Bollywood News: ನಟಿಯ ಪರ್ಸ್‌ನಿಂದ 50 ಸಾವಿರ ರೂಪಾಯಿ ಕಳ್ಳತನ: ಕದ್ದಿದ್ಯಾರು ಗೊತ್ತಾ..?

Bollywood News: ನಟಿ ರಾಶಿ ಖನ್ನಾ ಪರ್ಸ್‌ನಿಂದ 50 ಸಾವಿರ ರೂಪಾಯಿ ಕಳ್ಳತನವಾಗಿತ್ತು. ಆದರೆ ದೇವರ ದಯೆಯಿಂದ ಕೆಲ ಸಮಯದಲ್ಲೇ ಆ ಹಣ ಸಿಕ್ಕಿದ್ದು, ಹಣ ಕದ್ದವನೂ ಸಿಕ್ಕಿದ್ದಾನೆ.

ರಾಶಿ ಸಿನಿಮಾ ಶೂಟಿಂಗ್‌ಗೆ ಶೂಟಿಂಗ್ ಸೆಟ್‌ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಆಕೆ ಬಳಸುವ ಕ್ಯಾರವ್ಯಾನ್ನಲ್ಲಿ ಆಕೆ ಪರ್ಸ್ ಇಟ್ಟಿದ್ದಳು. ಅದರಲ್ಲಿ 50 ಸಾವಿರ ರೂಪಾಯಿ ಇತ್ತು. ಆದರೆ ಶೂಟಿಂಗ್ ಮಧ್ಯೆ ಆಕೆ ಬಂದು ಪರ್ಸ್ ಚೆಕ್ ಮಾಡಿದಾಗ, ಅದರಲ್ಲಿ ಹಣವಿರಲಿಲ್ಲ.

ಮ್ಯಾನೇಜರ್‌ ಬಳಿ ವಿಷಯ ಹೇಳಿ, ಇಡೀ ಶೂಟಿಂಗ್ ಸ್ಪಾಟ್ಗೆ ಬೀಗ ಹಾಕಿ ಕದ್ದಿದ್ಯಾರು ಎಂದು ಹುಡುಕಲಾಗಿದೆ. ಆಗ ಹಣ ಕದ್ದಿದ್ದು ಕ್ಯಾರವ್ಯಾನ್ ಡ್ರೈವರ್ ಎಂದು ತಿಳಿದು ಬಂದಿದೆ. ಬಳಿಕ ಹಣ ವಾಪಸ್ ಪಡೆದ ರಾಶಿ, ಕ್ಯಾರ್ವ್ಯಾನ್ ಕಂಪನಿಗೆ ವಿಷಯ ತಿಳಿಸಿ, ಡ್ರೈವರ್ ಚೇಂಜ್ ಮಾಡಿ, ಕಳ್ಳತನ ಮಾಡಿದವನಿಗೆ ಎಚ್ಚರಿಕೆ ನೀಡಿ, ಆಚೆ ಕಳಿಸಿದ್ದಾರೆ.

About The Author