ರಾಮನಗರ : 2023ರ ವಿಧಾನಸಭಾ ಚುನಾವಣೆಗೆ (Assembly elections) ಇನ್ನು ಒಂದು ವರ್ಷ ಬಾಕಿಯಿದ್ದರೂ ಈಗಿನಿಂದಲೇ ರಂಗೇರಲು ಶುರುವಾಗಿದೆ. ಹಳೇಮೈಸೂರು ಭಾಗದ ಬಿಜೆಪಿ ಪ್ರಭಾವಿ ನಾಯಕ ಸಿ.ಪಿ ಯೋಗೀಶ್ವರ್ (C P Yogeshwar) 2019ರಲ್ಲಿ ಕಾಂಗ್ರೆಸ್ & ಜೆಡಿಎಸ್ ಶಾಸಕರ ಆಪರೇಷನ್ ಮಾಡಿ ಕುಮಾರಸ್ವಾಮಿಯನ್ನ (H. D. Kumaraswamy) ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಯಡಿಯೂರಪ್ಪರನ್ನ (BS Yediyurappa) ಸಿಎಂ ಮಾಡಿದ್ರು. ಇದೀಗ ತನ್ನ ವಿರುದ್ಧ ಚನ್ನಪಟ್ಟಣದಲ್ಲಿ ತೊಡೆತಟ್ಟಿ ಶಾಸಕರಾಗಿದ್ದು ಕುಮಾರಸ್ವಾಮಿಗೆ ಇದೀಗ ಯೋಗೀಶ್ವರ್ ಶಾಕ್ ಕೊಟ್ಟಿದ್ದಾರೆ. 2018 ರ ಚುನಾವಣೆಯಲ್ಲಿ ಯೋಗೀಶ್ವರ್ ವಿರುದ್ಧ ಗೆಲುವಿಗೆ ಕಾರಣರಾಗಿದ್ದ ಕ್ಷೇತ್ರದ ಜೆಡಿಎಸ್ ಸ್ಥಳೀಯ ಮುಖಂಡರು ಇದೀಗ ಬಿಜೆಪಿ ಸೇರ್ಡೆಯಾಗಿದ್ದಾರೆ. ಕ್ಷೇತ್ರದಲ್ಲಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡವರನ್ನ ಸಿಪಿ ಯೋಗೀಶ್ವರ್ ಕಮಲ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಿದ್ದಾರೆ. ಒಕ್ಕಲಿಗ ಸಂಘ ಹಾಗೂ ಬಮೂಲ್ ನಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದ ಜೆಡಿಎಸ್ ಪ್ರಭಾವಿ ಮುಖಂಡ ಲಿಂಗೇಶ್ ಕುಮಾರ್ (Lingesh Kumar) ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ (CM Bommai) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ. ಇದೇ ವೇಳೆ ಮುದುಗೆರೆ ಜಯಕುಮಾರ್, ಚಕ್ಕೆರೆ ಜಯಪ್ರಕಾಶ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಚನ್ನಪಟ್ಟಣದಿಂದ ಶುರು ಹಳೇ ಮೈಸೂರು ಪೂರ್ತಿ ಆಪರೇಷನ್ ಗೆ ಯೋಗೀಶ್ವರ್ ಸಿದ್ಧತೆ..!
ಸಿ.ಪಿ ಯೋಗೀಶ್ವರ್ ತೀವ್ರ ಹಠವಾದಿ ರಾಜಕಾರಣಿ. ಹಳೇ ಮೈಸೂರಿನಲ್ಲಿ ಡಿಕೆಶಿ ಹಾಗೂ ಹೆಚ್ಡಿಕೆ ವಿರುದ್ಧ (Against Dikeshi and HDK) ತೊಡೆ ತಟ್ಟಿ ರಾಜಕಾರಣ ಮಾಡುವ ಶಕ್ತಿ ಇರೋದು ಬಿಜೆಪಿಯಲ್ಲಿ ಸಿ.ಪಿ ಯೋಗೀಶ್ವರ್ ಗೆ ಮಾತ್ರ. ಈ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಹಳೇ ಮೈಸೂರಿನಲ್ಲಿ ಪಕ್ಷ ಸಂಘಟನೆಗೆ ಸಿ.ಪಿ ಯೋಗೀಶ್ವರ್ ಬಳಸಿಕೊಳ್ಳಲು ಮುಂದಾಗಿದೆ. ಬೆಂಗಳೂರು ಹೊರತು ಪಡಿಸಿ ಹಳೇ ಮೈಸೂರು ಭಾಗದ 61 ವಿಧಾನಸಭಾ ಕ್ಷೇತ್ರಗಳ ಪೈಕಿ 2018 ರಲ್ಲಿ ಬಿಜೆಪಿ ಗೆದ್ದಿದ್ದು 11 ಕ್ಷೇತ್ರಗಳು ಮಾತ್ರ. ಕಾಂಗ್ರೆಸ್ 19 ಸ್ಥಾನ ಗಳಿಸಿದ್ರೆ ಜೆಡಿಎಸ್ 29 ಸ್ಥಾನಗಳನ್ನ ಗಳಿಸಿತ್ತು. ಈ ಹಿನ್ನೆಲೆ ಬಿಜೆಪಿ ಹೈಕಮಾಂಡ್ 2023ಕ್ಕೆ ಶೇಕಡಾ 50% ಕ್ಷೇತ್ರಗಳಲ್ಲಿ ಗೆಲ್ಲಲು ತಂತ್ರ ರೂಪಿಸಿದೆ. ಈ ಹಿನ್ನೆಲೆ ಸೈನಿಕ ಸ್ವಯಂ ಪ್ರೇರಿತವಾಗಿ ಗೆಲುವಿನ ತಂತ್ರ ರೂಪಿಸುವ ಹೊಣೆಗಾರಿಗೆ ಹೊತ್ತುಕೊಂಡಿದ್ದಾರಂತೆ. ಪಕ್ಷ ಬಲಪಡಿಸುವ ಯೋಗೀಶ್ವರ್ ಕಾರ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಕಟೀಲ್ ಹಾಗೂ ಹೈಕಮಾಂಡ್ ಸಹ ಸಾಥ್ ನೀಡಿದೆ. ಸಿ.ಪಿ ಯೋಗೀಶ್ವರ್ ಗೆ ಮುಂದಿನ ಕ್ಯಾಬಿನೆಟ್ ಪುನರ್ ರಚನೆ ವೇಳೆ ಸಚಿವ ಸ್ಥಾನ ಸಿಕ್ಕರೆ ಹಳೇ ಮೈಸೂರಿನಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಸಹ ಕೇಳಿ ಬರ್ತಿದೆ. ಪಕ್ಷ ಸಚಿವ ಸ್ಥಾನ ಕೊಡಲಿ ಬಿಡಲಿ ನಾನು 2023 ಕ್ಕೆ ಬಿಜೆಪಿಯನ್ನ ಅಧಿಕಾರಕ್ಕೆ ತರುವುದೇ ಮುಖ್ಯ ಗುರಿ ಅಂತ ಮುನ್ನಗುತ್ತಿದ್ದಾರೆ. ಈ ನಡುವೆ ಕುಮಾರಸ್ವಾಮಿ ಹಾಗೂ ಡಿಕೆಶಿ ಯಾವ ರೀತಿ ಪ್ರತ್ಯುತ್ತರ ಕೊಡ್ತಾರೆ ಅಂತ ಕಾದು ನೋಡಬೇಕಿದೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ,ಬೆಂಗಳೂರು.