Chanakya Neeti: ಪತಿ- ಪತ್ನಿ ನೆಮ್ಮದಿಯಾಗಿರಬೇಕು ಅಂದ್ರೆ ಯಾವ ರೀತಿ ಇರಬೇಕು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ನಮ್ಮ ಹಲವು ಲೇಖನಗಳಲ್ಲಿ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಚಾಣಕ್ಯರು ಪತಿ ಪತ್ನಿ ಯಾವ ತಪ್ಪು ಮಾಡುವುದರಿಂದ ಅವರ ಸಂಸಾರ ಹಾಳಾಗುತ್ತದೆ ಅನ್ನೋ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಒಬ್ಬರಿಗೊಬ್ಬರು ಗೌರವಿಸದಿರುವುದು. ಪತಿ ಪತ್ನಿ ಒಬ್ಬರಿಗೊಬ್ಬರು ಗೌರವಿಸಿದಾಗಲೇ, ಆ ದಾಂಪತ್ಯ ಉತ್ತಮವಾಗಿರುತ್ತದೆ. ನಿಮ್ಮ ಪತ್ನಿ ಅವಿದ್ಯಾವಂತೆ, ಲೋಕ ಜ್ಞಾನ ಇಲ್ಲದೇ ಇರುವವಳೇ ಆದರೂ, ನೀವು ಅವರಿಗೆ ಗೌರವಿಸಬೇಕು. ಇನ್ನು ಪತಿ ಶ್ರೀಮಂತನಾಗಲಿ, ಆಗದೇ ಇರಲಿ ಅವರಿಗೆ ಸಿಗಬೇಕಾದ ಎಲ್ಲ ಗೌರವವನ್ನು ನೀವು ನೀಡಬೇಕು. ಹೀಗೆ ಏನೇ ಆಗಿದ್ದರೂ, ಯಾರ ಎದುರು ನಿಮ್ಮ ಜೀವನ ಸಂಗಾತಿಯನ್ನು ಬಿಟ್ಟು ಕೊಡದೇ, ನೀವು ಗೌರವಿಸಿದರೆ, ನಿಮ್ಮ ಸಂಸಾರ ಉತ್ತಮವಾಗಿರುತ್ತದೆ.
ಎರಡನೇಯದಾಗಿ ಯಾವುದೇ ಸ್ಥಿತಿಯಲ್ಲಿದ್ದರೂ, ಜೀವನ ಸಂಗಾತಿಯನ್ನು ಪ್ರೀತಿಸಿ, ಕಾಳಜಿ ತೋರಿ. ಪತಿ ಪತ್ನಿ ಮಧ್ಯೆ ಎಷ್ಟೇ ಜಗಳವಾಗಿದ್ದರೂ, ಮೌನ ಮನೆ ಮಾಡಿದ್ದರು. ನೀವು ಒಬ್ಬರಿಗೊಬ್ಬರ ಬಗ್ಗೆ ಕಾಳಜಿ ಮಾಡಬೇಕು. ಇದರಿಂದ ಮೌನ ಮುರಿದು ಮಾತು ಆರಂಭವಾಗುತ್ತದೆ. ಬಳಿಕ ಜೀವನ ಸರಾಗವಾಗಿ ಸಾಗುತ್ತದೆ. ಏಕೆಂದರೆ, ತುಂಬ ದಿನ ಪತಿ ಪತ್ನಿ ಮಧ್ಯೆ ಮೌನವಿರಬಾರದು.
ಮೂರನೇಯದಾಗಿ ಇಬ್ಬರೂ ಪರಸ್ಪರ ಸಂಬಂಧಿಕರನ್ನು ಗೌರವಿಸಬೇಕು. ಕೆಲವು ಹೆಣ್ಣು ಮಕ್ಕಳು ಪತಿಯ ಬಳಿ ಅವನ ತಾಯಿ, ತಂಗಿ, ಅಕ್ಕನ ಬಗ್ಗೆ ಚಾಡಿ ಹೇಳುತ್ತಲೇ ಇರುತ್ತಾರೆ. ಇನ್ನು ಕೆಲ ಮನೆಯಲ್ಲಿ ಪುರುಷರು ಪತ್ನಿ ತವರು ಮನೆಯವರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಇಂಥ ಮಾತಿನಿಂದಲೇ ಮನೆ ಮುರಿಯುತ್ತದೆ. ಹಾಗಾಗಿ ಎಲ್ಲರನ್ನೂ ಗೌರವಿಸುವ ಗುಣ ಪತಿ ಪತ್ನಿ ಇಬ್ಬರಲ್ಲೂ ಇರಬೇಕು.