ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಈಗ ಹೊಸ ಟ್ರೆಂಡ್— ಬ್ಲೂ ಲೈನ್ ಮೇಟ್ರೊ ಎಫೆಕ್ಟ್! ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ಮಾರ್ಗ, ಬೆಂಗಳೂರಿನ ಪ್ರಾಪರ್ಟಿ ಆಟವನ್ನು ಸಂಪೂರ್ಣವಾಗಿ ಬದಲಿಸಲು ಸಜ್ಜಾಗಿದೆ.
ಒಮ್ಮೆ ಟ್ರಾಫಿಕ್ ನರಕ ಎಂದು ಕರೆಯಲ್ಪಟ್ಟ ಹೊರ ವರ್ತುಲ ರಸ್ತೆ ಈಗ “ಗೋಲ್ಡನ್ ಕಾರಿಡಾರ್” ಆಗಿ ರೂಪಾಂತರಗೊಳ್ಳುತ್ತಿದೆ. ಸಿಲ್ಕ್ ಬೋರ್ಡ್, ಎಚ್ಎಸ್ಆರ್ ಲೇಔಟ್, ಬೆಳ್ಳಂದೂರು, ಮಾರತಹಳ್ಳಿ—ಐಟಿ ಉದ್ಯೋಗಿಗಳ ಹಾಟ್ಸ್ಪಾಟ್ ಪ್ರದೇಶಗಳು ಈಗ ಹೂಡಿಕೆದಾರರ ಪ್ರಾಪರ್ಟಿಯಲ್ಲಿ ಇನ್ವೆಸ್ಟ್ ಮಾಡೋರಿಗೆ ಒಳ್ಳೆ ಅವಕಾಶ ಸಿಕ್ಕಿದೆ.
ತಜ್ಞರ ಪ್ರಕಾರ, ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಇರುವ ಮನೆಗಳು ಮತ್ತು ಫ್ಲ್ಯಾಟ್ಗಳ ಬೆಲೆಗಳು ಈಗಲೇ ಏರಿಕೆಗೆ ಚಾಲನೆ ನೀಡಿದ್ದು, 2026ರಿಂದ 2029ರೊಳಗೆ ದರಗಳು “ಸ್ಕೈ ರಾಕೆಟ್” ಆಗುವ ಸಾಧ್ಯತೆ ಇದೆ. ಬಾಡಿಗೆ ಮಾರುಕಟ್ಟೆಯಲ್ಲೂ ಇದೇ ಟ್ರೆಂಡ್ ಮುಂದುವರಿಯಲಿದೆ.
ಐಟಿ ಉದ್ಯೋಗಿಗಳಿಗೆ ಸುಲಭ ಸಂಚಾರ—ಹೂಡಿಕೆದಾರರಿಗೆ ಭಾರೀ ಲಾಭದ ನಿರೀಕ್ಷೆ ಇದೆ. ಹೀಗಾಗಿ, ಮನೆ ಖರೀದಿ ಅಥವಾ ಬಾಡಿಗೆ ಹುಡುಕಾಟದಲ್ಲಿರುವವರು ಈಗಲೇ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಒಟ್ಟಿನಲ್ಲಿ, “ಮೆಟ್ರೋ ಹತ್ತಿರ ಮನೆ” ಅನ್ನೋ ಮಾತು ಈಗ ರಿಯಲ್ ಎಸ್ಟೇಟ್ ಗೋಲ್ಡನ್ ರೂಲ್ ಆಗುತ್ತಿದ್ದು, ಬೆಂಗಳೂರು ನಗರದಲ್ಲಿ ಬ್ಲೂ ಲೈನ್ ಹೊಸ ಗೇಮ್ ಚೇಂಜರ್ ಆಗಿ ಹೊರಹೊಮ್ಮುತ್ತಿದೆ.




