ಮಂಗಳೂರು : ರವಿ ಚನ್ನಣ್ಣನವರ ಲಂಚ ಪಡೆದ ಆರೋಪಕ್ಕೆ ಸಿಲುಕಿಕೊಂಡಿದ್ದಾರೆ. ಇವರ ಬೆಂಬಲಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ (Commissioner of Police N. Shashikumar) ಅವರು ಬಂದಿದ್ದಾರೆ. ರವಿ ಚನ್ನಣ್ಣನವರು ನಿಷ್ಕಳಂಕವಾಗಿ ಹೊರ ಬರುತ್ತಾರೆ ಎಂದು ಫೇಸ್ ಬುಕ್ (Facebook) ನಲ್ಲಿ ಪ್ರತಿಕ್ರಿಯೆ ನೀಡಿದ್ಧಾರೆ.
ಅವರ ಆರೋಪದ ಸತ್ಯಾಸತ್ಯತೆ ತಿಳಿಯುವ ಮುನ್ನ ಈ ರೀತಿ ತೀರ್ಮಾನಕ್ಕೆ ಬರುವುದು ತಪ್ಪು. ರವಿ ಚೆನ್ನಣ್ಣನವರು ಕಷ್ಟದಲ್ಲಿ ಓದಿ ಮೇಲೆ ಬಂದವರು. ಅವರಿಗೆ ಅನೇಕ ಜನರು ಅಭಿಮಾನಿಗಳಿದ್ದಾರೆ. ಅವರು ಪ್ರಸಿದ್ಧ ಜನಪ್ರಿಯ ಅಧಿಕಾರಿಯಾಗಿದ್ದಾರೆ. ಅವರು ಲಕ್ಷಾಂತರ ವಿದ್ಯಾರ್ಥಿಗಳ ಮತ್ತು ಯುವಜನತೆಯ ಸ್ಪೂರ್ತಿಯಾಗಿರುವ ವ್ಯಕ್ತಿ.
ಸಾರ್ವಜಿಕ ವಲಯದಲ್ಲಿ ಈ ರೀತಿ ಕೆಲಸ ಮಾಡುವ ಅಧಿಕಾರಿಗಳ ಮೇಲೆ ಆರೋಪಗಳು ಸಾಮನ್ಯ. ಖಡಕ್ ಪೊಲೀಸ್ ಅಧಿಕಾರಿ, ವಾಗ್ಮಿಯಾಗಿ ಖ್ಯಾತಿ ಪಡೆದಿರುವ ಸಿಐಡಿ. ಎಸ್ ಪಿ ರವಿ ಡಿ.ಚನ್ನಣ್ಣನವರು ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳ ಮೇಲೆ ಆರೋಪ ಕೇಳಿಬರುತ್ತಿದೆ. ಇವರು ಆರೋಪಿಗಳಿಂದ 50 ಲಕ್ಷ ರೂ. ಲಂಚ ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಸಂತ್ರಸ್ತ ವ್ಯಕ್ತಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದು, ತನಿಖೆ ನಡೆಸುವಂತೆ ಒಳಾಡಳಿತ ಇಲಾಖೆಗೆ ಈಗಾಗಲೇ ಆದೇಶ ಮಾಡಲಾಗಿದೆ.
ಜಲ್ಲಿ ಕ್ರಷರ್ ವ್ಯವಹಾರದಲ್ಲಿ ವಂಚನೆ ಮಾಡಿದ್ದ ವ್ಯಕ್ತಿಯ ವಿರುದ್ದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಹಣ ಪಡೆದು ವಂಚನೆ ಮಾಡಿರುವ ಕುರಿತಾಗಿ ನೀಡಿದ ದೂರಿಗೆ ನ್ಯಾಯ ದೊರಕಿಸಿ ಕೊಡದೆ ಆರೋಪಿಗಳಿಂದ 50 ಲಕ್ಷ ರೂ. ಹಣ ಪಡೆದು ದೂರು ನೀಡಿದ ವ್ಯಕ್ತಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.