Monday, April 7, 2025

Latest Posts

‘ಚಿತ್ರರಂಗದಲ್ಲಿ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತಾ?’

- Advertisement -

Movie News: ಬರೀ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕವೇ ಸುದ್ದಿಯಾಗುವ ನಟ ಚೇತನ್ ಅಹಿಂಸಾ, ಇದೀಗ ನಾಡಪ್ರಭು ಕೆಂಪೇಗೌಡರ ಬಗ್ಗೆ ಹೇಳಿಕೆ ಕೊಟ್ಟು, ಸುದ್ದಿಯಾಗಿದ್ದಾರೆ. ಅಲ್ಲದೇ, ಹಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಚೇತನ್ ತಮ್ಮ ಟ್ವೀಟ್ ಅಕೌಂಟ್‌ನಲ್ಲಿ, ಕೆಂಪೇಗೌಡ ಜಾತಿ, ಲಾಭಿಗಳ ಪ್ರಭಾವದಿಂದಾಗಿ, ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ತಿರುಗೇಟು ನೀಡಿ, ಟ್ವೀಟ್ ಮಾಡಿರುವ ನವರಸನಾಯಕ ಜಗ್ಗೇಶ್, ಕೆಂಪೇಗೌಡ ವಿಜಯನಗರ ಸಾಮ್ರಾಜ್ಯದ ಒಡೆಯನ ತೊಡೆಯ ಮೇಲೆ ಕೂತು ಬೆಳೆದ ಮಗು.. ಮುಂದೆ ಸಾಮಾಜಿಕ ನ್ಯಾಯ ಎತ್ತಿ ಹಿಡಿದು ಬೆಂದಕಾಳೂರು ಬೆಳಗಿಸಿದ ಸಾರ್ವಭೌಮ.. ಇಂದಿನ ನಾಯಿ ನರಿ ಬೊಗಳಿದರೆ ಅವರ ಇತಿಹಾಸ ಬದಲಾಗುವುದೆ! ಚಿತ್ರರಂಗದಲ್ಲಿ ನೆಲೆಕಾಣದೆ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತ? ಕಾನೂನಿನಿದೆ ಎಚ್ಚರ..!! ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಹಿಂಸಾ ಚೇತನ್ ವಿರುದ್ಧ ಜಗ್ಗೇಶ್ ಅಸಮಾಧಾನ ಹೊರಹಾಕಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಚೇತನ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss