Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ನಾವು ಒಬ್ಬರ ಮನೆಗೆ ಅತಿಥಿಯಾಗಿ ಹೋದಾಗ, ಹೇಗಿರಬೇಕು..? ಯಾವ ರೀತಿ ನಡೆದುಕೊಳ್ಳಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ನಾವು ಇನ್ನೊಬ್ಬರ ಮನೆಗೆ ಅತಿಥಿಯಾಗಿ ಹೋದಾಗ ಯಾವ ರೀತಿಯ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.
ಮೊದಲನೇಯದಾಗಿ ಆಹ್ವಾನ ನೀಡದೇ ನೀವು ಯಾವ ಸಂಬಂಧಿಕರ ಮನೆಗಾಗಲಿ, ಸ್ನೇಹಿತರ ಮನೆಗಾಗಲಿ ಹೋಗಬಾರದು. ನೀವು ಯಾರ ಮನೆಗಾದರೂ ಹೋಗಬೇಕು ಎಂದಿದ್ದರೆ, ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಬೇಕು ಎಂದರೆ, ನಿಮ್ಮನ್ನು ಆಹ್ವಾನಿಸದೇ, ನೀವು ಹೋಗಬಾರದು.
ಎರಡನೇಯದಾಗಿ ಹೋದ ಮನೆಯಲ್ಲಿ ಹೆಚ್ಚು ದಿನ ಇರಬೇಡಿ. ನೀವು ಯಾವ ಸಂಬಂಧಿಕರ ಮನೆಗೆ ಹೋದರೂ 1 ಅಥವಾ 2 ದಿನ, ಅದಕ್ಕಿಂತ ಹೆಚ್ಚು ದಿನ ಇರಬೇಡಿ. ರಕ್ತ ಸಂಬಂಧಿಕರಾದರೂ ಈಗಿನ ಕಾಲದಲ್ಲಿ 1 ಕ್ಕಿಂತ ಹೆಚ್ಚು ದಿನ ಇದ್ದರೆ, ಕಿರಿಕಿರಿಯುಂಟಾಗುತ್ತದೆ. ಹಾಗಾಗಿ ನಿಮ್ಮಿಂದ ಇತರರಿಗೆ ಕಿರಿಕಿರಿಯುಂಟಾಗಬಾರದು ಅಂದ್ರೆ, ನೀವು ಹೋದ ಮನೆಯಲ್ಲಿ ಹೆಚ್ಚು ದಿನ ಉಳಿಯಕೂಡದು.
ಮೂರನೇಯದಾಗಿ ಕಾರಣವಿಲ್ಲದೇ ಯಾರ ಮನೆಗೂ ಹೋಗಬಾರದು. ನೀವು ಯಾರ ಮನೆಗಾದರೂ ಹೋಗುವುದಿದ್ದರೆ, ಅದಕ್ಕೊಂದು ಕಾರಣವಿರಬೇಕು. ಸಾಮಾನ್ಯವಾಗಿ ಸಂಬಂಧಿಕರನ್ನು ನೋಡಿ, ಮಾತನಾಡಿ ಹಲವು ಸಮಯವಾಗಿದ್ದರೆ, ಅಂಥ ಸಮಯದಲ್ಲಿ ನೋಡಿ, ಮಾತನಾಡಿ, ಕುಶಲೋಪರಿ ವಿಚಾರಿಸಲು ಹೋಗಲಾಗುತ್ತದೆ. ಅದನ್ನು ಬಿಟ್ಟು, ಕಾರಣವಿಲ್ಲದೇ, ಪದೇ ಪದೇ ಸಂಬಂಧಿಕರ ಮನೆಗೆ ಹೋಗುವುದು ಸೂಕ್ತವಲ್ಲ.
ನಾಲ್ಕನೇಯದಾಗಿ ಯಾರ ಮನೆಗೆ ಹೋಗುತ್ತೀರೋ, ಆ ಮನೆಯವರ ಬಗ್ಗೆ, ಅವರ ಆಸ್ತಿ ಅಂತಸ್ತಿನ ಬಗ್ಗೆ ಹೆಚ್ಚು ಕೇಳಬೇಡಿ. ನಾವು ಯಾರ ಮನೆಗೆ ಅತಿಥಿಯಾಗಿ ಹೋಗುತ್ತೇವೋ, ಅಂಥ ಮನೆಗೆ ಯಾವ ಕೆಲಸಕ್ಕೆ ಹೋಗಿದ್ದೇವೋ, ಆ ಕೆಲಸ ಮುಗಿಸಿ ಬರಬೇಕು. ಅದನ್ನು ಬಿಟ್ಟು, ಆ ಮನೆಯ ಬಗ್ಗೆ, ಅವರ ಸಂಬಂಧಿಕರ ಬಗ್ಗೆ ಅಥವಾ ಅವರ ಆಸ್ತಿ ಅಂತಸ್ತಿನ ಬಗ್ಗೆ ಹೆಚ್ಚು ಕೇಳಬಾರದು.