯಿಸಿದರೆ, ತಾನು ಗೆದ್ದ ಹಾಗೇ ಎಂದು ಬೀಗುತ್ತಾನೆ. ಆದರೆ ಇನ್ನೊಬ್ಬರನ್ನು ಅವಮಾನಿಸಿ, ಮಜಾ ತೆಗೆದುಕೊಳ್ಳುವ ವ್ಯಕ್ತಿ ಸಮಾಜದ ಮುಂದೆ ಎಂದಿಗೂ ಬುದ್ಧಿವಂತ, ಗುಣವಂತ ಎಂದು ಎನ್ನಿಸಿಕೊಳ್ಳುವುದಿಲ್ಲ. ಅಂಥ ವ್ಯಕ್ತಿಗಳಿಂದ ಎಲ್ಲರೂ ದೂರವಿರಲು ಬಯಸುತ್ತಾರೆ.

- Advertisement -

Latest Posts

Don't Miss