ರಾಯಚೂರು: ಚೀನಾದಲ್ಲಿ ಎದುರಾಗಿರೋ ವಿದ್ಯುತ್ ಸಮಸ್ಯೆ ಇದೀಗ ರಾಜ್ಯವನ್ನೂ ಕಾಡೋ ಭೀತಿ ಶುರುವಾಗಿದೆ. ಯಾಕಂದ್ರೆ ಇಡೀ ರಾಜ್ಯಕ್ಕೆ ಶೇಕಡಾ 45 ರಷ್ಟು ವಿದ್ಯುತ್ ಪೂರೈಕೆ ಮಾಡೋ ರಾಯಚೂರಿನ ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಕೊರೆತೆ ಉಂಟಾಗಿದೆ. ಹೀಗಾಗಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಖಡ್ಡಾಯವಾಗೋ ಭೀತಿ ಎದುರಾಗಿದೆ.
ಹೌದು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲಿನ ಅಭಾವ ಎದುರಾಗಿದೆ. ಇಡೀ ರಾಜ್ಯಕ್ಕೆ ಶೇಕಡಾ 45ರಷ್ಟು ವಿದ್ಯುತ್ ಪೂರೈಕೆ ಮಾಡೋ ಈ ವಿದ್ಯುತ್ ಉತ್ಪಾದನಾ ಕೇಂದ್ರದ 8 ಘಟಕಗಳಲ್ಲಿ 4 ಘಟಕಗಳು ಸದ್ಯ ಉತ್ಪಾದನೆ ಸ್ಥಗಿತಗೊಳಿಸಿವೆ.
ಕಲ್ಲಿದ್ದಲು ಇಲ್ಲದೆ ಇಲ್ಲಿ ಘಟಕಗಳು ಬಂದ್ ಆಗಿದ್ದು ವಿದ್ಯುತ್ ಉತ್ಪಾದನೆ ಕುಂಠಿತವಾಗ್ತಿದೆ.1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ರಾಯಚೂರಿನ ಆರ್ ಟಿ ಪಿ ಎಸ್ ನಲ್ಲಿ ಸದ್ಯ 480 ರಿಂದ 500 ಮೆಗಾ ವ್ಯಾಟ್ ಮಾತ್ರ ವಿದ್ಯುತ್ ಉತ್ಪಾದನೆಯಾಗ್ತಿದೆ.
ಸದ್ಯಕ್ಕೆ ಇಲ್ಲಿ 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಮಾತ್ರ ಸ್ಟಾಕ್ ಇದ್ದು, ನಾಲ್ಕು ಘಟಕಗಳಿಗೆ ನಿನ್ನೆಗೆ ಮಾತ್ರ ಸಾಕಾಗಿದೆ. ಇನ್ನು ಈ ಉತ್ಪಾದನಾ ಕೇಂದ್ರದ 8 ಘಟಕಗಳಿಗೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲಿನ ಅಗತ್ಯವಿದೆ.
ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕು ಕಲ್ಲಿದ್ದಲು ಪೂರೈಕೆಯಾಗ್ತಿತ್ತು,
ಆದ್ರೀಗ ಕೇವಲ 3 ರಿಂದ 4 ರೇಕು ಕಲ್ಲಿದ್ದಲು ಬರ್ತಿದೆ. ಇನ್ನೂ ವೈಟಿಪಿಎಸ್ ನಲ್ಲೂ ಒಂದೇ ಘಟಕ ಕಾರ್ಯನಿರ್ವಹಿಸುತ್ತಿದ್ದು ಇವ್ವಿ ವಿದ್ಯುತ್ ಉತ್ಪಾದನೆ ಕುಸಿದಿದೆ. ಇಲ್ಲೂ ಕೂಡ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಎರಡು ದಿನಕ್ಕೆ ಮಾತ್ರ ಸಾಕಾಗಲಿದೆ.
ಒಟ್ಟಾರೆ ಹೆಚ್ಚಾಗ್ತಿರೋ ಕಲ್ಲಿದ್ದಲಿನ ಕೊರತೆಯಿಂದಾಗಿ ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರ ಭಾಗಶಃ ವಿದ್ಯುತ್ ಉತ್ಪಾದನೆಯನ್ನೇ ನಿಲ್ಲಿಸಿದೆ. ಹೀಗಾಗಿ ರಾಜ್ಯದಲ್ಲೂ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆ ಹೆಚ್ಚಾಗಿದ್ದು, ಜನ ಕತ್ತಲಲ್ಲಿ ಕಾಲ ಕಳೆಯುವಂತಾಗೋ ಆತಂಕ ಎದುರಾಗಿದೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ-ರಾಯಚೂರು