Friday, December 20, 2024

Latest Posts

Chanakya Neeti: ಮದುವೆಗೆ ವಧು ಹುಡುಕುವಾಗ ಈ ವಿಷಯ ಗಮನದಲ್ಲಿ ಇಡಬೇಕಂತೆ

- Advertisement -

Chanakya Neeti: ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಸಾಮಾನ್ಯ ವಿಷಯವಲ್ಲ. ಒಮ್ಮೆ ನಾವು ನಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿದ ಬಳಿಕ, ಜೀವನಪೂರ್ತಿ ಅವರೊಂದಿಗೆ ಸಂಸಾರ ಮಾಡಬೇಕು. ಹಾಗಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗಲೇ ನಾವು ಎಚ್ಚೆತ್ತುಕೊಂಡು ಸರಿಯಾದ ಆಯ್ಕೆ ಮಾಡಬೇಕು ಎಂದಿದ್ದಾರೆ ಚಾಣಕ್ಯರು. ಆ ಬಗ್ಗೆ ತಿಳಿಯೋಣ ಬನ್ನಿ.

ಹಣದ ಆಸೆ ಇದೆಯಾ, ಇಲ್ಲವಾ: ಚಾಣಕ್ಯರು ಬರೀ ಹೆಣ್ಣಿನ ಸೌಂದರ್ಯ ನೋಡಿ, ಬಾಳ ಸಂಗಾತಿಯನ್ನು ಆಯ್ಕೆ ಮಾಡಬೇಡಿ ಎಂದಿದ್ದಾರೆ ಚಾಣಕ್ಯರು. ನೀವು ಆಯ್ಕೆ ಮಾಡಿಕೊಳ್ಳುವ ಹೆಣ್ಣಿಗೆ ಅಥವಾ ಹೆಣ್ಣಿನ ಮನೆಯವರಿಗೆ ಹಣದ ಆಸೆ ಇದೆಯಾ, ಇಲ್ಲವಾ..? ಅವರು ನಿಮಗೆ ನಿಮ್ಮ ಆಸ್ತಿ ಅಂತಸ್ತಿನ ಬಗ್ಗೆ ಪ್ರಶ್ನೆ ಮಾಡಿದರಾ..? ಇಲ್ಲವಾ..? ಅನ್ನೋದನ್ನು ಅವರ ಮಾತಿನ ಮೂಲಕವೇ ಅರಿತುಕೊಳ್ಳಬೇಕು.

ಅಪ್ಪ ಅಮ್ಮ ಹುಡುಗ ಆಸ್ತಿ ಅಂತಸ್ತು ಕಂಡು ವಧುವನ್ನು ಕೊಡುವುದು ಸಾಮಾನ್ಯ ವಿಷಯ. ಏಕೆಂದರೆ, ಮಗಳು ಭವಿಷ್ಯದಲ್ಲಿ ಕಷ್ಟ ಪಡದೇ ಇರಲಿ ಎಂದು. ಆದರೆ ಪತಿಯನ್ನು ಪ್ರೀತಿಸುವುದಕ್ಕಿಂತ, ಆತನ ಆಸ್ತಿಯನ್ನೇ ಪ್ರೀತಿಸುವ ಹೆಣ್ಣು ಎಂದಿಗೂ ಚೆನ್ನಾಗಿ ಸಂಸಾರ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಅತಿಯಾಗಿ ಆಸ್ತಿ ಹಣದ ಬಗ್ಗೆ ಕೇಳುವ ವಧುವನ್ನು ಆಯ್ಕೆ ಮಾಡದಿರುವುದು ಉತ್ತಮ ಅಂತಾರೆ ಚಾಣಕ್ಯರು.

ಮೋಸ ಮಾಡುವ ಬುದ್ಧಿ ಇದೆಯಾ: ಕೆಲವರಿಗೆ ಮೋಸ ಮಾಡುವ ಬುದ್ಧಿ ಇರುತ್ತದೆ. ಅವರ ಮಾತು, ನಡತೆಯಿಂದ ನೀವು ಅವರು ಮೋಸ ಮಾಡುತ್ತಿದ್ದಾರಾ, ಇಲ್ಲವಾ ಅನ್ನೋದನ್ನು ಕಂಡು ಹಿಡಿಯಬಹುದು. ಇದನ್ನು ಮದುವೆ ಮುನ್ನವೇ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ, ಬೇರೆಯವರು ಮೋಸ ಮಾಡಿದಾಗ ಅದನ್ನು ತಡೆದುಕೊಳ್ಳಬಹುದು. ಆದರೆ ನಮ್ಮವರೇ ನಮಗೆ ಮೋಸ ಮಾಡಿದಾಗ, ಅವರಿಂದ ಮಾನಸಿಕ ನೆಮ್ಮದಿಯೇ ಹಾಳಾಗುತ್ತದೆ. ಹಾಗಾಗಿ ವಧು ಹುಡುಕುವ ಮುನ್ನ ಅವರ ಸ್ವಭಾವದ ಬಗ್ಗೆ ತಿಳಿದುಕೊಳ್ಳಿ ಅಂತಾರೆ ಚಾಣಕ್ಯರು. ಇದು ಹೆಣ್ಣು ಮಕ್ಕಳು ವರನನ್ನು ಹುಡುಕುವಾಗಲೂ ಅನ್ವಯವಾಗುತ್ತದೆ.

- Advertisement -

Latest Posts

Don't Miss