Chanakya Neeti: ಹಿರಿಯರ ಪ್ರಕಾರ ಹೆಣ್ಣು ಮಕ್ಕಳಿಗೆ ಎರಡೆರಡು ಮನೆಂತೆ. ಮದುವೆಗೂ ಮುನ್ನ ತವರು ಮನೆ ಮದುವೆಯ ಬಳಿಕ ಗಂಡನ ಮನೆ. ಆದರೆ ಹೇಳಿಕೊಳ್ಳಲಷ್ಟೇ ಆಕೆಗೆ ಎರಡೆರಡು ಮನೆ. ತವರು ಮನೆಯಲ್ಲಿದ್ದಾಗ, ಮುಂದೆ ಆಕೆ ಬೇರೆ ಮನೆಗೆ ಹೋಗುವವಳು ಎನ್ನುವ ಮಾತು ಕೇಳುವ ಪರಿಸ್ಥಿತಿ ಒಂದೆಡೆಯಾದರೆ, ಮದುವೆ ಬಳಿಕ ಕೊಟ್ಟ ಹೆಣ್ಣು ಕುಲಕ್ಕೆ ಹೊರ ಎನ್ನುವ ಮಾತು. ಇನ್ನು ಗಂಡನ ಮನೆಯಲ್ಲಿ ಹೊರಗಿನಿಂದ ಬಂದವಳು ಎನ್ನುವ ಮಾತು ಕೇಳಿಸಿಕೊಳ್ಳುವುದು ಕಾಮನ್.
ಆದರೆ, ಹೆಣ್ಣಿಗೆ 3 ಗುಣಗಳು ಇದ್ದರೆ, ಆಕೆ ಎಲ್ಲಿ ಹೋದರೂ, ಅಲ್ಲಿ ಪ್ರಾಬಲ್ಯ ಸಾಧಿಸುತ್ತಾಳೆ. ಅಲ್ಲಿನವರ ಪ್ರೀತಿ ಪಡೆಯುತ್ತಾಳೆ. ಮತ್ತು ತವರು ಮನೆ ತೊರೆದರೂ, ಅಲ್ಲಿನವರ ಪ್ರೀತಿ, ಕಾಳಜಿಗೆ ಸದಾ ಪಾತ್ರಳಾಗಿರುತ್ತಾಳೆ ಅಂತಾರೆ ಚಾಣಕ್ಯರು. ಹಾಗಾದ್ರೆ ಚಾಣಕ್ಯರ ಪ್ರಕಾರ, ಹೆಣ್ಣಿಗೆ ಇರಬೇಕಾದ ಮೂರು ವಿಶೇಷ ಗುಣಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಗುಣ ತಾಳ್ಮೆ: ಪ್ರತೀ ಹೆಣ್ಣು ಮಕ್ಕಳಿಗೂ ತಾಳ್ಮೆ ಎನ್ನುವುದಿರಬೇಕು. ಯಾವ ಹೆಣ್ಣು ಮಕ್ಕಳಿಗೆ ತಾಳ್ಮೆ ಇರುತ್ತದೆಯೋ, ಅಂಥ ಹೆಣ್ಣು ಮಕ್ಕಳು, ಪತಿಯ ಜೊತೆ ಚೆನ್ನಾಗಿ ಸಂಸಾರ ಮಾಡಿಕೊಂಡಿರುತ್ತಾರೆ. ಪತಿಯ ಮನೆಯವರ ಪ್ರೀತಿ, ಕಾಳಜಿಗೆ ಪಾತ್ರರಾಗುತ್ತಾರೆ. ಇನ್ನು ಯಾರಿಗೆ ತಾಳ್ಮೆ ಇರುವುದಿಲ್ಲವೋ, ಅಂಥ ಹೆಣ್ಣು ಮಕ್ಕಳು ತವರು ಮನೆ, ಪತಿಯ ಮನೆ ಅಥವಾ ಯಾವ ಜಾಗದಲ್ಲಿಯೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಅಂಥ ಹೆಣ್ಣು ಮಕ್ಕಳು ಮನೆ ಮಂದಿಯ ನೆಮ್ಮದಿ ಹಾಳು ಮಾಡುತ್ತಾರೆ.
