ಬೆಂಗಳೂರು: ಸ್ವೀಕರ್ ಗೆ ರಾಜೀನಾಮೆ ಸಲ್ಲಿಸಿ ತೆರಳುತ್ತಿದ್ದ ಶಾಸಕ ಸುಧಾಕರ್ ರನ್ನು ಕಾಂಗ್ರೆಸ್ ಮುಖಂಡರು ಕೂಡಿ ಹಾಕಿದ್ದಾರೆ ಅಂತ ಆರೋಪಿಸಿ ಬಿಜೆಪಿ ವಿಧಾನಸೌಧದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ವಾಗ್ವಾದಕ್ಕಿಳಿದು ಶಕ್ತಿ ಸೌಧದಲ್ಲಿ ಗದ್ದಲಕ್ಕೆ ನಾಂದಿ ಹಾಡಿದೆ.
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಸುಧಾಕರ್ ರಾಜೀನಾಮೆ ನೀಡಿ ಸ್ಪೀಕರ್ ಕಚೇರಿಯಿಂದ ಹೊರಬರುತ್ತಿದ್ದಂತೆಯೇ ಪ್ರಿಯಾಂಕ್ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಡ್ಡಹಾಕಿ ಅವರನ್ನು ಸಮಾಧಾನಪಡಿಸೋ ಸಲುವಾಗಿ ವಿಧಾನಸೌಧದ ಕೆ.ಜೆ ಜಾರ್ಜ್ ಕಚೇರಿಗೆ ಕರೆದೊಯ್ದರು. ಇದನ್ನು ಗಮನಿಸಿದ ಬಿಜೆಪಿ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ನ ಮುಖಂಡರೊಂದಿಗೆ ವಾಗ್ವಾದಕ್ಕಿಳಿದ್ರು. ಪರಿಸ್ಥಿತಿ ಮಿತಿ ಮೀರಿ ಶಕ್ತಿಸೌಧದಲ್ಲಿ ಗಲಾಟೆಯೇ ನಡೆದುಹೋಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದು ಸ್ಥಳಕ್ಕೆಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇನ್ನು ಬಿಜೆಪಿ ಶಾಸಕರು ವಿಧಾನಸೌಧದತ್ತ ಆಗಮಿಸುತ್ತಿದ್ದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಇನ್ನು ರಾಜೀನಾಮೆ ನೀಡಿರೋ ಶಾಸಕ ಸುಧಾಕರ್ ರೊಂದಿಗೆ ಸಿದ್ದರಾಮಯ್ಯ , ಪ್ರಿಯಾಂಕ್ ಖರ್ಗೆ ಮತ್ತು ದಿನೇಶ್ ಗುಂಡೂರಾವ್ ಚರ್ಚೆ ಮುಂದುವರಿದಿದೆ.
ತಮ್ಮನ ಸರ್ಕಾರ ಪತನವಾಗುತ್ತಿರೋವಾಗ, ಅಣ್ಣ ಏನ್ ಮಾಡಿದ್ರು ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