ಎರಡನೇಯ ಗುಣ: ಹಿರಿಯರನ್ನು ಕಾಳಜಿಯಿಂದ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಗುಣ ಹೊಂದಿರಬೇಕು. ಮದುವೆಯಾದ ತಕ್ಷಣದಿಂದಲೇ, ಹೆಣ್ಣು ಮಕ್ಕಳು ಮನೆ ಜವಾಬ್ದಾರಿ ನಿರ್ವಹಿಸುವಷ್ಟು ಅರ್ಹರಿರುವುದಿಲ್ಲ. ಅವರಿಗೆ ಕೆಲ ಸಮಯ ಬೇಕಾಗುತ್ತದೆ. ಒಂದು ಮಗು ಹೆತ್ತ ಬಳಿಕ ಆಕೆ ಜವಾಬ್ದಾರಿ ನಿಭಾಯಿಸಲು ಕಲಿಯುತ್ತಾಳೆ.
ಆದರೆ ಮಗುವಾಗಿ, ಆ ಮಗುವಿಗೆ ವಿದ್ಯಾಭ್ಯಾಸ ಕಲಿಯುವ ಸಮಯ ಬಂದರೂ ಆಕೆ ಮನೆ ಜವಾಬ್ದಾರಿ ನಿಭಾಯಿಸಲು, ಮಕ್ಕಳನ್ನು ಪ್ರೀತಿಯಿಂದ, ಹಿರಿಯರನ್ನು ಗೌರವದಿಂದ, ಪತಿಯನ್ನು ಪ್ರೀತಿಯಿಂದ ನೋಡಿಕೊಳ್ಳಲು ವಿಫಲವಾಗಿದ್ದಲ್ಲಿ, ವೈವಾಹಿಕ ಜೀವನ ವ್ಯರ್ಥ ಎನ್ನುತ್ತಾರೆ ಚಾಣಕ್ಯರು. ಆದರೆ ಆ ಮಹಿಳೆ ಎಲ್ಲ ಜವಾಬ್ದಾರಿ ನಿಭಾಯಿಸಲು ಮನೆ ಜನ ಕೂಡ ಸಾಥ್ ನೀಡಬೇಕು ಅನ್ನೋದು ಅಷ್ಟೇ ಸತ್ಯ. ಆಕೆಯೊಂದಿಗೆ ಕೆಲಸ ಮಾಡಲಾಗದಿದ್ದರೂ, ತಾಳ್ಮೆಯಿಂದ ಇರಬೇಕು. ಪ್ರೀತಿಯಿಂದ ಆಕೆಯನ್ನು ನೋಡಿಕೊಳ್ಳಬೇಕು.
ಮೂರನೇಯ ಗುಣ: ಪರಪುರುಷನ ಕಡೆ ಆಕರ್ಷಿತಳಾಗದೇ, ಪತಿಯೊಂದಿಗೆ ಸಂಸಾರ ನಡೆಸಿಕೊಂಡು ಹೋಗಬೇಕು. ಪತಿಗೆ ಪತಿಯ ಮನೆಯವರಿಗೆ ಎಂಥ ಕಷ್ಟ ಬಂದರೂ, ಅದಕ್ಕೆ ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕು. ಸುಖದಲ್ಲಿ ಭಾಗಿಯಾಗುವ ರೀತಿ, ಕಷ್ಟದಲ್ಲೂ ಭಾಗಿಯಾಗಬೇಕು. ಈ ಗುಣಗಳಿರುವ ಹೆಣ್ಣು ವಿವಾಹವಾದರೆ, ಅಂಥ ವೈವಾಹಿಕ ಜೀವನ ಸುಂದರವಾಗಿರುತ್ತದೆ.